

ಮುಂಬೈ: ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಒಂದು ದಿನದ ಏರಿಳಿತದ ವಹಿವಾಟಿನ ನಂತರ, ಬಿಎಸ್‌ಇ ಸೆನ್ಸೆಕ್ಸ್ 609 ಪಾಯಿಂಟ್‌ಗಳ ಕುಸಿತವಾಗಿ, 73730 ಮಟ್ಟದಲ್ಲಿ ಮುಕ್ತಾಯಗೊಂಡಿತು. ಇದೇ ವೇಳೆ ನಿಫ್ಟಿ 50 ಸೂಚ್ಯಂಕ 150 ಅಂಕಗಳಷ್ಟು ಕುಸಿದು 22420 ಮಟ್ಟ ತಲಪಿತು. ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕಗಳು ಗಮನಾರ್ಹ ಕುಸಿತ ದಾಖಲಿಸಿದರೆ, ನಿಫ್ಟಿ ಮಿಡ್‌ಕ್ಯಾಪ್ 100, ಬಿಎಸ್‌ಇ ಸ್ಮಾಲ್ ಕ್ಯಾಪ್, ನಿಫ್ಟಿ ಐಟಿ, ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಎಫ್‌ಎಂಸಿಜಿ ಸೂಚ್ಯಂಕಗಳು ಏರಿಕೆ ಕಂಡವು.
ಸೋಮವಾರದಂದು ಪೆನ್ನಿ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣವನ್ನು ಗಳಿಸಲು ಬಯಸಿದರೆ, ಶುಕ್ರವಾರದಂದು 5% ವರೆಗೆ ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿರುವ 10 ಪೆನ್ನಿ ಷೇರುಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.
ಸೋಮವಾರದಂದು ಈ 10 ಪೆನ್ನಿ ಸ್ಟಾಕ್‌ಗಳ ಮೇಲೆ ನಿಗಾ ಇರಿಸಿ
1) ಮೊನೊಟೈಪ್ ಇಂಡಿಯಾ ಲಿಮಿಟೆಡ್ (Monotype India Ltd) ಷೇರಿನ ಬೆಲೆ ಶುಕ್ರವಾರ 0.84 ರೂ. ಮುಟ್ಟಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
2) ಕನೆಲ್ ಇಂಡಸ್ಟ್ರೀಸ್ ಲಿಮಿಟೆಡ್ (Kanel Industries Ltd) ಷೇರು ಬೆಲೆ ಶುಕ್ರವಾರ 1.47 ರೂ.ಗೆ ತಲುಪಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
3) ಶುಕ್ರವಾರದಂದು ತಿರಾಣಿ ಪ್ರಾಜೆಕ್ಟ್ ಲಿಮಿಟೆಡ್ (Thirani Projects Ltd) ಷೇರು ಬೆಲೆ 3.57 ರೂ. ತಲುಪಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
4) ಪ್ರೀಮಿಯರ್ ಲಿಮಿಟೆಡ್‌ನ ಷೇರಿನ ಬೆಲೆ ಶುಕ್ರವಾರ 4.2 ರೂ.ಗೆ ಮುಟ್ಟಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
5) ಅಡ್ರೊಯಿಟ್ ಇನ್ಫೋಟೆಕ್ ಲಿಮಿಟೆಡ್ (Adroit Infotech Ltd) ಷೇರು ಬೆಲೆ ಶುಕ್ರವಾರ 5.04 ರೂ.ಗೆ ಮುಟ್ಟಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
6) ಯುಎಸ್ಜಿ ಟೆಕ್ ಸೋಲುಷನ್ಸ್ ಲಿಮಿಟೆಡ್ (USG Tech Solutions Ltd) ಷೇರಿನ ಬೆಲೆ ಶುಕ್ರವಾರ 9.87 ರೂ.ಗೆ ತಲುಪಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
7) ಚಾರ್ಟರ್ಡ್ ಲಾಜಿಸ್ಟಿಕ್ಸ್ ಲಿಮಿಟೆಡ್ (Chartered Logistics Ltd) ಷೇರಿನ ಬೆಲೆಯು ಶುಕ್ರವಾರದಂದು 9.3 ರೂ.ಗೆ ತಲುಪಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
8) ಮಿನೋಲ್ಟಾ ಫೈನಾನ್ಸ್ ಲಿಮಿಟೆಡ್ (Minolta Finance Ltd) ಷೇರಿನ ಬೆಲೆ ಶುಕ್ರವಾರ 7.19 ರೂ.ಗೆ ಮುಟ್ಟಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
9) ಚಂಬಲ್ ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಲಿಮಿಟೆಡ್ (Chambal Breweries and Distilleries Ltd) ಷೇರಿನ ಬೆಲೆ ಶುಕ್ರವಾರ 9.1 ರೂ.ಗೆ ತಲುಪಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.
10) ಅರಾವಳಿ ಸೆಕ್ಯುರಿಟೀಸ್ ಮತ್ತು ಫೈನಾನ್ಸ್ ಲಿಮಿಟೆಡ್ (Aravali Securities and Finance Ltd) ಷೇರಿನ ಬೆಲೆಯು 6.15 ರೂ.ಗೆ ಮುಟ್ಟಿತು. ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.