More

  ಮಗಳ ಮೂಲಕ ಶಾಲಾ ಬಾಲಕಿಯರಿಗೆ ಗಾಳ ಹಾಕಿ ವೇಶ್ಯಾವಾಟಿಕೆ! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

  ಚೆನ್ನೈ: ಅಕ್ರಮ ದಾರಿ ಹಿಡಿದು ಸಂಪಾದನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇವರಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದ್ದಾರೆ. ವೇಶ್ಯಾವಾಟಿಕೆ, ಮಾದಕ ವಸ್ತು ಮಾರಾಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆ ಮಾಡಿ ಅಪಾರ ಹಣ ಸಂಗ್ರಹಿಸುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಕೆಲ ಅಧಿಕಾರಿಗಳೇ ಬೆಂಬಲ ನೀಡುತ್ತಾರೆ. ಇತ್ತೀಚೆಗಷ್ಟೇ 37ರ ಹರೆಯದ ಮಹಿಳೆಯೊಬ್ಬಳು ಮಾಡಿದ ಕೃತ್ಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ. ಅಪ್ರಾಪ್ತ ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಿ, ಅಪಾರ ಹಣ ವಸೂಲಿ ಮಾಡುತ್ತಿದ್ದಳು. ಆದರೆ, ಆಕೆಯ ಪಾಪದ ಕೊಡ ತುಂಬಿದ್ದರಿಂದ ಇತ್ತೀಚೆಗೆ ಪೊಲೀಸರು ನಡೆಸಿದ ದಾಳಿಯ ವೇಳೆ ಮಹಿಳೆ ಸಿಕ್ಕಿಬಿದ್ದಿದ್ದು, ಈ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಚೆನ್ನೈನಲ್ಲಿ ಈ ಘಟನೆ ನಡೆದಿದೆ.

  ತಮಿಳುನಾಡು ರಾಜ್ಯದ ಚೆನ್ನೈನಲ್ಲಿ ಶಾಲಾ ಬಾಲಕಿಯರನ್ನು ದುರ್ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ನದಿಯಾ ಹೆಸರಿನ 37 ವರ್ಷದ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

  ಚೆನ್ನೈನಲ್ಲಿ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ದೂರು ಪೊಲೀಸ್ ಕಮಿಷನರ್ ಸಂದೀಪ್ ರಾಯ್ ರಾಥೋಡ್ ಅವರಿಗೆ ಬಂದಿತ್ತು. ಮಕ್ಕಳ ಕಲ್ಯಾಣ ಸಮಿತಿ ಈ ದೂರು ನೀಡಿತ್ತು. ಕೇಂದ್ರ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಸೆಲ್ವರಾಣಿ ಅವರ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡು, ಖಚಿತ ಮಾಹಿತಿ ಮೇರೆಗೆ ಚೆನ್ನೈನ ಕೋವಲರವಕ್ಕಂ ಜೈನಗರ 2ನೇ ಬೀದಿಯಲ್ಲಿರುವ ಮನೆಯೊಂದರಲ್ಲಿ ಶೋಧ ನಡೆಸಲಾಯಿತು. ಈ ವೇಳೆ 70 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಹುಡುಗಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ ಹಾಗೂ ಆರೋಪಿಯನ್ನು ವಿಚಾರಣೆ ನಡೆಸಿದಾಗ ನಾದಿಯಾಳ ಅವ್ಯವಹಾರ ಬಯಲಾಗಿದೆ.

  ಆರೋಪಿ ನಾದಿಯಾ, ಬಾಲಕಿಯನ್ನು ತನ್ನ ಬಳಿಗೆ ಕಳುಹಿಸಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ಆತ ಬಹಿರಂಗಪಡಿಸಿದ್ದಾನೆ. ಇದಾದ ಬಳಿಕ ನಾದಿಯಾ ಹಾಗೂ ಆಕೆಯ ಸಹೋದರಿ ಸುಮತಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಕುತೂಹಲಕಾರಿ ಸಂಗತಿಗಳು ಬಯಲಾಗಿವೆ. ಆರೋಪಿ ನಾದಿಯಾಳ ಮಗಳು ಇಂಟರ್ ಸೆಕೆಂಡರಿ ಓದುತ್ತಿದ್ದಾಳೆ. ಶಾಲೆಯಲ್ಲಿ ತನ್ನೊಂದಿಗೆ ಓದುತ್ತಿರುವ ಸುಂದರ, ಬಡ ವಿದ್ಯಾರ್ಥಿನಿಯರನ್ನು ಮನೆಗೆ ಕರೆತರುವಂತೆ ನಾದಿಯಾ ತನ್ನ ಮಗಳಿಗೆ ಹೇಳುತ್ತಿದ್ದಳು.

  ತಾಯಿ ಹೇಳಿದಂತೆ ಮಗಳು ಕೂಡ ತನ್ನ ಸಹಪಾಠಿಗಳನ್ನು ಪ್ರತಿದಿನ ಕರೆದುಕೊಂಡು ಬರುತ್ತಿದ್ದಳು. ವಿದ್ಯಾರ್ಥಿನಿಯರಿಗೆ ಹಣದ ಆಸೆ ತೋರಿಸಿ, ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುತ್ತಿದ್ದಳು. ಇದಕ್ಕಾಗಿ ಆಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದಳು. ಸ್ಥಳೀಯ ದಲ್ಲಾಳಿಗಳ ಮೂಲಕ ಹುಡುಗಿಯರನ್ನು ಲಾಡ್ಜ್‌ಗಳಿಗೆ ಲೈಂಗಿಕ ಬಳಕೆಗಾಗಿ ಕಳುಹಿಸಲಾಗುತ್ತಿತ್ತು ಎಂಬ ಅಂಶವೂ ಬಹಿರಂಗವಾಗಿದೆ. ಒಂದು ಹುಡುಗಿಗೆ ಒಂದು ರಾತ್ರಿಗೆ 25ರಿಂದ 35 ಸಾವಿರ ರೂ.ವರೆಗೂ ಮಾತನಾಡಿ ಸಹೋದರಿ ಸುಮತಿಯ ಪತಿ ರಾಮಚಂದ್ರನ್ ಜತೆ ಆಟೋದಲ್ಲಿ ನಾದಿಯಾ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ.

  ಕೊನೆಗೂ ಪೊಲೀಸರ ದಾಳಿಯಿಂದ ನಾದಿಯಾಳ ಕರಾಳ ಮುಖ ಹೊರಬಿದ್ದಿದೆ. ನಾದಿಯಾ (37), ಆಕೆಯ ಸಹೋದರಿ ಸುಮತಿ (43), ಆಕೆಯ ಸಹೋದರಿಯ ಎರಡನೇ ಪತಿ ರಾಮಚಂದ್ರನ್ (42), ನೇಪಾಳಿ ಯುವಕ ಮಾಯಾ ಒಲಿ (29) ಮತ್ತು ಅಶೋಕ್ (31) ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಅದೇ ರೀತಿ ಸೈದಾಪೇಟೆಯ 70 ವರ್ಷದ ವ್ಯಕ್ತಿ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಲಾಗಿದೆ.

  ರಕ್ಷಿಸಲಾದ ಇಬ್ಬರು ಬಾಲಕಿಯರನ್ನು ಸರ್ಕಾರಿ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಬಂಧಿತ ದಲ್ಲಾಳಿಗಳಿಂದ 7 ಸೆಲ್ ಫೋನ್ ಮತ್ತು ಐಷಾರಾಮಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಮಹಿಳೆಯರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

  ಮಾದಕ ನೋಟದಿಂದಲೇ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮೈಬಿಸಿಯೇರಿಸಿದ್ದ ಈ ಸೌತ್​ ಬ್ಯೂಟಿ ಯಾರು ಗೊತ್ತಾ?

  ಗುರುತೇ ಹಿಡಿಯಲಾಗದಷ್ಟು ಬದಲಾದ ಯಾರೇ ನೀನು ಚೆಲುವೆ, ಕಲಾವಿದ ಚಿತ್ರದಲ್ಲಿ ಮಿಂಚಿದ್ದ ಹೀರಾ! ಫೋಟೋಸ್​ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts