More

  ಹೀಗಿರಲಿ ಮಳೆಗಾಲದಲ್ಲಿ ಜೀವನಶೈಲಿ

  ಹೀಗಿರಲಿ ಮಳೆಗಾಲದಲ್ಲಿ ಜೀವನಶೈಲಿಯತ್ ಬ್ರಹ್ಮಾಂಡೇ ತತ್ ಪಿಂಡಾಂಡಃ’ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಅಂದರೆ ಈ ಬ್ರಹ್ಮಾಂಡ ಹೇಗಿದೆಯೋ ಹಾಗೇ ನಮ್ಮ ಶರೀರವೂ ಇದೆ ಎಂದರ್ಥ. ಪ್ರಕೃತಿಯಲ್ಲಿ ಆಗುವ ಚಿಕ್ಕ ಚಿಕ್ಕ ಬದಲಾವಣೆಗಳೂ ನಮ್ಮ ದೇಹದಲ್ಲಿ ಬದಲಾವಣೆಗಳನ್ನು ತರುತ್ತವೆ. ಹಾಗಾಗಿಯೇ ಆಯುರ್ವೆದ ಆಯಾ ಕಾಲಕ್ಕೆ ಅನುಸಾರವಾಗಿ ನಮ್ಮ ಆಹಾರ, ದಿನಚರಿ ಹೇಗಿರಬೇಕು ಎಂಬುದನ್ನು ವಿವರಿಸಿದೆ. ಇದಕ್ಕೆ ಋತುಚರ್ಯ ಎಂದು ಕರೆಯುತ್ತಾರೆ. ಇಂದು ನಾವು ಮಳೆಗಾಲದಲ್ಲಿ ನಮ್ಮ ಜೀವನಶೈಲಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ. ಇವುಗಳನ್ನು ಪಾಲಿಸುವುದರಿಂದ ನಮ್ಮ ಭವಿಷ್ಯ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ.

  ಆಹಾರದಲ್ಲಿ ಇರಲಿ ಕಾಳಜಿ: ಜೀರ್ಣಶಕ್ತಿಯ ಕೊರತೆಯಿರುವ ಕಾರಣ ಸುಲಭವಾಗಿ ಜೀರ್ಣವಾಗುವ ಪದಾರ್ಥಗಳನ್ನೇ ಈ ಕಾಲದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ, ಈರುಳ್ಳಿ, ಇಂಗು, ಕರಿಬೇವು, ಜೋನಿಬೆಲ್ಲ, ಬೆಣ್ಣೆ ತೆಗೆದ ಮಜ್ಜಿಗೆ, ಅರಿಶಿನದಂತಹ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಒಳ್ಳೆಯದು. ಮಳೆಗಾಲದಲ್ಲಿ ಬಿಸಿನೀರಿನ ಸೇವನೆ ಸೂಕ್ತವೆಂದು ಆಯುರ್ವೆದ ಹೇಳುತ್ತದೆ. ಬಿಸಿಲಿದ್ದ ದಿನಗಳಲ್ಲಿ ಕಾಯಿಸಿ ಆರಿಸಿದ ನೀರಿನ ಸೇವನೆ ಮಾಡಬಹುದು. ಎಲ್ಲಾ ರೀತಿಯ ನೀರುಗಳಲ್ಲಿ ಮಳೆಯ ನೀರು ಶ್ರೇಷ್ಠವಾದದ್ದು ಮತ್ತು ದಿವ್ಯವಾದದ್ದು ಎಂದು ಆಯುರ್ವೆದ ಹೇಳುತ್ತದೆ. ಸ್ಟೀಲ್ ಅಥವಾ ಮಣ್ಣಿನ ಪಾತ್ರೆಗೆ ತೆಳುವಾದ ಬಟ್ಟೆಯನ್ನು ಕಟ್ಟಿ ಅಕ್ಕ ಪಕ್ಕದಲ್ಲಿ ಬಿದ್ದ ನೀರು ಪಾತ್ರೆಯ ಒಳಗೆ ಸಿಡಿಯದಂತಹ ಜಾಗದಲ್ಲಿ ಇಟ್ಟು ಸಂಗ್ರಹಿಸಿದ ನೀರನ್ನು ಸೇವಿಸುವುದು ಅತ್ಯಂತ ಆರೋಗ್ಯದಾಯಕವಾದದ್ದು. ಕೊತ್ತಂಬರಿ, ಜೀರಿಗೆ, ಶುಂಠಿ, ಕಾಳುಮೆಣಸು, ದಾಲ್ಚಿನ್ನಿ, ಲವಂಗದಂತಹ ಸಾಂಬಾರ ಪದಾರ್ಥಗಳನ್ನು ವಿವಿಧ ರೂಪದಲ್ಲಿ ಹೆಚ್ಚಾಗಿ ಬಳಸಬೇಕು. ಇವುಗಳಿಂದ ವಾತ ಕಫಗಳು ಹತೋಟಿಯಲ್ಲಿದ್ದು, ಜೀರ್ಣಶಕ್ತಿ ಹೆಚ್ಚಾಗಿ ಆರೋಗ್ಯ ರಕ್ಷಣೆಯಾಗುತ್ತದೆ. ಉಷ್ಣ ಗುಣವಿರುವ ಕಾರಣ ಮತ್ತು ಜೀರ್ಣಕಾರಿಯಾದ ಕಾರಣ ಜೇನುತುಪ್ಪವನ್ನು ಮಳೆಗಾಲದಲ್ಲಿ ಹೆಚ್ಚಾಗಿ ಸೇವಿಸಬೇಕು. ಇದರ ಸೇವನೆಯಿಂದ ಅಜೀರ್ಣ, ಆಮಶಂಕೆ, ಅಲರ್ಜಿ, ಚರ್ಮರೋಗ, ಕೆಮ್ಮು, ರಕ್ತವಿಕಾರ, ಕ್ರಿಮಿರೋಗ, ಆಮವಾತ, ಅಸ್ತಮಾದಂತಹ ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುವ ಸಮಸ್ಯೆಗಳನ್ನು ದೂರವಿಡಬಹುದು. ಕರಿದ ಪದಾರ್ಥ ಬೇಡ

  See also  ಬ್ಯಾಂಕುಗಳಲ್ಲಿ ಠೇವಣಿ, ಉಳಿತಾಯ ಯೋಜನೆಗಳ ಭವಿಷ್ಯವೇನು?

  ಜೀರ್ಣಕ್ರಿಯೆ ಕಡಿಮೆಯಿರುವ ಕಾರಣ ಕರಿದ ಪದಾರ್ಥಗಳ ಸೇವನೆಗೆ ಇದು ಸರಿಯಾದ ಕಾಲವಲ್ಲ. ತಂಪನೆಯ ವಾತಾವರಣದಲ್ಲಿ ಚೆನ್ನಾಗಿರುತ್ತದೆಂದು ಯಥೇಚ್ಚವಾಗಿ ಕುರುಕಲು ತಿಂಡಿಗಳನ್ನು ಸೇವಿಸಿದರೆ ಇಂದಲ್ಲ ನಾಳೆ ಡಯಾಬಿಟೀಸ್, ಆಮಶಂಕೆಯಂತಹ ಸಮಸ್ಯೆಗಳು ಬಂದೇ ಬರುತ್ತವೆ. ಒಂದು ವೇಳೆ ಸಂಜೆಯ ಸಮಯದಲ್ಲಿ ಅಪರೂಪಕ್ಕೆ ಸುಲಭವಾಗಿ ಜೀರ್ಣವಾಗದ ಪದಾರ್ಥಗಳನ್ನು ಸೇವಿಸಿದರೆ ಆ ದಿನ ರಾತ್ರಿ ಊಟವನ್ನು ಬಿಡುವುದು ಒಳಿತು.

  ಎಲ್ಲಾ ರೀತಿಯ ಯೋಗಾಸನಗಳನ್ನು ಮತ್ತು ವಿಶೇಷವಾಗಿ ಪ್ರಾಣಾಯಾಮವನ್ನು ಚೆನ್ನಾಗಿ ಮಾಡಲು ಇದು ಸೂಕ್ತ ಕಾಲ. ಇದರಿಂದ ಶರೀರ ಮತ್ತು ಮನಸ್ಸಿನ ಜಾಡ್ಯ ತೊಲಗಿ ನಾವು ಸ್ವಸ್ಥರಾಗಿರಬಹುದು. ಆದರೆ ಈ ಕಾಲದಲ್ಲಿ ಬಸವಳಿಯುವಂತೆ ವ್ಯಾಯಾಮ ಮಾಡುವುದು ಸರಿಯಲ್ಲ ಎನ್ನುತ್ತದೆ ಆಯುರ್ವೆದ. ಅತಿಯಾದ ಲೈಂಗಿಕ ಕ್ರಿಯೆಯೂ ಈ ಕಾಲದಲ್ಲಿ ಸರಿಯಲ್ಲ. ಮಳೆಗಾಲದಲ್ಲಿ ಸೂರ್ಯೋದಯ ಬೇಗನೇ ಆಗುವ ಕಾರಣ ನಾವು ಬೇಗನೇ ಎದ್ದೇಳಲೇಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಸುಮಾರು 4.30 ಯಿಂದ 5.15 ನಡುವಿನ ಸಮಯದಲ್ಲಿ ಎದ್ದೇಳುವುದು ಸೂಕ್ತವಾದದ್ದು (ಮಳೆಗಾಲದಲ್ಲಿ ಬ್ರಾಹ್ಮಿ ಮುಹೂರ್ತ ಬಹುತೇಕ ಈ ಅವಧಿಯಲ್ಲಿರುತ್ತದೆ). ಸೂರ್ಯೋದಯದ ನಂತರವೂ ಮಲಗಿದ್ದರೆ ಅದರಿಂದ ಅಲರ್ಜಿ, ಅಜೀರ್ಣದಂತಹ ಸಮಸ್ಯೆಯಾಗುತ್ತದೆ. ಮಳೆಗಾಲದಲ್ಲಿ ಹಗಲುನಿದ್ದೆಯಂತೂ ಸರ್ವಥಾ ರ್ವ್ಯಜ. ರಾತ್ರಿ ಊಟದ ನಂತರ ಕನಿಷ್ಠ ಒಂದೂವರೆ ತಾಸು ಬಿಟ್ಟು ಮಲಗುವುದು ಸೂಕ್ತ.

  ಚರ್ಮರೋಗ ತಡೆಯಲು: ಬೆಚ್ಚನೆಯ ನೀರಿನಿಂದ ಸ್ನಾನ ಮಾಡಬೇಕು. ಅಂಟುವಾಳ ಅಥವಾ ಸೀಗೆಕಾಯಿಯನ್ನು ಬಳಸಿ ಸ್ನಾನ ಮಾಡುವುದರಿಂದ ಮಳೆಗಾಲದಲ್ಲಿ ಸುಲಭವಾಗಿ ಬರುವ ಚರ್ಮರೋಗಗಳನ್ನು ತಡೆಯಬಹುದು. ಯಾವ ಕಾರಣಕ್ಕೂ ಒದ್ದೆ ಬಟ್ಟೆ ಧರಿಸುವುದಾಗಲಿ, ಒದ್ದೆ ಮೈಯನ್ನು ಒರೆಸಿಕೊಳ್ಳದೇ ಇರುವುದಾಗಲೀ ಮಾಡಬಾರದು. ಇದರಿಂದ ಗಜಕರ್ಣ (ರಿಂಗ್ ವಮ್ರ್) ದಂತಹ ಚರ್ಮದ ಸಮಸ್ಯೆಗಳು ಕಾಡಲು ಪ್ರಾರಂಭವಾಗಬಹುದು.

  See also  ಎನ್‌ಇಪಿ ರದ್ದು ಮಾಡಬೇಡಿ: ಎಬಿವಿಪಿ ಅಭಿಯಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts