More

    ಟ್ರೇಡ್​ ಕನೆಕ್ಟ್​ ಇ-ಪ್ಲ್ಯಾಟ್​​ಫಾರ್ಮ್​ ಶೀಘ್ರವೇ ಪ್ರಾರಂಭ; ಸಚಿವ ಪಿಯೂಷ್​ ಗೋಯಲ್​ ಮಾಹಿತಿ

    ನವದೆಹಲಿ: ಭಾರತೀಯ ರಫ್ತುದಾರರು ಮತ್ತು ಉದ್ಯಮಿಗಳನ್ನು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ವಿವಿಧ ಪಾಲುದಾರರೊಂದಿಗೆ ಸಂಪರ್ಕಿಸುವ ಸೌಲಭ್ಯ ಒದಗಿಸುವ ಮಧ್ಯವರ್ತಿ ವೇದಿಕೆಯಾದ ಟ್ರೇಡ್​ ಕನೆಕ್ಟ್​ ಇ-ಪ್ಲ್ಯಾಟ್​​ಫಾರ್ಮ್​​ ಸರ್ಕಾರ ಪ್ರಾರಂಭಿಸಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್​ ಗೋಯಲ್​ ಹೇಳಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ವೇದಿಕೆ ಲಭ್ಯವಾಗಬೇಕು ಎಂದೂ ತಿಳಿಸಿದ್ದಾರೆ.

    ಭಾರತ್​ ಮಂಟಪದಲ್ಲಿ ನಡೆದ ಪುನರ್​ ರಚಿಸಲಾದ ವ್ಯಾಪಾರ ಸಂಸ್ಥೆಯ ಎರಡನೇ ಸಭೆಯ ಅಧ್ಯತೆ ವಹಿಸಿದ್ದ ಅವರು, ಇ-ಪ್ಲ್ಯಾಟ್​​ಫಾರ್ಮ್​ ಹೊಸ ಮತ್ತು ಆಸಕ್ತ ರಫ್ತುದಾರರಿಗೆ ಮಾರುಕಟ್ಟೆಗಳು, ವಲಯಗಳು, ರಫ್ತು ಪ್ರವೃತ್ತಿಗಳು, ವಿವಿಧ ನಿಯಮಗಳ ಮಾಹಿತಿ, ಮುಕ್ತ ವ್ಯಾಪಾರ ಒಪ್ಪಂದಗಳಡಿ ಪ್ರಯೋಜನಗಳ ಮಾಹಿತಿ, ವಲಯ ರ್ನಿದಿಷ್ಟ ಕಾರ್ಯಕ್ರಮಗಳಿಗೆ ಪ್ರವೇಶ ಮತ್ತು ವ್ಯಾಪಾರ ಸಂಬಂಧಿತ ಪ್ರಶ್ನೆಗಳನ್ನು ಪ್ರವೇಶಿಸಲು ಅನುಕೂಲ ಒದಗಿಸುವ ನಿರೀಕ್ಷೆ ಇದೆ ಎಂದರು.

    ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್​, ವಾಣಿಜ್ಯ ಕಾರ್ಯದರ್ಶಿ ಸುನೀಲ್​ ಬರ್ತ್ವಾಲ್​, ಲಾಜಿಸ್ಟಿಕ್ಸ್​ ವಿಶೇಷ ಕಾರ್ಯದರ್ಶಿ ಸುಮಿತಾ ದಾವ್ರಾ, ವಿದೇಶಿ ವ್ಯಾಪಾರದ ಮಹಾನಿರ್ದೇಶಕ ಸಂತೋಷ್​ ಸಾರಂಗಿ ಮತ್ತು ಭಾರತೀಯ ಉದ್ಯಮದ ಪ್ರತಿನಿಧಿಗಳು, ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts