More

    ಚುನಾವಣಾ ಕರ್ತವ್ಯ ಲೋಪ: ಇಂಜಿನಿಯರ್ ಅಮಾನತು

    ಕಾರವಾರ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಬಂದರು ಇಲಾಖೆ ಇಂಜಿನಿಯರ್ ಅವರನ್ನು ಅಮಾನತು ಮಾಡಲಾಗಿದೆ.‌
    ಬಂದರು ಇಲಾಖೆ ಕಾರವಾರ ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್
    ಪಾಂಡುರಂಗ ಕುಲಕರ್ಣಿ ಅಮಾನತಾಗಿದ್ದಾರೆ.

    ಎಫ್ ಎಸ್ ಟಿ ತಂಡದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಚುನಾವಣಾ ಕೆಲಸದಲ್ಲಿ ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅವರನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.
    ಪ್ರಜಾ ಪ್ರಾತಿನಿಧಿ ಕಾಯ್ದೆ 1950 ಕಲಂ 32 ರಡಿ ಹಾಗೂ ಪ್ರಜಾ ಪ್ರಾತಿನಿಧಿ ಕಾಯ್ದೆ 1951 ರ ಕಲಂ 134 ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಇಂಜಿನಿಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶವಾಗುವವರೆಗೆ ಅಮಾನತ್ತು ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

    ಅಲ್ಲದೆ, ಅವರು ಅಮಾನತ್ ಅವಧಿಯಲ್ಲಿ ಮೇಲಾಧಿಕಾರಿಗಳ ಪರವಾನಗಿ ಪಡೆಯದೇ ಕೇಂದ್ರ ಬಿಡತಕ್ಕದ್ದಲ್ಲ ಎಂದು ಸೂಚಿಸಿದ್ದಾರೆ.


    ಇದನ್ನೂ ಓದಿ: ಮಹಿಳಾ ಮತಗಟ್ಟೆ ಸಿಬ್ಬಂದಿಗೆ ಹಸಿರು ಸೀರೆಯ ಬಾಗಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts