More

  ರಾಮಾಯಣದ ಸೀತೆ ಪಾತ್ರಕ್ಕೆ ಆಯ್ಕೆಯಾದ ‘ಕಚ್ಚಾ ಬಾದಾಮ್’ ಬೆಡಗಿ! ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ ಆಗುತ್ತಿರುವುದೇಕೆ?

  ಮುಂಬೈ: ಅದೃಷ್ಟ ಯಾವಾಗ, ಯಾರಿಗೆ ಹೇಗೆ ಒಲಿಯುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಇದಕ್ಕೆ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಕಡಲೆಕಾಯಿ ಮಾರಲು ಹೆಣೆದಿದ್ದ ಕಚ್ಚಾ ಬಾದಾಮ್ ಹಾಡಿಗೆ ಟಿಕ್ ಟಾಕ್ ಮಾಡುವ ಮೂಲಕ ಸೊಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ ಆಗಿ ಹೊರ ಹೊಮ್ಮಿದ ಅಂಜಲಿ ಅರೋರಾ ಉತ್ತಮ ಉದಾಹರಣೆ.

  ಇದನ್ನೂ ಓದಿ: ರಿಸರ್ವೇಶನ್​ ಕುರಿತು ರಾಹುಲ್​ ಗಾಂಧಿಯ ಮಹತ್ವದ ಘೋಷಣೆ: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಶೇಕಡಾ 50ಕ್ಕಿಂತಲೂ ಹೆಚ್ಚು ಮೀಸಲಾತಿ ನೀಡುತ್ತೇವೆ

  ಎರಡ್ಮೂರು ವರ್ಷದ ಹಿಂದೆ ಕಚ್ಚಾ ಬಾದಾಮ್ ದೇಶದೆಲ್ಲೆಡೆ ಸದ್ದು ಮಾಡಿತ್ತು. ಈ ಹಾಡಿನಿಂದ ಭುಬನ್ ಗೆ ಏನು ಸಿಕ್ಕಿತೋ? ಸಿಗಲಿಲ್ಲವೋ ಎಂಬುದು ಬೇರೆ ಮಾತು. ಆದರೆ ಆ ಹಾಡಿಗೆ ರೀಲ್ಸ್ ಮಾಡಿ ಅಸಂಖ್ಯಾತ ಜನ ಬದುಕು ಕಟ್ಟಿಕೊಂಡರು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಪಾಪ್ಯುಲರ್ ಆದರು. ಆ ಪೈಕಿ ಅಂಜಲಿ ಅರೋರಾ ಕೂಡ ಒಬ್ಬರು.

  ಈ ಅಂಜಲಿ ಅರೋರಾ 2022ರಲ್ಲಿ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲಾದ ಸೆಲೆಬ್ರಿಟಿಗಳ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಳು. ಬಳಿಕ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಕೂಡ ಪ್ರತ್ಯಕ್ಷವಾಗಿದ್ದಳು. ಅಷ್ಟೇ ಯಾಕೆ ಬಿಗ್ ಬಾಸ್ ಮನೆಯೊಳಗೆ ಕೂಡ ಹೋಗಿ ಬಂದಳು. ನೋಡ ನೋಡುತ್ತಾ ಕೇವಲ 24ರ ಪ್ರಾಯದಲ್ಲಿಯೇ ಒಂದಲ್ಲ, ಎರಡಲ್ಲ ನಾಲ್ಕು ಕೋಟಿ ಮನೆಯ ಒಡತಿಯಾದಳು.

  ಇಂಥ ಅಂಜಲಿ ಅರೋರಾ ಈಗ ರಾಮಾಯಣ ಚಿತ್ರಕ್ಕೆ ಆಯ್ಕೆಯಾಗಿದ್ದಾಳೆ. ಅದೂ ಸೀತೆಯ ಪಾತ್ರಕ್ಕೆ ಎನ್ನುವುದು ವಿಶೇಷ. ಹಾಗೆಂದು ಅಂಜಲಿ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ರಾಮಾಯಣಕ್ಕೆ ನಾಯಕಿಯಾಗಿದ್ದಾಳೆ ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ, ಆ ರಾಮಾಯಣ ಬೇರೆ, ಈ ರಾಮಾಯಣವೇ ಬೇರೆ.

  See also  ಗ್ರಾಹಕರ ಜೇಬಿಗೆ ಹೊರೆಯಾಯ್ತು ಕೆಂಪು ಹಣ್ಣು! ಶತಕದ ಗಡಿ ದಾಟಿದ ಟೊಮ್ಯಾಟೋ ಬೆಲೆ

  ಬಾಲಿವುಡ್‌ನಲ್ಲಿ ರಣಭೀರ್​ ಕಪೂರ್, ಸಾಯಿ ಪಲ್ಲವಿ, ಯಶ್ ನಟನೆಯ ರಾಮಾಯಣ ಮಾತ್ರವಲ್ಲ, ಇನ್ನೊಂದು ಅಭಿಷೇಕ್ ಸಿಂಗ್ ನಿರ್ದೇಶನ ಇರುವ ರಾಮಾಯಣ ಸಹ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಪ್ರಕಾಶ್ ಮತ್ತು ಸಂಜಯ್ ನಿರ್ಮಾಪಕರು. ಇದರಲ್ಲಿ ಅಂಜಲಿ ಸೀತೆಯಾದರೆ, ರಾಮನ ಪಾತ್ರ ನಿರ್ವಹಿಸುವುದು ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಇನ್ನೂ ಉತ್ತರ ಇಲ್ಲ. ರಾವಣ ಯಾರು ಅನ್ನುವುದು ಗೊತ್ತಿಲ್ಲ. ಆದರೆ.. ಅಂಜಲಿ ಮಾತ್ರ ಸಿಕ್ಕ ಈ ಸುವರ್ಣ ಅವಕಾಶದಲ್ಲಿ ತೇಲುತ್ತಿದ್ದಾರೆ. ಆ ಸೀತಾ ಮಾತೆಯ ಆಶೀರ್ವಾದದಿಂದ ಇಷ್ಟೊಂದು ನಾಯಕಿಯರು ಇರುವಾಗ ಸೀತೆಯ ಪಾತ್ರ ನನ್ನನ್ನೇ ಹುಡುಕಿಕೊಂಡು ಬಂದಿದೆ ಎಂದಿದ್ದಾರೆ ಅಂಜಲಿ.

  ಇನ್ನು ಅಂಜಲಿ ಅರೋರಾ ಸೀತೆಯ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಹೊರ ಬಂದ ಕ್ಷಣದಿಂದ, ಒಂದು ವರ್ಗ ಸಾಮಾಜಿಕ ಜಾಲತಾಣದಲ್ಲಿ ಈಕೆಯನ್ನು ಟ್ರೋಲ್ ಮಾಡುತ್ತಿದೆ. ಕಂಡ ಕಂಡ ಹಾಡುಗಳಿಗೆ ರೀಲ್ಸ್ ಮಾಡುವ ಹುಡುಗಿಯನ್ನು ಸೀತಾ ದೇವಿಯ ಪಾತ್ರದಲ್ಲಿ ನೋಡುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೇಳುತ್ತಿದೆ. ಆದರೆ ಅಂಜಲಿ ಇದ್ಯಾವುದಕ್ಕೂ ಸದ್ಯಕ್ಕೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಮಾತನಾಡುವವರು ಮಾತನಾಡಲಿ ಬಿಡಿ ಎಂದಿದ್ದಾರೆ.

  ಸ್ಟಾರ್​ ಹೀರೋಯಿನ್ ಆಗಬೇಕು ಅಂದರೆ ಅವರ ಹತ್ರ ಹೋಗಬೇಕು: ರಮ್ಯಾಕೃಷ್ಣ ಶಾಕಿಂಗ್​ ಹೇಳಿಕೆ ವೈರಲ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts