More

  ಸ್ಟೀಲ್​ ಟ್ಯೂಬ್ಸ್​ ಕಂಪನಿ ಐಪಿಒ ಷೇರಿನ ಮಹಿಮೆ: 2 ತಿಂಗಳಲ್ಲಿ ಹೂಡಿಕೆದಾರರ ಹಣ ದುಪ್ಟಟ್ಟು

  ಮುಂಬೈ: ಕಳೆದ ಫೆಬ್ರವರಿ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ಈ ಷೇರು ಬೆಲೆ ಕೇವಲ ಎರಡು ತಿಂಗಳಲ್ಲಿ ದುಪ್ಪಟ್ಟಾಗಿದೆ. ಕೇವಲ 2 ತಿಂಗಳಲ್ಲಿ ವಿಭೋರ್ ಸ್ಟೀಲ್ ಟ್ಯೂಬ್ಸ್​ (Vibhor Steel Tubes) ಕಂಪನಿಯ ಷೇರು ಬೆಲೆ ಅಂದಾಜು 100% ಹೆಚ್ಚಾಗಿದೆ.

  ವಿಭೋರ್ ಸ್ಟೀಲ್ ಟ್ಯೂಬ್‌ಗಳ ಷೇರಿನ ಬೆಲೆ ಮಂಗಳವಾರ ಬಿಎಸ್‌ಇಯಲ್ಲಿ ರೂ. 299.50 ಕ್ಕೆ ಪ್ರಾರಂಭವಾಯಿತು, ಈ ಸ್ಟಾಕ್ ಇಂಟ್ರಾಡೇ ಗರಿಷ್ಠ ರೂ. 304.70 ಮತ್ತು ಇಂಟ್ರಾಡೇ ಕನಿಷ್ಠ ರೂ. 291.50 ಮುಟ್ಟಿತು.

  ಈ ಷೇರುಗಳನ್ನು ಕಳೆದ ಫೆಬ್ರವರಿ 20 ರಂದು ಪಟ್ಟಿ ಮಾಡಲಾಗಿತ್ತು. ರೂ. 425 ಬೆಲೆಯಲ್ಲಿ ಈ ಷೇರುಗಳನ್ನು ಪಟ್ಟಿ ಮಾಡಲಾಗಿತ್ತು. ಐಪಿಒದಲ್ಲಿ ಈ ಷೇರುಗಳ ಬೆಲೆ ರೂ. 151 ಇತ್ತು. ಇದಕ್ಕಿಂತ 181.5% ಹೆಚ್ಚಿನ ಬೆಲೆ ಷೇರು ಮಾರುಕಟ್ಟೆ ಈ ಸ್ಟಾಕ್​ ಪಟ್ಟಿಯಾಗಿದೆ.

  ವಿಭೋರ್ ಸ್ಟೀಲ್ ಟ್ಯೂಬ್ಸ್ ಲಿಮಿಟೆಡ್ ಭಾರತದಲ್ಲಿ ಹೆವಿ ಇಂಜಿನಿಯರಿಂಗ್ ಕೈಗಾರಿಕೆಗಳಿಗೆ ಉಕ್ಕಿನ ಪೈಪ್‌ಗಳು ಮತ್ತು ಟ್ಯೂಬ್‌ಗಳ ತಯಾರಿಸುತ್ತದೆ. ರಫ್ತುದಾರ ಮತ್ತು ಪೂರೈಕೆದಾರ ಕೂಡ ಆಗಿದೆ.

  ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಈ ಕಂಪನಿಯ ಲಾಭವು 4.31 ಕೋಟಿ ರೂ ಇದೆ. 2022-23ನೇ ಹಣಕಾಸು ವರ್ಷಕ್ಕೆ ಕೊನೆಗೊಂಡ ವರ್ಷದ ಲಾಭದ ಪ್ರಮಾಣವು ರೂ. 21.06 ಕೋಟಿಗಳಷ್ಟಿತ್ತು.

  ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಮಾರಾಟ ರೂ. 251 ಕೋಟಿಗಳಷ್ಟಿದೆ. 2022-2023ರ ಆರ್ಥಿಕ ವರ್ಷದಲ್ಲಿ ರೂ. 1,114.30 ಕೋಟಿಗೆ ಹೋಲಿಸಿದರೆ ಡಿಸೆಂಬರ್ 31ಕ್ಕೆ ಕೊನೆಗೊಂಡ ಒಂಬತ್ತು ತಿಂಗಳ ಲಾಭ ರೂ. 781.51 ಕೋಟಿ ಇದೆ.

   

  3 ವರ್ಷಗಳಲ್ಲಿ ರೂ. 15 ರಿಂದ 1900ಕ್ಕೆ ಏರಿದ ಷೇರು ಬೆಲೆ: ಸೋಲಾರ್ ಕಂಪನಿ ಸ್ಟಾಕ್​ ಬೆಲೆ ಸಾರ್ವಕಾಲಿಕ ಗರಿಷ್ಠ

  ಅನಿಲ್​ ಅಂಬಾನಿ ಕಂಪನಿ ಷೇರು 2,641 ರಿಂದ 193 ರೂಪಾಯಿಗೆ: 40 ಲಕ್ಷ ಷೇರು ಖರೀದಿಸಿದ ‘ಮಾರ್ಕೆಟ್​ ಮಾಸ್ಟರ್’ ಕೇಡಿಯಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts