More

    ಜಗಳೂರು ತಾಲೂಕಿಗೆ ನೀರಾವರಿ ಸೌಲಭ್ಯ

    ದಾವಣಗೆರೆ : ಜಗಳೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಎಲ್ಲ ರೀತಿಯಲ್ಲಿ ಶ್ರಮಿಸುತ್ತೇನೆ, ಒಂದು ಅವಕಾಶ ನೀಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ ಕುಮಾರ್ ಹೇಳಿದರು.
     ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಭಾನುವಾರ ಮತಯಾಚನೆ ಮಾಡಿ, ಈ ತಾಲೂಕು ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿದೆ. ಇದನ್ನು ಹಸಿರ ನಾಡಾಗಿಸಲು, ನೀರಾವರಿ ಯೋಜನೆಗಳು ಇದುವರೆಗೆ ಕಾರ್ಯಗತಗೊಂಡಿಲ್ಲ. ಇಷ್ಟು ವರ್ಷ ಅಧಿಕಾರ ನಡೆಸಿದವರು ಜನರಿಗೆ ಭರವಸೆ ನೀಡಿ ವಂಚಿಸುತ್ತ ಬಂದಿದ್ದಾರೆ ಎಂದರು.
     ಈ ತಾಲೂಕಿನಲ್ಲಿ ಹೆಚ್ಚಾಗಿ ಹಿಂದುಳಿದವರೇ ಇದ್ದಾರೆ. ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ದೊರೆತಿಲ್ಲ. ಹೈಟೆಕ್ ಶಾಲೆಗಳಿಲ್ಲ. ಎಲ್ಲ ಸೌಲಭ್ಯಗಳು ಇರುವ ಕಾಲೇಜುಗಳಿಲ್ಲ. ಹಾಗಾಗಿ, ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ದಾವಣಗೆರೆಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಹಳ್ಳಿಗಳಿಗೆ ಇದುವರೆಗೂ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ಓದು ನಿಲ್ಲಿಸಿರುವ ವಿಚಾರವೂ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
     ಪಾದಯಾತ್ರೆ ವೇಳೆ ಹಲವು ಗ್ರಾಮಗಳ ಜನರನ್ನು ಭೇಟಿ ಮಾಡಿದ್ದೇನೆ. ಸಂಸದನಾಗಿ ಆಯ್ಕೆಯಾದರೆ ಕುಡಿಯುವ ನೀರು, ನೀರಾವರಿ ಯೋಜನೆಗಳು, ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಪ್ರಥಮ ಆದ್ಯತೆಯಾಗಿದೆ ಎಂದು ಹೇಳಿದರು.
     ಮೆಕ್ಕೆಜೋಳ ಕೋಲ್ಡ್ ಸ್ಟೋರೇಜ್ ಸಹ ಇಲ್ಲಿ ಅತ್ಯವಶ್ಯಕವಾಗಿ ಬೇಕು. ರೈತರು ಕಷ್ಟದಲ್ಲಿದ್ದಾರೆ. ಈ ವರ್ಷ ಬರಗಾಲ ತಲೆದೋರಿರುವುದರಿಂದ ರೈತರ ಸಮಸ್ಯೆ ಅರ್ಥವಾಗುತ್ತದೆ. ಇಷ್ಟೊಂದು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಈ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿಲ್ಲ ಎಂದು ತಿಳಿಸಿದರು.
     ಸೊಕ್ಕೆ ಗ್ರಾಮದಲ್ಲಿ ವಿನಯ್ ಕುಮಾರ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತ ಕೋರಿದರು. ಕಹಳೆ ಊದುತ್ತಾ, ಡೋಲು, ತಮಟೆ ಬಾರಿಸುತ್ತಾ ಮೆರವಣಿಗೆ ನಡೆಸಲಾಯಿತು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
     ಕೆಲವರು ವಿನಯ್ ಕುಮಾರ್ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು, ಕುರಿ ನೀಡಿದರು. ಸೊಕ್ಕೆ ಗ್ರಾಮದ ಮುಖಂಡರಾದ ಲೋಕರಾಜ್ ನಾಯ್ಕ್, ಹನುಮಂತ, ಹಾಲಪ್ಪ, ಶಿವಣ್ಣ, ಮರೆಗೌಡ್ರು, ಅಂಜಿನಪ್ಪ, ಎಳಿವು ಕೊಟ್ರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts