More

    10 ತಿಂಗಳಲ್ಲಿ ಸಾಕಷ್ಟು ಏರಿಕೆ: ಸರ್ಕಾರಿ ಗಣಿ ಕಂಪನಿ ಷೇರು ಬೆಲೆ​ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತದೆ ಬ್ರೋಕರೇಜ್​

    ಮುಂಬೈ: ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಂಡಿಸಿ) ಷೇರುಗಳ ಮೇಲೆ ತಜ್ಞರು ಬುಲಿಶ್ ಆಗಿದ್ದಾರೆ. ಬ್ರೋಕರೇಜ್ ಸಂಸ್ಥೆ LKP ಸೆಕ್ಯುರಿಟೀಸ್ ಈ ಸ್ಟಾಕ್‌ ಬಗೆಗೆ ಸಕಾರಾತ್ಮಕ ನಿಲುವು ಹೊಂದಿದೆ. ಇದರೊಂದಿಗೆ ಹೊಸ ಗುರಿ ಬೆಲೆ ನೀಡಿದೆ.

    ಎನ್‌ಎಂಡಿಸಿ ಷೇರುಗಳ ಬೆಲೆ 10 ತಿಂಗಳಲ್ಲಿ 140 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಕಳೆದ ಒಂದು ವಾರದಲ್ಲಿ 7.25% ಹಾಗೂ ಕಳೆದ ಒಂದು ತಿಂಗಳಲ್ಲಿ 23.83% ಹೆಚ್ಚಳವನ್ನು ಈ ಷೇರು ಬೆಲೆ ಕಂಡಿದೆ. ಈಗ ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

    ಬ್ರೋಕರೇಜ್‌ ಸಂಸ್ಥೆಯು ರೂ. 297ರ ಗುರಿ ಬೆಲೆಯನ್ನು ನೀಡಿದೆ. ಅಂದರೆ ಈ ಷೇರು ಅಲ್ಪಾವಧಿಯಲ್ಲಿ ರೂ 297 ಮುಟ್ಟಲಿದೆ ಎಂದು ಅದು ಹೇಳಿದೆ.

    ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 253 ರೂ. ಇದೆ. ಪ್ರಸ್ತುತ ಈ ಷೇರಿನ ಬೆಲೆ 252.25 ರೂ. ಇದೆ. ಈ ದೃಷ್ಟಿಕೋನದಿಂದ ನೋಡಿದರೆ, ಈ ಷೇರು ಅಂದಾಜು 18% ರಷ್ಟು ಹೆಚ್ಚಾಗಬಹುದು. ಷೇರುಗಳು ತನ್ನ ಗುರಿ ಬೆಲೆಯನ್ನು ತಲುಪಿದರೆ, ಅದು 14 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ. ಏಪ್ರಿಲ್ 2010 ರಲ್ಲಿ ಷೇರು ಈ ಮಟ್ಟವನ್ನು ಮುಟ್ಟಿತ್ತು.

    ಬ್ರೋಕರೇಜ್ ತನ್ನ ವರದಿಯಲ್ಲಿ NMDC ಯ ಮೇಲಿನ ತನ್ನ ಬುಲಿಶ್ ಆಗಿರುವುದಕ್ಕೆ ಹಲವಾರು ಕಾರಣಗಳನ್ನು ನೀಡಿದೆ. ಇದರ ಪ್ರಕಾರ, ಭಾರತದಲ್ಲಿ ಉಕ್ಕಿನ ಹೆಚ್ಚುತ್ತಿರುವ ಬೇಡಿಕೆಯಿಂದ ಲಾಭ ಪಡೆಯಲು ಕಂಪನಿಯು ಉತ್ತಮ ಸ್ಥಾನದಲ್ಲಿದೆ. 2003-2007ರ ಅವಧಿಯಂತೆ, ಕಂಪನಿಯು ಈ ಬಾರಿಯೂ ಬಂಡವಾಳ ವೆಚ್ಚದಲ್ಲಿ ಸಂಭಾವ್ಯ ಚೇತರಿಕೆಯ ಲಾಭವನ್ನು ಪಡೆಯುತ್ತದೆ. ಹೆಚ್ಚುವರಿಯಾಗಿ, ಭವಿಷ್ಯದ ಬೇಡಿಕೆಯನ್ನು ಪೂರೈಸಲು ಕಂಪನಿಯು ಗಣಿ ಸಾಮರ್ಥ್ಯವನ್ನು ವ್ಯಾಪಕವಾಗಿ ವಿಸ್ತರಿಸುತ್ತಿದೆ ಎಂದು ಬ್ರೋಕರೇಜ್ ಹೇಳಿದೆ.

    ಕೇಂದ್ರ ಸರ್ಕಾರದ ಉಕ್ಕು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಎಂಡಿಸಿ ‘ನವರತ್ನ’ ಕಂಪನಿಯಾಗಿದೆ. ಇದು ದೇಶದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕವಾಗಿದೆ. ಕಂಪನಿಯು ಛತ್ತೀಸ್‌ಗಢ ಮತ್ತು ಕರ್ನಾಟಕದಲ್ಲಿ ಕಬ್ಬಿಣದ ಅದಿರು ಗಣಿಗಳನ್ನು ನಿರ್ವಹಿಸುತ್ತದೆ. ಕಬ್ಬಿಣದ ಅದಿರಿನ ಹೊರತಾಗಿ, NMDC ಮಧ್ಯಪ್ರದೇಶದ ಪನ್ನಾದಲ್ಲಿರುವ ಮಜ್ಗವಾನ್ ಗಣಿಯಿಂದ ವಜ್ರಗಳನ್ನು ಉತ್ಪಾದಿಸುತ್ತದೆ. ಇದು ಪ್ರಸ್ತುತ ವರ್ಷಕ್ಕೆ ಅಂದಾಜು 45 MT (ಮಿಲಿಯನ್​ ಟನ್​) ಕಬ್ಬಿಣದ ಅದಿರನ್ನು ಉತ್ಪಾದಿಸುತ್ತದೆ. 51 MT ಉತ್ಪಾದನಾ ಸಾಮರ್ಥ್ಯ ಹೊಂದಿದೆ.

    ಸ್ಟೀಲ್​ ಟ್ಯೂಬ್ಸ್​ ಕಂಪನಿ ಐಪಿಒ ಷೇರಿನ ಮಹಿಮೆ: 2 ತಿಂಗಳಲ್ಲಿ ಹೂಡಿಕೆದಾರರ ಹಣ ದುಪ್ಟಟ್ಟು

    ಈ ಎರಡು ಫಾರ್ಮಾ ಷೇರುಗಳನ್ನು ಖರೀದಿಸಿ: ಮಾರುಕಟ್ಟೆ ತಜ್ಞರ ಶಿಫಾರಸು

    3 ವರ್ಷಗಳಲ್ಲಿ ರೂ. 15 ರಿಂದ 1900ಕ್ಕೆ ಏರಿದ ಷೇರು ಬೆಲೆ: ಸೋಲಾರ್ ಕಂಪನಿ ಸ್ಟಾಕ್​ ಬೆಲೆ ಸಾರ್ವಕಾಲಿಕ ಗರಿಷ್ಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts