More

  ಕಳ್ಳತನವಾಗಿದ್ದ 15 ಲಕ್ಷ ಮೌಲ್ಯದ ಕೃಷಿ ಯಂತ್ರೋಪಕರಣ ವಶ

  ದಾವಣಗೆರೆ : ಕಳ್ಳತನವಾಗಿದ್ದ 15 ಲಕ್ಷ ರೂ. ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
   ತಾಲೂಕಿನ ಶಿವಪುರ ಗ್ರಾಮದ ಮನೆಯ ಬಳಿ ಇದ್ದ 40 ಸಾವಿರ ರೂ. ಬೆಲೆಯ ಒಂದು ಸ್ಲಾಚರ್, 50 ಸಾವಿರ ರೂ. ಮೌಲ್ಯದ ಒಂದು ಬಾಂಡ್ಲಿ ಏ. 6 ರಂದು ಕಳ್ಳತನವಾಗಿದ್ದವು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
   ಪ್ರಕರಣ ಭೇದಿಸಲು ಅಪರ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಸಂತೋಷ್ ಹಾಗೂ ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್, ಪಿಎಸ್‌ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿ ದೇವೇಂದ್ರನಾಯ್ಕ, ನಾಗಭೂಷಣ್, ಅಣ್ಣಯ್ಯ, ಮಹಮ್ಮದ್ ಯುಸುಫ್ ಅತ್ತಾರ್, ವೀರೇಶ್ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ 3 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
   ಈ ಪ್ರಕರಣ ಸೇರಿ ಗ್ರಾಮಾಂತರ ಠಾಣಾ ಸರಹದ್ದಿನ 6 ಕಡೆ, ಮಾಯಕೊಂಡ ಠಾಣಾ ಸರಹದ್ದಿನ 3 ಕಡೆ  ಕೃತ್ಯವೆಸಗಿದ್ದ 15 ಲಕ್ಷ ರೂ. ಮೌಲ್ಯದ 3 ಟ್ರಾಲಿ, 3 ರೋಟವೇಟರ್, 2 ಬಾಂಡ್ಲಿ, 3 ಬಲರಾಮ, 1 ಸ್ಲ್ಯಾಶರ್, ಕೃತ್ಯಕ್ಕೆ ಬಳಸಿದ್ದ ಟ್ರಾೃಕ್ಟರ್ ಇಂಜಿನ್ ವಶಪಡಿಸಿಕೊಂಡು ಬಾಲಕರನ್ನು ಸರ್ಕಾರಿ ಪರಿವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts