More

    ಬಿಸಿಲ ಧಗೆಯಿಂದಾಗಿ ಮನೆ ಒಳಗಿರಲು ಆಗುತ್ತಿಲ್ಲವೇ? ಈ ಟಿಪ್ಸ್​ ಅನುಸರಿಸಿದ್ರೆ ಸಾಕು ಇಡೀ ಮನೆ ಕೂಲ್​ ಕೂಲ್​…

    ನವದೆಹಲಿ​: ಸದ್ಯ ದೇಶದೆಲ್ಲೆಡೆ ಬಿರು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸೂರ್ಯನು ಬೆಂಕಿಯ ಉಂಡೆಯಂತಾಗಿದ್ದಾನೆ. ಧಗೆಯ ತೀವ್ರತೆಗೆ ಜನರು ತತ್ತರಿಸಿ ಹೋಗಿದ್ದು, ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ. ಕೆಲವೆಡೆ ತಾಪಮಾನ 40 ರಿಂದ 47 ಡಿಗ್ರಿ ಇದೆ. ಬಿಸಿಲಿನಿಂದ ಪಾರಾಗಲು ಜನರು ಹಲವು ಉಪಾಯಗಳನ್ನು ಅನುಸರಿಸುತ್ತಿದ್ದಾರೆ. ಇನ್ನೂ ಕೆಲವರು ಧಗೆಯನ್ನು ಕಂಟ್ರೋಲ್​ ಮಾಡಲು ಏನು ಮಾಡಬಹುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಅಂಥವರಿಗಾಗಿ ನಾವೊಂದು ಸರಳ ಸಲಹೆಯನ್ನು ಹೊತ್ತು ತಂದಿದ್ದೇವೆ.

    ದೇಶದ ಜನರು ಅತ್ಯಂತ ಕಠಿಣವಾದ ಬೇಸಿಗೆಯನ್ನು ಎದುರಿಸುತ್ತಿದ್ದಾರೆ. ವಿಪರೀತ ತಾಪಮಾನದಲ್ಲಿ ಹೊರಗೆ ಹೋಗಲು ಅಥವಾ ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಪ್ರತಿಯೊಬ್ಬರೂ ಅನುಭವಿಸುತ್ತಿದ್ದಾರೆ. ಹೆಚ್ಚಿನ ವಿದ್ಯುತ್ ಬಿಲ್ ಮತ್ತು ವಿದ್ಯುತ್ ಕೊರತೆಯಿಂದಾಗಿ ಹವಾ ನಿಯಂತ್ರಣ (ಎಸಿ) ಅನ್ನು ಎಲ್ಲ ಸಮಯದಲ್ಲೂ ಬಳಸಲು ಆಗುವುದಿಲ್ಲ.

    ಅಂದಹಾಗೆ ಎಸಿ ಖರೀದಿಸುವುದು ಅಂದರೆ ಸಾಮಾನ್ಯ ಜನರಿಗೆ ದೊಡ್ಡ ವೆಚ್ಚವಾಗಿದೆ. ಆದರೆ, ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ. ನಿಮ್ಮ ಬಳಿ ಕೆಲವು ಕಾರ್ಡ್​ಬೋರ್ಡ್​ ತುಣುಕುಗಳು ಇದ್ದರೆ ಸಾಕು ನಿಮ್ಮ ಮನೆಯನ್ನು ತಂಪಾಗಿರಿಸಲು ನೆರವಾಗುತ್ತವೆ. ಹಾಗಾದರೆ, ಮನೆಯನ್ನು ಎಸಿಯಂತೆ ತಂಪಾಗಿಸುವುದು ಹೇಗೆ ಎಂಬುದನ್ನು ನಾವೀಗ ನೋಡೋಣ.

    ಈ ಸರಳ ಪರಿಹಾರಕ್ಕಾಗಿ ಅಗತ್ಯವಾಗಿ ಕಾರ್ಡ್​ಬೋರ್ಡ್​ ಮತ್ತು ನೀರು ಬೇಕಿದೆ. ಬೇಕಾದಷ್ಟು ಕಾರ್ಡ್​ಬೋರ್ಡ್​ ತೆಗೆದುಕೊಂಡು ನಿಮ್ಮ ರೂಮಿನ ಮೇಲೆ ಅಥವಾ ಮನೆಯ ಟೆರೇಸ್ ಮೇಲೆ ಇಡಿ.​ ಅದು ಹೇಗೆಂದರೆ, ಕಾರ್ಡ್​ಬೋರ್ಡ್​ಗಳನ್ನು ಹಾಸಿಗೆ ಹಾಸಿದಂತೆ ಟೆರೇಸ್​ ಪೂರ್ತಿ ಹರಡಿ. ಬಳಿಕ ಕಾರ್ಡ್​ಬೋರ್ಡ್​ಗಳು ಒದ್ದೆಯಾಗುವಷ್ಟು ನೀರು ಹಾಕಿ. ಇದನ್ನು ಸಂಜೆಯ ಸಮಯದಲ್ಲೇ ಮಾಡಬೇಕು. ರಾತ್ರಿ ಸಮಯದಲ್ಲಿ ನೀವು ಫ್ಯಾನ್​ ಆನ್​ ಮಾಡಿದಾಗ ನಿಮ್ಮ ರೂಮ್​ ಅಥವಾ ಮನೆ ತುಂಬಾ ಕೂಲ್​ ಆಗಿರುತ್ತದೆ.

    ನಿಮಗೆ ಈ ಒಂದು ಸಲಹೆ ಕೇಳಿ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    ಬೇಸಿಗೆ ಬಿಸಿ ತಣಿಸಲು ಪೆಟ್ರೋಲ್​ ಬಂಕ್​ ಮಾಲೀಕನ ಐಡಿಯಾಗೆ ಫಿದಾ! ಬಂಕ್​ ಮುಂದೆ ಜನವೋ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts