More

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ನವದೆಹಲಿ: ನಿನ್ನೆ (ಮೇ.22) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಮತ್ತು ಆರ್​ಆರ್​ ನಡುವಿನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಪಡೆ 4 ವಿಕೆಟ್​ಗಳ ಅಂತರದಿಂದ ಬೆಂಗಳೂರು ಪಡೆಯನ್ನು ಮಣಿಸಿ, ಕ್ವಾಲಿಫೈರ್​ 2ಗೆ ಅಧಿಕೃತ ಪ್ರವೇಶ ಪಡೆಯಿತು. ಈ ಸೀಸನ್​ನ ಮೊದಲಿನಿಂದಲೂ ಆರ್​ಸಿಬಿ ಗೆಲುವಿನ ಮೇಲೆ ಭಾರೀ ಕಣ್ಣಿಟ್ಟಿದ್ದ ಕ್ರಿಕೆಟ್ ಫ್ಯಾನ್ಸ್​ ಮತ್ತು ಮಾಜಿ ಕ್ರಿಕೆಟಿಗರು, ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್​ಸಿಬಿ ಸೋಲುತ್ತಿದ್ದಂತೆ, ಈ ಬಾರಿಯೂ ಕಪ್ ಕನಸು ನುಚ್ಚನೂರಾಯಿತು ಎಂದೇ ಅಭಿಪ್ರಾಯಿಸಿದರು.

    ಇದನ್ನೂ ಓದಿ: ಮಹಾನಟಿ ನಂತರ ಲೆಜೆಂಡರಿ ಸಿಂಗರ್ ಬಯೋಪಿಕ್ ನಲ್ಲಿ ಕೀರ್ತಿ ಸುರೇಶ್?

    ಕಳೆದ 16 ವರ್ಷಗಳಿಂದಲೂ ಒಂದು ಬಾರಿಯೂ ಕಪ್ ನೋಡದ ಆರ್​ಸಿಬಿ ಖಂಡಿತ 17ನೇ ಸೀಸನ್​ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಅನೇಕ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಲೀಗ್​ನ ಮಧ್ಯಂತರದಲ್ಲಿ ಸತತ ಸೋಲುಗಳಿಂದ ಕಂಗೆಟ್ಟು, ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿದ್ದನ್ನು ನೋಡಿ, ಪ್ಲೇಆಫ್ ಕನಸು ಮುಗಿಯಿತು ಎಂದೇ ಭಾವಿಸಿದ್ದರು. ಇದೆಲ್ಲದರ ನಡುವೆ ಬ್ಯಾಕ್ ಟು ಬ್ಯಾಕ್ ಗೆಲುವಿನ ಮೂಲಕ ಟಾಪ್ ಐದಕ್ಕೆ ಬಂದು, ರೋಚಕ ನಾಕೌಟ್ ಪಂದ್ಯದಲ್ಲಿಯೂ ಸಿಎಸ್​ಕೆ ಮಣಿಸಿದ ಆರ್​ಸಿಬಿ, ಐತಿಹಾಸಿಕವಾಗಿ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿತು. ಇದು ನೋಡುಗರ ಹುಬ್ಬೇರುವಂತೆ ಮಾಡಿತು. ಜತೆಗೆ ಕೆಲವರ ಬಾಯಿಯನ್ನು ಮುಚ್ಚುವಂತೆ ಸಹ ಮಾಡಿತ್ತು.

    ಇನ್ನು ಈ ಸೀಸನ್​ನಲ್ಲಿ ಕಳೆದ ಆರ್​ಸಿಬಿ ಮತ್ತು ಸಿಎಸ್​ಕೆ ನಾಕೌಟ್ ಪಂದ್ಯವನ್ನು ನೋಡಿದವರ ಸಂಖ್ಯೆ ಗಮನಿಸಿದರೆ ಒಂದು ನಿಮಿಷ ಭಾರೀ ಆಶ್ಚರ್ಯಕ್ಕೆ ಒಳಗಾಗುವುದರಲ್ಲಿ ಅನುಮಾನವೇ ಬೇಡ. ಯಾಕಂದ್ರೆ, ಈ ರೋಚಕ ಪಂದ್ಯವನ್ನು ಕೇವಲ ಆನ್​ಲೈನ್​ನಲ್ಲಿ ನೋಡಿದವರು 50 ಕೋಟಿ ಜನ. ಅಂದಮೇಲೆ ಉಳಿದದ್ದು? ನೀವೇ ಊಹಿಸಿ. ಪ್ರತಿಬಾರಿಯ ಸೀಸನ್​ನಲ್ಲಿಯೂ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ನೋಡಲು ಫ್ಯಾನ್ಸ್​ ಹಂಬಲಿಸಿದರೆ, ಸಿಎಸ್​ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಸದ್ಯ ಇದೇ ವಿಷಯವನ್ನು ಉಲ್ಲೇಖಿಸಿದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಧೋನಿ ಮತ್ತು ಕೊಹ್ಲಿ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ‘ಪ್ರಧಾನಿ ಮೋದಿಗೆ ಗೆಲುವು ಖಚಿತ…’ ಬಿಜೆಪಿಗೆ 295-315 ಸ್ಥಾನ ಪಕ್ಕಾ; ಭವಿಷ್ಯ ನುಡಿದ ಇಯಾನ್ ಬ್ರೆಮ್ಮರ್

    ಕ್ರಿಕೆಟ್ ಲೋಕದಲ್ಲಿ ಅತ್ಯಂತ ಯಶಸ್ವಿ ನಾಯಕತ್ವ ಹೊಂದಿರುವ ಕ್ರಿಕೆಟಿಗ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ. ಅದು ಕೇವಲ ಒಂದು ಫಾರ್ಮೆಟ್​ಗೆ ಮಾತ್ರ ಸೀಮಿತವಲ್ಲ. ಐಪಿಎಲ್​​ ಇತಿಹಾಸದಲ್ಲಿ ಮಾಹಿ ಅವರದ್ದೇ ಅತ್ಯುತ್ತಮ ಕ್ಯಾಪ್ಟನ್ಸಿ ಮೊದಲಿಗೆ ಕಾಣುವುದು. ಈ ಸಂಗತಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಸಹ ತಿಳಿದಿದೆ. ಕ್ಯಾಪ್ಟನ್ಸಿಯಲ್ಲಿ ಧೋನಿ ಮೊದಲಿಗರಾದರೆ, ರನ್​ಗಳ ಸುರಿಮಳೆ ಹರಿಸುವಲ್ಲಿ, ದಾಖಲೆಗಳನ್ನು ಮುರಿದು ತನ್ನದೇ ಹೊಸ ದಾಖಲೆ ಸೃಷ್ಟಿಸುವಲ್ಲಿ ವಿರಾಟ್ ಕೊಹ್ಲಿ ಮೊದಲಿಗರು. ಈ ಇಬ್ಬರನ್ನು ಮೈದಾನದಲ್ಲಿ ನೋಡುವುದೇ ಕ್ರಿಕೆಟ್ ಪ್ರಿಯರಿಗೆ ಒಂದು ಹಬ್ಬ.

    ಆರ್​ಸಿಬಿ ಪಂದ್ಯ ಸೋತ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, “ವಿರಾಟ್ ಕೊಹ್ಲಿ ಮತ್ತು ಎಂ.ಎಸ್. ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಕಣ್ಣುಗಳು. ಒಮ್ಮೆ ಇವರಿಬ್ಬರು ನಿವೃತ್ತಿ ಘೋಷಿಸಿ, ಹೊರನಡೆದರೆ, ಖಂಡಿತವಾಗಿ ಈಗ ನಾವು ಹೇಗೆ ಐಪಿಎಲ್ ನೋಡುತ್ತಿದ್ದೇವೋ, ಆ ರೀತಿ ಮುಂದಿನ ದಿನಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಟಿ20 ಲೀಗ್​ನಲ್ಲಿ ಪ್ರೀತಿಯಲ್ಲಿ ಬೀಳುವಂತೆ ಮಾಡಿದವರು ಈ ಎರಡು ಸ್ತಂಭಗಳು. ಇಂತಹ ಅದ್ಭುತ ಸ್ಪರ್ಧೆಯಲ್ಲಿ ಧೋನಿ ಮತ್ತು ವಿರಾಟ್ ಆಡುವುದನ್ನು ನೋಡುವುದೇ ನಮ್ಮ ಸೌಭಾಗ್ಯ” ಎಂದು ಅಭಿಮಾನಿಗಳ ಧ್ವನಿಯಾಗಿ ಈ ಮಾತನ್ನು ಹೇಳಿದ್ದಾರೆ,(ಏಜೆನ್ಸೀಸ್).

    ಆರ್​ಸಿಬಿ ಸೋತ ಬೆನ್ನಲ್ಲೇ ಡಿವಿಲಿಯರ್ಸ್​ ಬಿಚ್ಚುಮಾತು! ಟೀಕಾಕಾರರ ಬಾಯಿ ಮುಚ್ಚಿಸಿದ ಮಿಸ್ಟರ್. 360

    ಡಿಕೆ ಕೊಡುಗೆಗೆ ಸೆಲ್ಯೂಟ್​… ಮನಬಿಚ್ಚಿ ಮಾತನಾಡಿದ ಹರ್ಷ ಭೋಗ್ಲೆ, ಟ್ವೀಟ್ ಮಾಡಿ ಭಾವುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts