More

    1 ಷೇರಿಗೆ ಉಚಿತವಾಗಿ ದೊರೆಯಲಿವೆ 3 ಷೇರುಗಳು: ಎನರ್ಜಿ ಕಂಪನಿಯ ಸ್ಟಾಕ್​ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ ಹೂಡಿಕೆದಾರರು

    ಮುಂಬೈ: ಐನಾಕ್ಸ್ ವಿಂಡ್ ಷೇರುಗಳ ಬೆಲೆ ಗುರುವಾರ 9% ಕ್ಕಿಂತ ಹೆಚ್ಚು ಏರಿಕೆ ಕಂಡಿತು. ಈ ಕಂಪನಿಯ ಷೇರುಗಳ ಬೆಲೆ ಗುರುವಾರ ಇಂಟ್ರಾಡೇ ವಹಿವಾಟಿನಲ್ಲಿ 658.50 ರೂ. ತಲುಪಿತು. ಅಂತಿಮವಾಗಿ ಶೇ. 7.07 ಏರಿಕೆಯೊಂದಿಗೆ 645.50 ರೂಪಾಯಿ ಮುಟ್ಟಿತು.

    ಷೇರುಗಳ ಈ ಬೆಲೆ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ಕಂಪನಿಯ ಮಂಡಳಿಯ ಸದಸ್ಯರು 3:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಲು ಪ್ರಸ್ತಾಪಿಸಿದ್ದಾರೆ. ಐನಾಕ್ಸ್ ವಿಂಡ್ ಏಪ್ರಿಲ್ 22, 2024 ರಂದು ನೀಡಿದ ಪ್ರಕಟಣೆಯಲ್ಲಿ, ಬೋನಸ್ ಈಕ್ವಿಟಿ ಷೇರುಗಳ ವಿತರಣೆಯನ್ನು ಪರಿಗಣಿಸಲು ಮತ್ತು ಅನುಮೋದಿಸಲು ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು 25/04/2024 ರಂದು ನಿಗದಿಪಡಿಸಲಾಗಿದೆ ಎಂದು ಈಗಾಗಲೇ ವಿನಿಮಯ ಕೇಂದ್ರಗಳಿಗೆ ತಿಳಿಸಿತ್ತು. ಅಂದಿನಿಂದ ಐನಾಕ್ಸ್ ವಿಂಡ್ ಷೇರುಗಳ ಬೆಲೆ ಏರುತ್ತಲೇ ಇದೆ.

    ಕಳೆದ 5 ವಹಿವಾಟು ಅವಧಿಗಳಲ್ಲಿ ಐನಾಕ್ಸ್ ವಿಂಡ್‌ನ ಷೇರು ಬೆಲೆ ಅಂದಾಜು 20% ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಈ ಷೇರು ಬೆಲೆ ಶೇ. 30ರಷ್ಟು ಏರಿಕೆಯಾಗಿದೆ. ಆರು ತಿಂಗಳಲ್ಲಿ 210% ವರೆಗೆ ಹೆಚ್ಚಳವನ್ನು ಕಂಡಿದೆ. ಐನಾಕ್ಸ್ ವಿಂಡ್ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 520% ​​ಕ್ಕಿಂತ ಹೆಚ್ಚು ಏರಿಕೆಯಾಗಿ ಮಲ್ಟಿಬ್ಯಾಗರ್ ಆದಾಯವನ್ನು ನೀಡಿದೆ. ಈ ಅವಧಿಯಲ್ಲಿ ಇದರ ಬೆಲೆ 104 ರೂ.ನಿಂದ ಈಗಿನ ಬೆಲೆಗೆ ಏರಿಕೆಯಾಗಿದೆ.

    ಕಂಪನಿ ಏನು ಹೇಳಿದೆ?:

    “ಕಂಪನಿಯ ಮಂಡಳಿಯ ಸದಸ್ಯರು ಏಪ್ರಿಲ್ 25, 2024 ರಂದು ನಡೆದ ತಮ್ಮ ಸಭೆಯಲ್ಲಿ 3:1 (ಅಸ್ತಿತ್ವದಲ್ಲಿರುವ ಪ್ರತಿ ಇಕ್ವಿಟಿ ಷೇರಿಗೆ ಮೂರು ಬೋನಸ್ ಇಕ್ವಿಟಿ ಷೇರುಗಳು) ಬೋನಸ್ ಷೇರುಗಳನ್ನು ನೀಡಲು ಪ್ರಸ್ತಾಪಿಸಿದ್ದಾರೆ” ಎಂದು ಐನಾಕ್ಸ್ ವಿಂಡ್ ಕಂಪನಿಯು ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

    ಈ ಕಂಪನಿಯು ವಿಂಡ್ ಟರ್ಬೈನ್ ಜನರೇಟರ್‌ಗಳನ್ನು ತಯಾರಿಸುತ್ತದೆ ಮತ್ತು ಮಾರುಕಟ್ಟೆ ಮಾಡುತ್ತದೆ. ಗಾಳಿ ಸಂಪನ್ಮೂಲ ಮೌಲ್ಯಮಾಪನ, ಸೈಟ್ ಸ್ವಾಧೀನ, ಯೋಜನೆಯ ಅಭಿವೃದ್ಧಿ, ವಿದ್ಯುತ್ ಸ್ಥಳಾಂತರಿಸುವಿಕೆ, ನಿರ್ಮಾಣ ಮತ್ತು ಕಾರ್ಯಾರಂಭ, ಶಾಸನಬದ್ಧ ಅನುಮೋದನೆಗಳು, ದೀರ್ಘಾವಧಿಯ ಕಾರ್ಯಾಚರಣೆಗಳು ಮತ್ತು ಗಾಳಿ ವಿದ್ಯುತ್ ಯೋಜನೆಗಳ ನಿರ್ವಹಣೆಯಂತಹ ಟರ್ನ್‌ಕೀ ಪರಿಹಾರಗಳನ್ನು ನೀಡುತ್ತದೆ.

    ಹೂಡಿಕೆದಾರರ ಇರಲಿ ಎಚ್ಚರಿಕೆ: ಅದಾನಿ ಪವರ್ ಸೇರಿ ಈ 9 ಕಂಪನಿಗಳ ಪ್ರವರ್ತಕರು ಷೇರು ಒತ್ತೆ ಇಟ್ಟು ಪಡೆದಿದ್ದಾರೆ ಸಾಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts