More

    ಒಂದೇ ದಿನದಲ್ಲಿ 10 ಸಾವಿರ ಕೋಟಿ ರೂಪಾಯಿ ಕಳೆದುಕೊಂಡ ಉದಯ್​ ಕೊಟಕ್​: ಬ್ಯಾಂಕ್​ ಷೇರು ಬೆಲೆ ಏಕಾಏಕಿ ಕುಸಿತವಾಗಿದ್ದೇಕೆ?

    ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ನ ಈ ಕ್ರಮದಿಂದ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳ ಬೆಲೆ ಗುರುವಾರ ಅಂದಾಜು ಶೇ. 12ರಷ್ಟು ಕುಸಿತ ಕಂಡಿದೆ.

    ಈ ಕುಸಿತದ ನಡುವೆ, ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರವರ್ತಕ ಮತ್ತು ಸಂಸ್ಥಾಪಕ ಉದಯ್ ಕೊಟಕ್ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ.

    ಬ್ಲೂಮ್‌ಬರ್ಗ್ ಬಿಲಿಯನರ್ಸ್​ ಇಂಡೆಕ್ಸ್ ಪ್ರಕಾರ, ಉದಯ್ ಕೊಟಕ್ ಅವರ ಸಂಪತ್ತು 1.3 ಶತಕೋಟಿ ಡಾಲರ್​ (ಅಂದಾಜು ರೂ. 10,225 ಕೋಟಿ) ಇಳಿಕೆ ಕಂಡಿದೆ. ಉದಯ್ ಕೋಟಕ್ ಅವರ ನಿವ್ವಳ ಆಸ್ತಿ ಮೌಲ್ಯ 14.4 ಶತಕೋಟಿ ಡಾಲರ್ ಆಗಿದೆ. ಅವರು ಏಷ್ಯಾದ ಅತ್ಯಂತ ಶ್ರೀಮಂತ ಬ್ಯಾಂಕರ್ ಆಗಿದ್ದಾರೆ.

    ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳ ಬೆಲೆ ಬಿಎಸ್‌ಇಯಲ್ಲಿ ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 10.85ರಷ್ಟು ಕುಸಿದು 1,602 ರೂ. ಮುಟ್ಟಿತು. ಈ ಮೂಲಕ ಬೆಲೆ 12.10 ಪ್ರತಿಶತದಷ್ಟು ಕುಸಿದಿತ್ತು. ಅಂತಿಮವಾಗಿ ಈ ಷೇರಿನ ಬೆಲೆ ಶೇ. 10.87ರಷ್ಟು ಕುಸಿದು ರೂ. 1642.45 ತಲುಪಿತು. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 1,602 ರೂ. ಹಾಗೂ ಗರಿಷ್ಠ ಬೆಲೆ 1697.80 ರೂ. ಇದೆ.

    ಗುರುವಾರದಂದು ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು 39,768.36 ಕೋಟಿ ರೂ.ಗಳ ಇಳಿಕೆ ಕಂಡು 3,26,615.40 ಕೋಟಿ ರೂ.ಗಳಿಗೆ ತಲುಪಿದೆ. ಆಕ್ಸಿಸ್ ಬ್ಯಾಂಕ್ ಈಗ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ದೇಶದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್ ಮಾರುಕಟ್ಟೆ ಮೌಲ್ಯ 3,48,014.45 ಕೋಟಿ ರೂ. ಇದೆ.

    ಬುಧವಾರದ ಅಂತ್ಯಕ್ಕೆ ರೂ. 3,66,383.76 ಕೋಟಿಯಷ್ಟಿದ್ದ ಕೊಟಕ್ ಮಹೀಂದ್ರಾ ಬ್ಯಾಂಕ್ ಮಾರುಕಟ್ಟೆ ಬಂಡವಾಳ ಗುರುವಾರದ ಅಂತ್ಯಕ್ಕೆ ರೂ. 3,26,615.40 ಕೋಟಿಗೆ ಕುಸಿದಿದೆ.

    ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಶೇಕಡಾ 25.71 ರಷ್ಟು ಪಾಲನ್ನು ಹೊಂದಿರುವ ಸಂಸ್ಥಾಪಕ ಉದಯ್ ಕೋಟಕ್ ಅವರು ಗುರುವಾರ ಒಂದೇ ದಿನದಲ್ಲಿ ತಮ್ಮ ಸಂಪತ್ತಿನ ಅಂದಾಜು ರೂ. 10,225 ಕೋಟಿ ಕಳೆದುಕೊಂಡಿದ್ದಾರೆ.

    ಆರ್‌ಬಿಐ ಕ್ರಮವೇನು?:

    ಭಾರತೀಯ ರಿಸರ್ವ್ ಬ್ಯಾಂಕ್ ಆನ್‌ಲೈನ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಹೊಸ ಗ್ರಾಹಕರನ್ನು ಸೇರಿಸುವುದನ್ನು ಮತ್ತು ತಕ್ಷಣವೇ ಜಾರಿಗೆ ಬರುವಂತೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದನ್ನು ನಿಷೇಧಿಸಿದೆ. ಐಟಿ ನಿಯಮಾವಳಿಗಳನ್ನು ಪದೇಪದೆ ಪಾಲಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕಿನ ಐಟಿ ಅಪಾಯ ನಿರ್ವಹಣೆಯಲ್ಲಿ ಗಂಭೀರ ನ್ಯೂನತೆಗಳನ್ನು ಆರ್​ಬಿಐ ಕಂಡುಕೊಂಡಿದೆ.

    ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮೇಲಿನ ಆರ್​ಬಿಐ ಕ್ರಮವು ಎಲ್ಲಾ ಆನ್‌ಲೈನ್ ಚಾನೆಲ್‌ಗಳ ಮೂಲಕ ಹೊಸ ಗ್ರಾಹಕರನ್ನು ಆನ್‌ಬೋರ್ಡ್ ಮಾಡುವುದನ್ನು ನಿಷೇಧಿಸುವುದರಿಂದ, ನಿರೀಕ್ಷಿತ ಹೊಸ ಬ್ಯಾಂಕ್ ಗ್ರಾಹಕರಿಗೆ ನೀಡುವ ಯಾವುದೇ ಆನ್‌ಲೈನ್ ಬ್ಯಾಂಕಿಂಗ್ ಉತ್ಪನ್ನಗಳನ್ನು ನಿಷೇಧವನ್ನು ತೆಗೆದುಹಾಕುವವರೆಗೆ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಇದರಿಂದಾಗಿ ವಿಶ್ಲೇಷಕರು ಗಳಿಕೆಯ ಬೆಳವಣಿಗೆಯ ಮೇಲೆ ಪ್ರಭಾವವನ್ನು ನಿರೀಕ್ಷಿಸುತ್ತಿರುವುದರಿಂದ ಸ್ಟಾಕ್‌ನ ತಮ್ಮ ಗುರಿ ಬೆಲೆಯನ್ನು ಬದಲಿಸುತ್ತಿದ್ದಾರೆ. Emkay ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್‌ನ ವಿಶ್ಲೇಷಕರು ತಮ್ಮ ಮಾರ್ಚ್ 2025 ರ ಅಂದಾಜು ಗುರಿ ಬೆಲೆಯನ್ನು ಪ್ರತಿ ಷೇರಿಗೆ ಈ ಮೊದಲಿನ ರೂ. 1,950 ರಿಂದ ಈಗ ರೂ. 1,750 ಕ್ಕೆ ಕಡಿತಗೊಳಿಸಿದ್ದಾರೆ.

    ಉದಯ್ ಕೋಟಕ್ ಅವರು ಕಳೆದ ಕಂಪನಿಯ ಉನ್ನತ ಹುದ್ದೆಯನ್ನು ತೊರೆದಿದ್ದರು, ಅಶೋಕ್ ವಾಸ್ವಾನಿ ಅವರನ್ನು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ. ಸ್ಥಾಪಕ ನಿರ್ದೇಶಕ ಉದಯ್ ಕೋಟಕ್ ಅವರು ಸೆಪ್ಟೆಂಬರ್ 1, 2023 ರಿಂದ ಬ್ಯಾಂಕ್‌ನ ಮುಖ್ಯಸ್ಥರಾಗಿ ಕೆಳಗಿಳಿದ ನಂತರ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿದ್ದ ದೀಪಕ್ ಗುಪ್ತಾ ಅವರನ್ನು ಬದಲಾಯಿಸಲಾಯಿತು. ಉದಯ್ ಕೋಟಕ್ ಅವರಂತೆ, ವಾಸ್ವಾನಿ ಅವರು ಸಿಡೆನ್‌ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿ. ವಾಸ್ವಾನಿ ಅವರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಂಪನಿ ಕಾರ್ಯದರ್ಶಿಯೂ ಆಗಿದ್ದಾರೆ.

    ಟಾಟಾ ಸಮೂಹದ ಕಂಪನಿ ಷೇರು ಬೆಲೆ ಕುಸಿತ: ಈಗ ಖರೀದಿಸಿದರೆ ಮುಂದೆ ಲಾಭ ಎನ್ನುತ್ತಾರೆ ತಜ್ಞರು

    1 ಷೇರಿಗೆ ಉಚಿತವಾಗಿ ದೊರೆಯಲಿವೆ 3 ಷೇರುಗಳು: ಎನರ್ಜಿ ಕಂಪನಿಯ ಸ್ಟಾಕ್​ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ ಹೂಡಿಕೆದಾರರು

    ಹೂಡಿಕೆದಾರರೆ ಇರಲಿ ಎಚ್ಚರಿಕೆ: ಅದಾನಿ ಪವರ್ ಸೇರಿ ಈ 9 ಕಂಪನಿಗಳ ಪ್ರವರ್ತಕರು ಷೇರು ಒತ್ತೆ ಇಟ್ಟು ಪಡೆದಿದ್ದಾರೆ ಸಾಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts