ಭಾವಿ ಪತ್ನಿ ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ವೆಬ್​ ಸರಣಿ ಬಗ್ಗೆ ನಟ ಸಿದ್ಧಾರ್ಥ್​ ಆಡಿರುವ ಮಾತುಗಳು ವೈರಲ್!​

Aditi Rao
Published on

ಹೈದರಾಬಾದ್​: ನಟ ಸಿದ್ಧಾರ್ಥ್​ಗೆ ತಮಿಳು ಹಾಗೂ ತೆಲುಗಿನಲ್ಲಿ ಒಳ್ಳೆಯ ಕ್ರೇಜ್ ಇದೆ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ಸಿದ್ಧಾರ್ಥ್​, ಶೀಘ್ರದಲ್ಲೇ ಎರಡನೇ ಮದುವೆ ಸಹ ಆಗಲಿದ್ದಾರೆ. ಇತ್ತೀಚೆಗಷ್ಟೇ ಸಿದ್ಧಾರ್ಥ್​ ಅವರು ಸ್ಟಾರ್ ನಟಿ ಅದಿತಿ ರಾವ್ ಹೈದರಿ ಅವರೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಹಲವರು ಭಾವಿಸಿದ್ದರು. ಆದರೆ, ನಮ್ಮಿಬ್ಬರ ನಡುವೆ ನಿಶ್ಚಿತಾರ್ಥ ಮಾತ್ರ ಆಗಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಹಿರಿಯರು ನಿರ್ಧರಿಸಿದ ಸಮಯದಲ್ಲಿ ಶೀಘ್ರದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ. ಇದರ ನಡುವೆ ಇತ್ತೀಚಿಗೆ ಅದಿತಿ ರಾವ್ ಹೈದರಿ ನಟಿಸಿರುವ ವೆಬ್ ಸೀರೀಸ್ ಒಟಿಟಿಯಲ್ಲಿ ಸಂಚಲನ ಮೂಡಿಸಿದೆ. ಸಿದ್ಧಾರ್ಥ್ ಅವರು ಈ ವೆಬ್​ ಸೀರೀಸ್​ ವಿಮರ್ಶೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ಅದಿತಿ ರಾವ್ ಹೈದರಿ, ಮನಿಶಾ ಕೊಯಿರಾಲಾ ಮತ್ತು ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಹೀರಾ ಮಂಡಿ: ದಿ ಡೈಮಂಡ್ ಬಜಾರ್' ವೆಬ್ ಸರಣಿಯು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ವೆಬ್ ಸರಣಿಯು ಈಗಾಗಲೇ ಅನೇಕ ಜನರಿಂದ ಪಾಸಿಟಿವ್​ ವಿಮರ್ಶೆಗಳನ್ನು ಪಡೆಯುತ್ತಿದೆ. 200 ಕೋಟಿ ರೂ. ಬಜೆಟ್‌ನೊಂದಿಗೆ ನಿರ್ಮಾಣವಾಗಿದ್ದು, ಭಾರತೀಯ ಸಿನಿ ಉದ್ಯಮದಲ್ಲೇ ಅತ್ಯಂತ ದುಬಾರಿ ವೆಬ್ ಸರಣಿ ಎಂದು ಹೇಳಲಾಗುತ್ತದೆ. ಈ ವೆಬ್ ಸರಣಿಯನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ಈ ಸರಣಿಯ ನಿರ್ಮಾಪಕರು ಕೂಡ ಅವರೇ. ಪ್ರಸ್ತುತ, ಈ ಸರಣಿಯು OTT ನಲ್ಲಿ ತುಂಬಾ ವೈರಲ್ ಆಗಿದೆ. ಇತ್ತೀಚೆಗೆ ಸಿದ್ಧಾರ್ಥ್ ಕೂಡ ಈ ಹಿರಾಮಂಡಿ ವೆಬ್ ಸರಣಿಯ ಬಗ್ಗೆ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಈ ಸರಣಿಯ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಹೀರಾಮಂಡಿ: ದಿ ಡೈಮಂಡ್ ಬಜಾರ್ ವೆಬ್ ಸರಣಿಯಲ್ಲಿ ಅದಿತಿ ರಾವ್ ಹೈದರಿ ಅವರು ಬಿಬ್ಬೋಜನ್ ಎಂಬ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸರಣಿಯ ಬಗ್ಗೆ ಸಿದ್ಧಾರ್ಥ್ ಉತ್ತಮ ವಿಮರ್ಶೆಯನ್ನು ನೀಡಿದ್ದಾರೆ. “ನಾವು ಕೂಡ ಸಂಜಯ್ ಲೀಲಾ ಬನ್ಸಾಲಿಯವರ ಕಾಲಮಾನದಲ್ಲಿ ಇರುವುದಕ್ಕೆ ಸಂತೋಷಪಡಬೇಕು. ಈ ವೆಬ್ ಸೀರಿಸ್​ನಲ್ಲಿ ಸೌಂದರ್ಯ, ಸಂಗೀತ, ನಟನೆ ಮತ್ತು ಕತೆ ಎಲ್ಲವೂ ಅದ್ಭುತವಾಗಿದೆ. ಆ ಕಾಲದ ಕಟ್ಟುಪಾಡುಗಳನ್ನು ಚಿತ್ರಿಸಿರುವ ಒಳ್ಳೆಯ ನಾಟಕ ಇದು. ಈ ಸರಣಿಯನ್ನು ಹೃದಯ ಸ್ಪರ್ಶಿಸುವ ಸಂಗೀತ ಮತ್ತು ಮೋಡಿಮಾಡುವ ದೃಶ್ಯಗಳೊಂದಿಗೆ ಪ್ರಸ್ತುತಪಡಿಸಲಾಗಿದೆ.

Aditi Rao 1

ಚಿತ್ರದ ಪ್ರೀತಿ ಮತ್ತು ಸ್ವಾತಂತ್ರ್ಯದ ಕಥೆ ಮನಮುಟ್ಟುತ್ತದೆ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ಈ ಸರಣಿಯು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ಸಿದ್ಧಾರ್ಥ್ ತಮ್ಮ ಸಣ್ಣ ಮತ್ತು ತೀಕ್ಷ್ಣವಾದ ವಿಮರ್ಶೆಯಲ್ಲಿ ಹೇಳಿದರು. ಈ ಸರಣಿಯನ್ನು ತುಂಬಾ ಇಷ್ಟಪಟ್ಟಿರುವುದಾಗಿ ತಿಳಿಸಿದರು ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಲು ಶಿಫಾರಸು ಸಹ ಮಾಡಿದರು.

ಈ ಸರಣಿಯ ಕತೆ ವಿಚಾರಕ್ಕೆ ಬಂದರೆ, ಈ ವೆಬ್ ಸರಣಿಯು ಪ್ರೀತಿ, ಸ್ವಾತಂತ್ರ್ಯ, ಅಸಾಮಾನ್ಯ ಮಹಿಳೆಯರು, ಅವರ ಆಸೆಗಳು, ಅವರ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ದೃಶ್ಯ ರೂಪವಾಗಿದೆ ಎಂದು ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net