More

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಚೆನ್ನೈ: ನಿನ್ನೆ (ಮೇ.24) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಕ್ವಾಲಿಫೈರ್​ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಪ್ಯಾಟ್​ ಕಮ್ಮಿನ್ಸ್​ ಪಡೆ 36 ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಫೈನಲ್​ಗೆ ಲಗ್ಗೆಯಿಟ್ಟ ಎಸ್​ಆರ್​ಎಚ್​, ಮತ್ತೊಮ್ಮೆ ಕೆಕೆಆರ್​ ಜತೆಗೆ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.

    ಇದನ್ನೂ ಓದಿ: ರಾಜಸ್ಥಾನ್ ಮಣಿಸಿ ಫೈನಲ್​​ಗೇರಿದ ಸನ್​ರೈಸರ್ಸ್; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

    ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್​ಆರ್​, ಎಸ್​ಆರ್​​ಎಚ್​ಗೆ ಬ್ಯಾಟ್ ಮಾಡುವಂತೆ ತಿಳಿಸಿತು. ಅದರಂತೆಯೇ ಕಣಕ್ಕಿಳಿದ ಸನ್​ರೈಸರ್ಸ್​ ಬ್ಯಾಟ್ಸ್​ಮನ್​ಗಳು 20 ಓವರ್​ಗಳಲ್ಲಿ 175 ರನ್​ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು. ಕಮ್ಮಿನ್ಸ್​ ಪಡೆ ನೀಡಿದ ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಪಡೆ ಉತ್ತಮ ಆರಂಭ ಪಡೆದರೂ ಸಹ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು. 36 ರನ್​ಗಳಿಂದ ಹೀನಾಯ ಸೋಲು ಕಂಡ ಆರ್​ಆರ್​ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ, ಅಸಮಾಧಾನಗಳು ವ್ಯಕ್ತವಾಗಿವೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೂಡ ಸೋಲಿನ ಕುರಿತು ವ್ಯಂಗ್ಯವಾಡಿದ್ದಾರೆ.

    ಐಪಿಎಲ್ 17ನೇ ಸೀಸನ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭದಿಂದಲೂ ಆಕರ್ಷಕ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ಸಂಜು ಸ್ಯಾಮ್​ಸನ್​ ಮತ್ತು ರಿಯಾನ್ ಪರಾಗ್​ ಲೀಗ್​ ಅಂತ್ಯದ ವೇಳೆಗೆ ಇಬ್ಬರೂ ತಲಾ 500 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸಂಜು ಮತ್ತು ಪರಾಗ್​ಗೆ ಖುಷಿ ನೀಡಿದ್ದೇ ಆದ್ರೂ, ಭಾರತ ಕ್ರಿಕೆಟ್ ತಂಡದ ಹಿರಿಯ ಮಾಜಿ ಆಟಗಾರ ಸುನಿಲ್ ಗವಾಸ್ಕರ್​ಗೆ ಭಾರೀ ಅಸಮಾಧಾನ ಮೂಡಿಸಿದೆ. ನಾಯಕನಾದ ಸ್ಯಾಮ್​ಸನ್​ ತಮ್ಮ ಖಾತೆಗೆ ಹೆಚ್ಚುವರಿ ರನ್​ ಸೇರಿಸಿಕೊಂಡರು. ಆದರೆ, ತಂಡಕ್ಕೆ ಒಂದು ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ ಅಂದಮೇಲೆ ಅದನ್ನು ಗಳಿಸಿ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ನಾನೇ ನಾಯಕ, ನಾನೇ ಖಳನಾಯಕ ; ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಕ್ಷೇತ್ರಪತಿ ನವೀನ್ ಶಂಕರ್​

    “ಸನ್​ರೈಸರ್ಸ್ ಬ್ಯಾಟ್ಸ್​ಮನ್​ಗಳು​ ಆಕರ್ಷಕ ಬ್ಯಾಟಿಂಗ್ ಮಾಡಿ ಪೆವಿಲಿಯನ್​ನತ್ತ ಮುಖಮಾಡಿದರು. ಆದ್ರೆ, ನೀವು ಗಳಿಸಿದ 500 ರನ್​ ಏನು ಪ್ರಯೋಜನ? ನಿಮ್ಮ ಫ್ರಾಂಚೈಸಿಗೆ ಒಂದೇ ಒಂದು ಪಂದ್ಯ ಗೆಲ್ಲಿಸಿಕೊಡಲು ನಿಮ್ಮಿಂದ ಆಗಲಿಲ್ಲ ಅಂದಮೇಲೆ, ಈ ಬೃಹತ್​ ರನ್​ ಲೆಕ್ಕಕ್ಕಿಲ್ಲ ಎಂದೇ ಅರ್ಥ. ಇದೇ ಕಾರಣಕ್ಕೆ, ಸ್ಯಾಮ್ಸನ್ ಇಂದಿಗೂ​ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರವಾಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಉತ್ತಮ ಶಾಟ್​ ಸೆಲೆಕ್ಷನ್​ ಇಲ್ಲದ ಸಂಜು, ಮುಂದಿನ ದಿನಗಳಲ್ಲಿ ಇದನ್ನು ಸರಿಯಾಗಿ ಅರಿತು, ಐಸಿಸಿ ವಿಶ್ವಕಪ್ ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿ ಎಂದು ನಾನು ಆಶಿಸುತ್ತೇನೆ” ಎಂದಿದ್ದಾರೆ,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts