More

  ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ಸಿಗಲಿ; ನಟ ಕಿಚ್ಚ ಸುದೀಪ್​​​

  ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್​ ಆಗಿದ್ದಾರೆ.ಈಗಾಗಲೇ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಿಚ್ಚ ಸುದೀಪ್​​ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

  ಇದನ್ನು ಓದಿ: ನೀಟ್​ ವಿವಾದ; ಸುಪ್ರೀಂಕೋರ್ಟ್​ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹಿಸಿದ ಕಪಿಲ್ ಸಿಬಲ್

  ಈ ಪ್ರಕರಣವನ್ನು ನಾನು ಒಬ್ಬ ಕಾಮನ್​ ಮ್ಯಾನ್​​ ರೀತಿ ನೋಡುತ್ತಿದ್ದೇನೆ. ಅವರ ಪರ ಇವರ ಪರ ಮಾತನಾಡುವುದು ತಪ್ಪಾಗುತ್ತದೆ. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ಹಾಗೂ ಹುಟ್ಟಬೇಕಾಗಿರುವ ಅವರ ಮಗುವಿಗೆ ನ್ಯಾಯ ಸಿಗಬೇಕು. ಕಾನೂನಿನ ಮೇಲೆ ಜನರಿಗೆ ನಂಬಿಕೆ ಬರುವಂತಹ ಕೆಲಸ ನಡೆಯುತ್ತಿದೆ. ಸತ್ಯಾಂಶ ಹೊರಬರಲೆಂದು ಪೊಲೀಸರು, ಮಾಧ್ಯಮದವರು ಕೆಲಸ ಮಾಡಿದ್ದಾರೆ. ಕಾನೂನಿನ ಮೇಲೆ ನಂಬಿಕೆ ಬರುವ ಕೆಲಸ ಆಗಲಿ ಎಂದು ಹೇಳಿದ್ದಾರೆ.

  ಮೊದಲಿನಿಂದಲೂ ನೀವು ದರ್ಶನ್​ ಅವರ ವಿಚಾರವಾಗಿ ಮೃದುಧೋರಣೆ ಹೊಂದಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್​, ಜಸ್ಟೀಸ್ ಬೇರೆ.. ಫ್ರೆಂಡ್ ಶಿಪ್ ಬೇರೆ.. ರಿಲೇಶನ್ ಶಿಪ್ ಬೇರೆ. ಈಗ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಿದೆ. ಸ್ನೇಹಿತರೆ ಆಗಿರಲಿ ಯಾರೇ ಆಗಿರಲಿ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ತರಬಾರದು. ಕನ್ನಡ ಚಿತ್ರರಂಗದ ಹೆಸರು ಯಾರಿಂದಲೂ ಹಾಳಾಗಬಾರದು. ಕನ್ನಡ ಚಿತ್ರರಂಗಕ್ಕೆ ಇತಿಹಾಸವಿದೆ. ಚಿತ್ರರಂಗ ಅಂದ್ರೆ ಒಬ್ಬರು ಇಬ್ಬರಲ್ಲ, ತುಂಬಾ ಜನರ ತ್ಯಾಗದಿಂದ ನಮಗೆ ಈ ಶಕ್ತಿ ಸಿಕ್ಕಿದೆ. ನಾನೂ ಚಿತ್ರರಂಗಕ್ಕೆ ಸೇರಿದ್ದೇನೆ. ಚಿತ್ರರಂಗಕ್ಕೆ ಕ್ಲೀನ್ ಚಿಟ್ ಸಿಗಬೇಕಿದೆ ಎಂದು ಹೇಳಿದರು.

  ಚಿತ್ರರಂಗದಿಂದ ನಟ ದರ್ಶನ್​ ಬ್ಯಾನ್​ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಆರೋಪ ಮುಕ್ತರಾದ ಬಳಿಕ ಬ್ಯಾನ್ ಮಾಡೋಕ್ಕಾಗುತ್ತಾ..? ನಾವ್ಯಾರು ಕಾನೂನಲ್ಲ ಸರ್ ಬ್ಯಾನ್ ಮಾಡಲು ಆಗಲ್ಲ. ದರ್ಶನ್ ಅವರನ್ನು ಬ್ಯಾನ್ ಮಾಡುವುದು ಮುಖ್ಯವಲ್ಲ. ಕೇಸ್​​​​ನಿಂದ ಹೊರಗಡೆ ಬಂದರೆ ಬ್ಯಾನ್ ಅನ್ನೋದು ಬರೋದಿಲ್ಲ. ಬ್ಯಾನ್ ಮಾಡೋದು ಇಂಪಾರ್ಟೆಂಟ್​ ಅಲ್ಲ. ಜಸ್ಟೀಸ್ ಸಿಗುವುದು ಮುಖ್ಯ. ಆರೋಪಿ ಯಾರು ಅಂತ ಹೇಳೋಕೆ ಜಡ್ಜ್ ಇದ್ದಾರೆ. ಇಲ್ಲಿ ಕುಳಿತಿಕೊಂಡು ನಾವು ಜಡ್ಜ್​​​​ಮೆಂಟ್ ಕೊಡೋಕೆ ಆಗಲ್ಲ. ನ್ಯಾಯಾಲಯದಿಂದ ಬರುವ ತೀರ್ಪಿಗೆ ನಾವೆಲ್ಲಾ ತಲೆಬಾಗಬೇಕು. ಈಗ ನಮ್ಮ ಕಣ್ಮುಂದೆ ಬರೋದೇ ಆ ಫ್ಯಾಮಿಲಿ. ಯಾರೇ ಆಗಲಿ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದಿದ್ದಾರೆ.

  See also  ವಿವಿ ಕಲಾ ಕಾಲೇಜಿಗೆ ಪ್ರವೇಶ ಆರಂಭ

  ಅಷ್ಟೇ ಅಲ್ಲದೆ, ವಾಣಿಜ್ಯ ಮಂಡಳಿ ಮೇಲೆ ಒತ್ತಡ ಹಾಕಿದ್ರೆ ಏನು ಮಾಡಲು ಆಗುತ್ತೆ. ಕೆಲ ತಿಂಗಳ ಹಿಂದೆ ನನ್ನನ್ನು ಇದೇ ರೀತಿ ಬ್ಯಾನ್ ಮಾಡುವಂತೆ ಒತ್ತಡ ಹೇರಿದ್ರು. ಇಲ್ಲಿ ಬ್ಯಾನ್ ಅನ್ನೋದು ವರ್ಡ್ ಅಲ್ಲ‌, ಇಲ್ಲಿ ಇರೋದು ನ್ಯಾಯ. ಈ ಪ್ರಕರಣದಲ್ಲಿ ನ್ಯಾಯ ಏನಾಗುತ್ತೆ ಅಂತ ದುರ್ಬೀನ್ ಹಾಕ್ಕೊಂಡು ಎಲ್ಲರೂ ನೋಡ್ತಾ ಇದ್ದೀವಿ ಎಂದು ಹೇಳಿದ್ದಾರೆ.

  ಸೆಲೆಬ್ರಿಟಿಗಳು ಅಂದ್ರೆ ನಾವ್ಯಾರು ದೇವರಲ್ಲ. ನಾವು ತಪ್ಪು ಮಾಡುತ್ತಾ ಇರ್ತೀವಿ, ಬೈಯಿಸಿಕೊಳ್ತಾ ಇರ್ತೀವಿ. ನಮ್ಮ ಮೇಲೆ ಒತ್ತಡ ಹೇರಬಾರದು. ಇದು ನನ್ನ ಮನವಿ. ಚಿತ್ರೋದ್ಯಮದ ನಿಲುವು ಕೇಳಬೇಡಿ. ಈಗ ಏನಾದರೂ ನಿಲುವು ತೆಗೆದುಕೊಂಡರೆ ಕಾಮಿಡಿ ಆಗುತ್ತೇವೆ ಎಂದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts