More

    ಡಿಕೆ ಕೊಡುಗೆಗೆ ಸೆಲ್ಯೂಟ್​… ಮನಬಿಚ್ಚಿ ಮಾತನಾಡಿದ ಹರ್ಷ ಭೋಗ್ಲೆ, ಟ್ವೀಟ್ ಮಾಡಿ ಭಾವುಕ

    ನವದೆಹಲಿ: ಟೀಮ್​ ಇಂಡಿಯಾದ ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ವಿದಾಯ ಹೇಳುವ ಸುಳಿವು ನೀಡಿದ್ದಾರೆ. ಈ ಬೆನ್ನಲ್ಲೇ ಆರ್​ಸಿಬಿ ತಂಡದವರು ಮತ್ತು ಕ್ರಿಕೆಟ್ ಅಭಿಮಾನಿಗಳು ವ್ಯಾಪಕ ಬೆಂಬಲ ಸೂಚಿಸಿದ್ದು, ತಂಡಕ್ಕೆ ನೀವು ಕೊಟ್ಟ ಕೊಡುಗೆ ಶ್ಲಾಘನೀಯ, ಮೆಚ್ಚುವಂತದ್ದು, ಎಂದು ಅಭಿಮಾನ ಮೆರೆದಿದ್ದಾರೆ. ನಿನ್ನೆ (ಮೇ.22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಸೋಲಿನ ಬಳಿಕ ಇದೀಗ ದಿನೇಶ್ ಕಾರ್ತಿಕ್​ ಮುಂದಿನ ನಡೆ ಹೊರಬಿದ್ದಿದೆ!

    ಇದನ್ನೂ ಓದಿ: ಮಗಳ ಮೂಲಕ ಶಾಲಾ ಬಾಲಕಿಯರಿಗೆ ಗಾಳ ಹಾಕಿ ವೇಶ್ಯಾವಾಟಿಕೆ! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

    ಮೈದಾನದಿಂದ ಡಗ್‌ಔಟ್‌ಗೆ ಹೋಗುತ್ತಿದ್ದಾಗ ಕಾರ್ತಿಕ್ ತಮ್ಮ ಕೈಗವಸುಗಳನ್ನು ತೆಗೆದು ಸ್ಟೇಡಿಯಂ ಸುತ್ತ ನೆರೆದಿದ್ದ ಅಪಾರ ಕ್ರೀಡಾಭಿಮಾನಿಗಳ ಎದುರು ಕೈಬೀಸುವ ಮೂಲಕ ಐಪಿಎಲ್​ನಿಂದ ನಿವೃತ್ತಿಯಾಗುತ್ತಿರುವ ಸುಳಿವು ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. 2024ರ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್, 326 ರನ್ ಗಳಿಸಿ, ಆರ್​ಸಿಬಿ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ.

    ಇನ್ನು ಮೈದಾನದಲ್ಲಿ ಡಿಕೆ ಭಾವುಕರಾಗಿದ್ದನ್ನು ಗಮನಿಸಿದ ಕಮೆಂಟೇಟರ್​ ಹರ್ಷ ಭೋಗ್ಲೆ, “ದಿನೇಶ್ ತೋರಿದ ಸಂಕಲ್ಪ ಮತ್ತು ಹೊಂದಿದ್ದ ಬದ್ಧತೆ ಅಸಾಧಾರಣವಾಗಿದೆ. ಒಬ್ಬ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಲು ದಿನೇಶ್​ ಉತ್ತಮ ಪ್ರದರ್ಶನ ನೀಡಿದ್ದಾರೆ” ಎಂದಿದ್ದಾರೆ.

    ಇದನ್ನೂ ಓದಿ: ಆರ್​ಸಿಬಿ ಸೋಲುತ್ತಿದ್ದಂತೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿ, ಸಂಭ್ರಮಿಸಿದ ಸಿಎಸ್​ಕೆ ಫ್ಯಾನ್ಸ್​! ಇದೇನಾ ನಿಮ್ಮ…

    “ತಮ್ಮ ಸಾಮರ್ಥ್ಯವನ್ನು ಅರಿತು, ತಂಡಕ್ಕೆ ನೀಡಿದ ಕೊಡುಗೆಯನ್ನು ನೋಡಿದಾಗ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು. ನಿಜಕ್ಕೂ ದಿನೇಶ್ ಕಾರ್ತಿಕ್ ಒಬ್ಬ ಉತ್ತಮ ಕ್ರಿಕೆಟಿಗ ಹಾಗೂ ತುಂಬಾ ಒಳ್ಳೆಯ ವ್ಯಕ್ತಿ” ಎಂದು ತಮ್ಮ ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್​) ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

    ಆರ್​ಸಿಬಿ ಸೋಲುತ್ತಿದ್ದಂತೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿ, ಸಂಭ್ರಮಿಸಿದ ಸಿಎಸ್​ಕೆ ಫ್ಯಾನ್ಸ್​! ಇದೇನಾ ನಿಮ್ಮ…

    ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts