More

    ಮದುವೆಯಲ್ಲಿ ಮತದಾನ ಜಾಗೃತಿ

    ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ವಣಕ್ಯಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿರೇಮುರಾಳ ಗ್ರಾಪಂ ನೌಕರ ಹಣಮಂತರಾಯ ಮಹೇಂದ್ರಕರ್ ಅವರ ಮದುವೆ ಸಮಾರಂಭದಲ್ಲಿ ಗ್ರಾಪಂ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕರಪತ್ರ ಹಂಚಿಕೆ ಮಾಡಿ ಮದುವೆಗೆ ಬಂದಿದ್ದ ಎಲ್ಲರಲ್ಲೂ ಮತದಾನ ಜಾಗೃತಿ ಮೂಡಿಸಲಾಯಿತು.

    ತಾಪಂ ಸಹಾಯಕ ನಿರ್ದೇಶಕ (ಗ್ರಾಉ) ಪಿ.ಎಸ್.ಕಸನಕ್ಕಿ ಮಾತನಾಡಿ, ಮತದಾರರ ಅನುಕೂಲಕ್ಕಾಗಿ ಪ್ರತಿಯೊಂದು ಮತಗಟ್ಟೆಯಲ್ಲಿ ಮತದಾನ ಸುಗಮವಾಗಿ ನಡೆಯಲು ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಈ ಭಾಗದಲ್ಲಿ ಎರಡನೇ ಹಂತ ಮೇ 7 ರಂದು ಮತದಾನ ನಡೆಯಲಿದೆ. ಮತದಾನ ಮಾಡುವುದು ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕು ಮತ್ತು ಕರ್ತವ್ಯವಾಗಿದೆ. ಯಾರೂ ಮತದಾನದಿಂದ ದೂರ ಉಳಿಯದೆ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮಹತ್ವ ಎತ್ತಿ ಹಿಡಿಯಬೇಕು ಎಂದರು.

    ನವದಂಪತಿ ಹಣಮಂತರಾಯ ಮಹೇಂದ್ರಕರ್ ಮತ್ತು ಅವರ ಪತ್ನಿ ರೇಣುಕಾ ಅವರಿಗೂ ಕರಪತ್ರ ವಿತರಿಸಿ ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು. ಪ್ರತಿಯೊಬ್ಬರೂ ಕರಪತ್ರದ ಮಾಹಿತಿ ಓದಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಬೇಕು ಎಂದು ಕೋರಲಾಯಿತು.

    ಮದುವೆಯಲ್ಲಿ ಸೇರಿದ್ದ 400ಕ್ಕೂ ಅಧಿಕ ಜನರಿಗೆ ಗ್ರಾಪಂ ಪಿಡಿಒ ಕೆ.ಎಚ್.ಕುಂಬಾರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ತಾಪಂ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಪಂ ಎಸ್‌ಡಿಎ ಎನ್.ಜಿ.ಬಿರಾದಾರ, ಸಂಗಮೇಶ ಕೂಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts