ಭೋಪಾಲ್: ಗಂಡ ತನ್ನ ಪತ್ನಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದನ್ನು ಅತ್ಯಾಚಾರ ಎಂದು ಹೇಳಲಾಗದು. ಏಕೆಂದರೆ, ಭಾರತೀಯ ಕಾನೂನಿನಲ್ಲಿ ವೈವಾಹಿಕ ಅತ್ಯಾಚಾರವನ್ನು ಪರಿಗಣಿಸಿಲ್ಲ ಮತ್ತು ಇಂತಹ ಪ್ರಕರಣಗಳಲ್ಲಿ ಪತ್ನಿಯ ಒಪ್ಪಿಗೆ ಅಪ್ರಪಸ್ತುತ ಎಂದು ಮಧ್ಯ ಪ್ರದೇಶದ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಮೇ 1 ರಂದು ಇಂಥದ್ದೊಂದು ತೀರ್ಪು ಪ್ರಕಟವಾಗಿದೆ. ನನ್ನ ಗಂಡ ಅನೇಕ ಸಂದರ್ಭಗಳಲ್ಲಿ ನನ್ನ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ಗಂಡನ ವಿರುದ್ಧವೇ ಮಹಿಳೆ ದಾಖಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ. ಪತಿಯು ತನ್ನ ಪತ್ನಿಯೊಂದಿಗೆ ಗುದ ಸಂಭೋಗದಲ್ಲಿ ತೊಡಗಿದರೆ ಅದು ಅತ್ಯಾಚಾರವಾಗುವುದಿಲ್ಲ ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.
ಐಪಿಸಿಯ ಸೆಕ್ಷನ್ 375ರ ಅಡಿಯಲ್ಲಿ ‘ಅತ್ಯಾಚಾರ’ ವ್ಯಾಖ್ಯಾನದ ತಿದ್ದುಪಡಿ ಪ್ರಕಾರ, ಮಹಿಳೆಯ ಜತೆಗಿನ ಬಲವಂತದ ಗುದ ಸಂಭೋಗವು ಕೂಡ ಅಪರಾಧವಾಗಿದೆ. ಆದರೆ, ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂತರವಿರುವ ಹೆಂಡತಿಯೊಂದಿಗೆ ಯಾವುದೇ ರೀತಿಯ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ. ಈ ಸಂದರ್ಭಗಳಲ್ಲಿ ಪತಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆಗೆ ಪತ್ನಿ ಅನುಮತಿ ನೀಡದಿರುವುದು ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಇಲ್ಲಿಯವರೆಗೂ ಎಲ್ಲಿಯೂ ವೈವಾಹಿಕ ಅತ್ಯಾಚಾರವನ್ನು ಪರಿಗಣಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಜಿಎಸ್ ಅಹ್ಲುವಾಲಿಯಾ ಪ್ರಕಾರ, ಕಾನೂನುಬದ್ಧವಾಗಿ ವಿವಾಹವಾದ ಪತ್ನಿಯೊಂದಿಗೆ ವಾಸಿಸುವ ಪತಿಯು ಅಸ್ವಾಭಾವಿಕ ಲೈಂಗಿಕತೆಯನ್ನು ಹೊಂದುವುದರಿಂದ ಐಪಿಸಿಯ ಸೆಕ್ಷನ್ 377ರ ಅಡಿಯಲ್ಲಿ ಅಪರಾಧವಲ್ಲ ಎಂದು ಹೇಳಿದ್ದಾರೆ. ಆದರೆ, ಕಾನೂನಿನ ಪ್ರಕಾರ ದಂಪತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿ, ಪ್ರತ್ಯೇಕವಾಗಿ ವಾಸಿಸುವಂತಹ ಸಂದರ್ಭದಲ್ಲಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಐಪಿಸಿಯ ಸೆಕ್ಷನ್ 376ಬಿ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಅಂದಹಾಗೆ ಮಧ್ಯಪ್ರದೇಶ ಹೈಕೋರ್ಟ್ 2019ರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಪತ್ನಿಯು ತನ್ನ ಪತಿ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದಳು. ಎರಡನೇ ಬಾರಿಗೆ ತನ್ನ ಗಂಡನ ಮನೆಗೆ ಹಿಂದಿರುಗಿದಾಗ, ಆತ ತನ್ನೊಂದಿಗೆ ಅನೇಕ ಸಂದರ್ಭಗಳಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಳು. ಬಳಿಕ ಪತ್ನಿಯ ಎಫ್‌ಐಆರ್ ಪ್ರಶ್ನಿಸಿ ಮತ್ತು ಅದನ್ನು ವಜಾಗೊಳಿಸುವಂತೆ ವ್ಯಕ್ತಿಯು ಹೈಕೋರ್ಟ್ ಮೆಟ್ಟಿಲೇರಿದ್ದನು. ತನ್ನ ಮತ್ತು ಪತ್ನಿಯ ನಡುವೆ ಯಾವುದೇ ಅಸ್ವಾಭಾವಿಕ ಲೈಂಗಿಕತೆಯು ಐಪಿಸಿಯ ಸೆಕ್ಷನ್ 377ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಅವರು ವಾದಿಸಿದ್ದನು. ನ್ಯಾಯಾಲಯ ಆತನ ವಾದವನ್ನು ಪುರಷ್ಕರಿಸಿ, ಪತ್ನಿ ದಾಖಲಿಸಿದ್ದ ಎಫ್‌ಐಆರ್ ವಜಾಗೊಳಿಸಿದೆ. (ಏಜೆನ್ಸೀಸ್)
ಅರುಂಧತಿ ಚಿತ್ರದ ಬಾಲನಟಿ ಈಗ ಬೋಲ್ಡ್ ಬ್ಯೂಟಿ! ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ದಿವ್ಯಾ
ನಮ್ಮಿಂದ ನೋಡಲು ಆಗ್ತಿಲ್ಲ… ನಮಗಂತೂ ತುಂಬಾ ಖುಷಿ! ಹಾರ್ದಿಕ್ಗೆ ಇದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ
ಭಾವಿ ಪತ್ನಿ ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ವೆಬ್ ಸರಣಿ ಬಗ್ಗೆ ನಟ ಸಿದ್ಧಾರ್ಥ್ ಆಡಿರುವ ಮಾತುಗಳು ವೈರಲ್!