More

  ನ.4ರಿಂದ ಮೂರು ದಿನ ಶ್ರೀಶೈಲ ಪೀಠದ ಉಭಯ ಶ್ರೀಗಳ ಪುಣ್ಯಾರಾಧನೆ 

  ದಾವಣಗೆರೆ: ಶ್ರೀಶೈಲ ಪೀಠದ ಜಗದ್ಗುರು ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ. ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮವನ್ನು ನಗರದಲ್ಲಿ ನವೆಂಬರ್ 4, 5, 6ರಂದು ನಡೆಸಲು ನಿರ್ಧರಿಸಲಾಯಿತು.
  ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಕ್ತರ ಸಮ್ಮುಖದಲ್ಲಿ ದಿನಾಂಕ ನಿಶ್ಚಯಿಸಲಾಗಿ ಅಂತಿಮಗೊಳಿಸಲಾಯಿತು.
  ವರ್ಷಂಪ್ರತಿ ಸೆ. 15ರಂದು ಪುಣ್ಯಾರಾಧನೆ ನಡೆಸಲಾಗುತ್ತಿತ್ತು. ಹಿಂದಿನ ವರ್ಷಗಳಲ್ಲಿ ಗಣಪತಿ ಹಬ್ಬದ ಮೆರವಣಿಗೆಯಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಿದೆ. ಹೀಗಾಗಿ ಆಚರಣೆಯ ತಿಂಗಳನ್ನು ಈ ಬಾರಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
  ನ.2ರಂದು ದೀಪಾವಳಿ ಪಾಡ್ಯ ಇರುವ ಕಾರಣಕ್ಕೆ ಮನೆಗಳಲ್ಲಿ ಲಕ್ಷ್ಮೀ ಪೂಜೆ ಆಚರಿಸಲಿದ್ದು, ಈ ದಿನದಂದು ಪುಣ್ಯಾರಾಧನೆ ಆಚರಣೆ ಬೇಡ ಎಂದು ಮಹಿಳೆಯರು ಮನವಿ ಮಾಡಿದರು.
  ಸೆ. 15ರಂದು ಶ್ರೀ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಅವರ ಪುಣ್ಯಾರಾಧನೆಯನ್ನು ಶ್ರೀಶೈಲಮಠ (ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರ)ದಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಉಭಯ ಶ್ರೀಗಳ ಪುಣ್ಯಾರಾಧನೆ ನವೆಂಬರ್ 4ರಿಂದ ಆರಂಭವಾಗಲಿದ್ದು ಇಷ್ಟಲಿಂಗ ಪೂಜೆ, ಧರ್ಮಸಭೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀಗಳು ಸೂಚನೆ ನೀಡಿದರು.
  ಪುಣ್ಯಾರಾಧನೆ ಸೇವಾ ಸಮಿತಿಯ ಎಂ. ಬನ್ನಯ್ಯ ಸ್ವಾಮಿ ಮಾತನಾಡಿ ಮೂರು ದಿನದ ಪುಣ್ಯಾರಾಧನೆಯ ಬೆಳಗಿನ ಕಾರ್ಯಕ್ರಮಗಳು ಶ್ರೀಶೈಲ ಮಠದಲ್ಲಿ ಜರುಗಲಿವೆ. ಸಂಜೆಯ ಧರ್ಮಸಭೆ ಕಾರ್ಯಕ್ರಮಕ್ಕೆ ಹೆಚ್ಚು ಜನರು ಬರುವ ಹಿನ್ನೆಲೆಯಲ್ಲಿ ಬೇರೆಡೆ ಆಯೋಜಿಸಲಾಗುತ್ತಿದ್ದು ಸ್ಥಳ ನಿಗದಿಯಾಗಿಲ್ಲ ಎಂದರು.
  ಮಹರಾಷ್ಟ್ರ ಇನ್ನಿತರೆ ಭಾಗದ ಭಕ್ತರ ಒತ್ತಾಸೆಯಂತೆ ಮೂರು ದಿನಗಳ ಅವಧಿಗೆ ಕಾರ್ಯಕ್ರಮ ವಿಸ್ತರಣೆಯಾಗಿದೆ. ನ. 4ರಂದು ಬೆಳಗ್ಗೆ ಮೇಯರ್ ಅವರಿಂದ ಧ್ವಜಾರೋಹಣ, ನಂತರ ಉಭಯ ಜಗದ್ಗುರುಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ನಂತರ ಪ್ರಸಾದ ವಿತರಣೆ ಇದೆ.
  ನ.5ರಂದು ಬೆಳಗ್ಗೆ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ನ. 6ರ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಉಭಯ ಶ್ರೀಗಳ ರಜತ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಸಂಜೆ ಸಮಾರೋಪ ಕಾರ್ಯಕ್ರಮವಿದೆ. ಶ್ರೀಶೈಲ ಪೀಠದ ಅಭಿಮಾನಿಗಳು, ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪುಣ್ಯಾರಾಧನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಸಮಿತಿಯೊಂದನ್ನು ರಚಿಸಬೇಕೆಂದೂ ಕೋರಿದರು.
  ಸಭೆಯಲ್ಲಿ ತೊಗರ್ಸಿ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಸಾಮೀಜಿ, ಕೋಣಂದೂರಿನ ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಎಸ್‌ಜೆವಿಪಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್, ಉದ್ಯಮಿ ಎಂ. ಎನ್. ಹರೀಶ್, ಮುಖಂಡರಾದ ಶಿವಾನಂದಪ್ಪ ಭಾನುವಳ್ಳಿ, ಬಲ್ಲೂರು ರವಿಕುಮಾರ್, ಟಿ.ಎಂ. ವಿನಾಯಕಸ್ವಾಮಿ, ಕೆ.ಎಂ. ಪರಮೇಶ್ವರಪ್ಪ, ಎನ್. ಎಂ. ತಿಪ್ಪೇಸ್ವಾಮಿ, ಸಿದ್ದಲಿಂಗಸ್ವಾಮಿ, ಆವರಗೊಳ್ಳ ವಾಗೀಶಯ್ಯ ಇದ್ದರು.

  See also  ಕೆರೆಯಲ್ಲಿ ಮುಳುಗಿ ಬಾಲಕ ಸಾವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts