More

    ಬೇಸಿಗೆ ಬಿಸಿ ತಣಿಸಲು ಪೆಟ್ರೋಲ್​ ಬಂಕ್​ ಮಾಲೀಕನ ಐಡಿಯಾಗೆ ಫಿದಾ! ಬಂಕ್​ ಮುಂದೆ ಜನವೋ ಜನ

    ಹೈದರಾಬಾದ್​: ಸದ್ಯ ದೇಶದೆಲ್ಲೆಡೆ ಬಿರು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸೂರ್ಯನು ಬೆಂಕಿಯ ಉಂಡೆಯಂತಾಗಿದ್ದಾನೆ. ಧಗೆಯ ತೀವ್ರತೆಗೆ ಜನರು ತತ್ತರಿಸಿ ಹೋಗಿದ್ದು, ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ. ಪ್ರಸ್ತುತ ತಾಪಮಾನ 40 ರಿಂದ 47 ಡಿಗ್ರಿ ಇದೆ. ಬಿಸಿಲಿನಿಂದ ಪಾರಾಗಲು ಜನರು ಹಲವು ಉಪಾಯಗಳನ್ನು ಅನುಸರಿಸುತ್ತಿದ್ದಾರೆ. ಇದರ ನಡುವೆ ಜನರು ಬಿಸಿಲಿನಿಂದ ಪಡುವ ಕಷ್ಟವನ್ನು ಗಮನಿಸಿದ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ವಿನೂತನ ಐಡಿಯಾದೊಂದಿಗೆ ಜನರಿಗೆ ನರವಾಗಿದ್ದಾರೆ.

    ತೆಲಂಗಾಣ ರಾಜ್ಯವು ಹೆಚ್ಚಿನ ತಾಪಮಾನದೊಂದಿಗೆ ಉರಿಯುವ ಕುಲುಮೆಯಾಗಿದೆ. ಬೆಳಗ್ಗೆ 9 ಗಂಟೆಯಿಂದಲೇ ಬಿಸಿಲಿನ ಧಗೆ ಶುರುವಾಗುತ್ತಿದೆ. ಜನರು ಹೊರಬರಲು ಪರದಾಡುತ್ತಿದ್ದಾರೆ. ದಾಖಲೆಯ ತಾಪಮಾನ ದಾಖಲಾಗುತ್ತಿರುವುದರಿಂದ ಹವಾಮಾನ ಇಲಾಖೆ ಆಯಾ ಪ್ರದೇಶಗಳಿಗೆ ಯಲ್ಲೋ ಮತ್ತು ರೆಡ್​ ಅಲರ್ಟ್​ ನೀಡಿದೆ. ಇದರ ನಡುವೆ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇದರ ನಡುವೆ ಪೆಟ್ರೋಲ್​ ಬಂಕ್​ ಮಾಲೀಕನ ಐಡಿಯಾ ಎಲ್ಲರ ಗಮನ ಸೆಳೆದಿದೆ.

    ಕರೀಂನಗರದ ಜ್ಯೋತಿನಗರ ಮಲ್ಕಾಪುರ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಹೊಸ ಐಡಿಯಾದೊಂದಿಗೆ ಗ್ರಾಹಕರಿಗೆ ತಂಪೆರೆಯುತ್ತಿದ್ದಾನೆ. ತನ್ನ ಬಂಕ್​ಗೆ ಬರುವ ವಾಹನ ಸವಾರರಿಗೆ ಬಿಸಿಲಿನಿಂದ ಪರಿಹಾರ ನೀಡಲು ನೀರಿನ ಸುರಿಮಳೆ ಸುರಿಸುತ್ತಿದ್ದಾರೆ. ಬಂಕ್‌ಗಳ ಸುತ್ತಲೂ ಜೋಡಿಸಲಾದ ಸ್ಪ್ರಿಂಕ್ಲರ್‌ಗಳ ಮೂಲಕ ಪ್ರತಿದಿನ ಮಧ್ಯಾಹ್ನ ನೀರನ್ನು ಸಿಂಪಡಿಸಲಾಗುತ್ತದೆ. ಜನರು ಇದರಡಿಯಲ್ಲಿ ನಿಂತು ಬಿಸಿಲಿನ ತಾಪದಿಂದ ಕೊಂಚ ನಿಟ್ಟುಸಿರುವ ಬಿಡಬಹುದು. ಕರೀಂನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಸುವವರು ಈ ಬಂಕ್​ ಬಳಿ ಆಗಮಿಸಿ ತಂಪಾದ ವಾತಾವರಣವನ್ನು ಆನಂದಿಸುತ್ತಾರೆ. ಅಲ್ಲದೆ, ಪೆಟ್ರೋಲ್​ ಬಂಕ್​ಗೂ ಇದರಿಂದ ಲಾಭವಾಗಿದೆ.

    ವಾಹನ ಸವಾರರು ಬ್ಯಾಂಕ್ ತಲುಪಿದ ಕೂಡಲೇ ಸುಡುವ ಬಿಸಿಲಿನಿಂದ ಕೊಂಚ ನೆಮ್ಮದಿ ಪಡೆಯುತ್ತಾರೆ. ಪೆಟ್ರೋಲ್ ಬಂಕ್ ಮಾಲೀಕರ ಈ ಕಲ್ಪನೆಗೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೆಟಿಗ್ಗರು ಕೂಡ ನಿಮ್ಮ ಐಡಿಯಾ ಸೂಪರ್​ ಎಂದು ಕೊಂಡಾಡುತ್ತಿದ್ದಾರೆ.

    ಆದರೆ, ಪೆಟ್ರೋಲ್ ಬಂಕ್ ಮಾಲೀಕರು ಸ್ಪ್ರಿಂಕ್ಲರ್​ಗಳನ್ನು ಹಾಕಿರುವುದು ವಾಹನ ಸವಾರರಿಗೆ ಮಾತ್ರವಲ್ಲ ಬಿಸಿಲಿನ ಝಳಕ್ಕೆ ಪೆಟ್ರೋಲ್ ಬಂಕ್​ನಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ತಡೆಯಲು ಈ ಕ್ರಮ ಅನುಸರಿಸಲಾಗಿದೆ ಎನ್ನುತ್ತಾರೆ ಸಿಬ್ಬಂದಿ. ಅವಘಡಗಳನ್ನು ತಪ್ಪಿಸಲು ಮಧ್ಯಾಹ್ನದಿಂದ ಬಿಸಿಲಿನ ತೀವ್ರತೆ ಕಡಿಮೆಯಾಗುವವರೆಗೆ ಪೆಟ್ರೋಲ್ ಬಂಕ್‌ನಲ್ಲಿ ನೀರು ಸಿಂಪಡಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. (ಏಜೆನ್ಸೀಸ್​)

    ಕಾರ್ಪೊರೇಟ್ ಶಾಲೆಯಲ್ಲಿ ಓದುತ್ತಿರುವ ಜೂ. ಎನ್​ಟಿಆರ್​ ಮಕ್ಕಳ ಸ್ಕೂಲ್​ ಫೀಸ್​ ಬಗ್ಗೆ ತಿಳಿದ್ರೆ ಹುಬ್ಬೇರೋದು ಖಚಿತ!

    ಚುನಾವಣೆ ನಡುವೆ 4 ಕಂಟೈನರ್​ಗಳಲ್ಲಿ 2000 ಕೋಟಿ ರೂ. ಪತ್ತೆ! ಪೊಲೀಸ್​ ತನಿಖೆ ವೇಳೆ ಕಾದಿತ್ತು ಟ್ವಿಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts