More

    6ನೇ ಹಂತದ ಮತದಾನ ಪ್ರಕ್ರಿಯೆ ಶುರು: ಕನ್ಹಯ್ಯಾ ಕುಮಾರ್​ ಮತ್ತು ಮನೋಜ್ ತಿವಾರಿ ಮಧ್ಯೆ ಬಿಗ್ ಫೈಟ್!

    ನವದೆಹಲಿ: ಲೋಕಸಭಾ ಚುನಾವಣೆ 2024ರ 6ನೇ ಹಂತದ ಮತದಾನದ ಪ್ರಕ್ರಿಯೆ ಇಂದು ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗಿದ್ದು, ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಜಮ್ಮು- ಕಾಶ್ಮೀರಗಳಾದ್ಯಂತ 58 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶದ 14, ಹರಿಯಾಣದ ಎಲ್ಲಾ 10, ದೆಹಲಿಯ 7, ಬಿಹಾರ ಮತ್ತು ಪಶ್ಚಿಮ ಬಂಗಾಳ ತಲಾ 8, ಒಡಿಶಾ 6, ಜಾರ್ಖಂಡ್‌ನ 4 ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಸ್ಥಾನಕ್ಕೆ ಮತದಾನ ನಡೆಯುತ್ತಿದೆ.

    ಇದನ್ನೂ ಓದಿ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ! ಈ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಿದ ಐಎಂಡಿ

    ಒಡಿಶಾದ 42 ಕ್ಷೇತ್ರಗಳಿಗೂ ಏಕಕಾಲಕ್ಕೆ ಮತದಾನ ನಡೆಯುತ್ತಿದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಕ್ರಿಶನ್ ಪಾಲ್ ಗುರ್ಜರ್, ಬಿಜೆಪಿಯ ಮೇನಕಾ ಗಾಂಧಿ, ಸಂಬಿತ್ ಪಾತ್ರ, ಅಭಿಜಿತ್ ಗಂಗೋಪಾಧ್ಯಾಯ, ಮನೋಹರ್ ಲಾಲ್ ಖಟ್ಟರ್ ಮತ್ತು ಮನೋಜ್ ತಿವಾರಿ, ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಮತ್ತು ಕಾಂಗ್ರೆಸ್ ನಾಯಕರಾದ ದೀಪೇಂದರ್ ಸಿಂಗ್ ಹೂಡಾ, ಕನ್ಹಯ್ಯಾ ಕುಮಾರ್​ ಮತ್ತು ರಾಜಹಯ್ಯಾ ಬಬ್ಬ್ ಹೂಡಾ ಸೇರಿದಂತೆ ಹಲವಾರು ಪ್ರಮುಖ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

    ಮಳೆಯ ಮುನ್ಸೂಚನೆ ಇರುವ ರಾಜ್ಯಗಳಲ್ಲಿ ಬಿಸಿ ವಾತಾವರಣ ಅಥವಾ ಮಳೆಯ ಪ್ರತಿಕೂಲ ಪರಿಣಾಮಗಳನ್ನು ನಿರ್ವಹಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ, ಫಲಿತಾಂಶವು ಹೊರಬೀಳಲಿದೆ,(ಏಜೆನ್ಸೀಸ್).

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts