More

    ಟಾಟಾ ಗ್ರೂಪ್​ನ ಟೆಲಿಕಾಂ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಇನ್ನಷ್ಟು ಏರಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

    ಮುಂಬೈ: ಟೆಲಿಕಾಂ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಾಟಾ ಗ್ರೂಪ್ ಕಂಪನಿಯಾದ ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಈ ಮೂಲಕ ಷೇರು ಬೆಲೆ ರೂ. 1088.25 ತಲುಪಿ, 52 ವಾರಗಳ ಗರಿಷ್ಠ ಮಟ್ಟವನ್ನು ಕೂಡ ಮುಟ್ಟಿತು.

    ಈ ಕಂಪನಿಯು 18,554.26 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ತೇಜಸ್ ನೆಟ್‌ವರ್ಕ್ಸ್ ಸ್ಟಾಕ್ ಕಳೆದ 2 ವರ್ಷಗಳಲ್ಲಿ 115% ರಷ್ಟು ಏರಿಕೆ ಕಂಡಿದೆ. ಕಳೆದ 30-ದಿನಗಳ ಅವಧಿಯಲ್ಲಿ 58% ರಷ್ಟು ಏರಿಕೆಯಾಗಿದೆ.

    ಮಾರ್ಚ್ 2024ಕ್ಕೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ, ಕಂಪನಿಯು ತನ್ನ ನಿವ್ವಳ ಮಾರಾಟವನ್ನು ರೂ 1,326.88 ಕೋಟಿ ಎಂದು ಘೋಷಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಘೋಷಿಸಲಾದ ರೂ 299.32 ಕೋಟಿಗೆ ಹೋಲಿಸಿದರೆ ಇದು 343.3% ರಷ್ಟು ಹೆಚ್ಚಾಗಿದೆ. ಮಾರ್ಚ್ 2024ಕ್ಕೆ ಕೊನೆಗೊಂಡ ತ್ರೈಮಾಸಿಕದ ನಿವ್ವಳ ಲಾಭವನ್ನು Rs 146.78 ಕೋಟಿ ಎಂದು ಕಂಪನಿ ಘೋಷಿಸಿದೆ. ಮಾರ್ಚ್ 2023 ರಲ್ಲಿ ಘೋಷಿಸಿದ Rs 11.47 ಕೋಟಿಯ ಲಾಭಕ್ಕೆ ಹೋಲಿಸಿದರೆ ಈಗ 1379.69% ರಷ್ಟು ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದೆ.

    ಎಮ್ಕೆ ಗ್ಲೋಬಲ್ ಅಪ್‌ಬೀಟ್ (Emkay Global Upbeat) ಬ್ರೋಕರೇಜ್​ ಸಂಸ್ಥೆಯು ತೇಜಸ್​ ನೆಟ್‌ವರ್ಕ್‌ ಷೇರು ಖರೀದಿಗೆ ಶಿಫಾರಸು ಮಾಡಿದೆ. ಅಲ್ಲದೆ, ಟಾರ್ಗೆಟ್​ ಪ್ರೈಸ್​ (ಗುರಿ ಬೆಲೆ) ಅನ್ನು ಈ ಹಿಂದಿನ ರೂ. 975 ರ ಬದಲಾಗಿ ರೂ. 1,100ಕ್ಕೆ ನಿಗದಿಪಡಿಸಿದೆ.

    ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ ಕಂಪನಿಯು ಈ ಕೆಲ ಕಾರಣಗಳಿಂದಾಗಿ ಬೆಳವಣಿಗೆ ಕಾಣಲಿದೆ ಎಂದು ಎಮ್ಕೆ ಗ್ಲೋಬಲ್ ಅಪ್‌ಬೀಟ್ ಹೇಳಿದೆ.
    1) ದೇಶೀಯ ಉತ್ಪಾದನೆ ಮತ್ತು PLI (ಉತ್ಪಾದನೆ ಸಂಬಂಧಿ ಪ್ರೋತ್ಸಾಹಕ) ಯೋಜನೆಗೆ ಒತ್ತು; 2) ಬಿಎಸ್​ಎನ್​ಎಲ್​, ಭಾರತ್​ನೆಟ್​, ಮತ್ತು ರೈಲ್ವೇಸ್ ಮೇಲೆ ದೊಡ್ಡ ಖರ್ಚು; 3) ಟಿಕಾಂ ಮತ್ತು ಟಿಸಿಎಸ್​ನಿಂದ ಉಲ್ಲೇಖಗಳಿಂದ ಹೊಸ ಕ್ಲೈಂಟ್‌ಗಳ ಸೇರ್ಪಡೆ ಮತ್ತು 4) ಚೀನೀ ಟೆಲಿಕಾಂ ಉಪಕರಣಗಳನ್ನು ಬದಲಿಸುವತ್ತ ಜಾಗತಿಕ ನಡೆ

    ಈ ಷೇರಿನಲ್ಲಿ ಮಾರ್ಚ್ 2024ರ ತ್ರೈಮಾಸಿಕದಲ್ಲಿ ಮ್ಯೂಚುವಲ್ ಫಂಡ್‌ಗಳು ತಮ್ಮ ಹೂಡಿಕೆಗಳನ್ನು 3.92% ರಿಂದ 4.27% ಕ್ಕೆ ಹೆಚ್ಚಿಸಿವೆ. ಸಾಂಸ್ಥಿಕ ಹೂಡಿಕೆದಾರರು ಮಾರ್ಚ್ 2024ರ ತ್ರೈಮಾಸಿಕದಲ್ಲಿ 15.61% ರಿಂದ 16.09% ಗೆ ಹೂಡಿಕೆಗಳನ್ನು ಹೆಚ್ಚಿಸಿದ್ದಾರೆ. ನಿಪ್ಪಾನ್​ ಲೈಫ್​ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ 6,226,899 ಷೇರುಗಳೊಂದಿಗೆ ತೇಜಸ್ ನೆಟ್‌ವರ್ಕ್ಸ್‌ನಲ್ಲಿ 3.65% ಪಾಲನ್ನು ಹೊಂದಿದೆ.

    2000 ರಲ್ಲಿ ಸ್ಥಾಪನೆಯಾದ ತೇಜಸ್ ನೆಟ್‌ವರ್ಕ್ಸ್ ದೂರಸಂಪರ್ಕ ನೆಟ್‌ವರ್ಕ್‌ಗಳನ್ನು ನಿರ್ಮಿಸಲು ಅಗತ್ಯವಾದ ಉನ್ನತ-ಕಾರ್ಯಕ್ಷಮತೆಯ, ಕ್ಯಾರಿಯರ್-ಕ್ಲಾಸ್ ಸಾಧನಗಳನ್ನು ವಿನ್ಯಾಸಗೊಳಿಸಿ, ತಯಾರಿಸುತ್ತದೆ. ಕಂಪನಿಯು ಆಪ್ಟಿಕಲ್, ಬ್ರಾಡ್‌ಬ್ಯಾಂಡ್ ಮತ್ತು ಡೇಟಾ ನೆಟ್‌ವರ್ಕಿಂಗ್ ಉತ್ಪನ್ನಗಳ ಸೇವೆಗಳನ್ನು ಒದಗಿಸುತ್ತದೆ.

    ಸಾಲ ತೀರಿಸಲು ಗಮನ ನೀಡುತ್ತಿದೆ ಕಂಪನಿ: ಅದಾನಿ ಸಮೂಹದ ಷೇರು ಬೆಲೆ ರೂ. 1500 ದಾಟಬಹುದು

    ವೊಡಾಫೋನ್ ಐಡಿಯಾದ ಷೇರು ಬೆಲೆಯಲ್ಲಿ ಬಿರುಗಾಳಿ: ವರ್ಷದ ಸ್ಟಾಕ್ ಇದಾಗಲಿದೆ ಎಂದು ತಜ್ಞರು ಹೇಳುತ್ತಿರುವುದೇಕೆ?

    ಪೈಪ್​ ಕಂಪನಿ ಷೇರುಗಳ ಬೆಲೆ ಶೀಘ್ರದಲ್ಲೇ 125% ಏರಿಕೆ: ಸೆಬಿ ನೋಂದಾಯಿತ ಸಂಶೋಧನಾ ವಿಶ್ಲೇಷಕ ಇದಕ್ಕೆ ನೀಡುವ ಕಾರಣಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts