More

  ಗುರುತೇ ಹಿಡಿಯಲಾಗದಷ್ಟು ಬದಲಾದ ಯಾರೇ ನೀನು ಚೆಲುವೆ, ಕಲಾವಿದ ಚಿತ್ರದಲ್ಲಿ ಮಿಂಚಿದ್ದ ಹೀರಾ! ಫೋಟೋಸ್​ ವೈರಲ್​

  ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

  ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಇಂತಹ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ಕಲಾವಿದ ಮತ್ತು ಯಾರೇ ನೀನು ಚೆಲುವೆ ಸಿನಿಮಾಗಳು ಕೂಡ ಒಂದು.

  ರವಿಚಂದ್ರನ್​ ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿಯೇ ಇದಾರಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ನಾವಿಲ್ಲಿ ಹೇಳ ಹೊರಟಿರುವುದು ರವಿಮಾಮನ ಕುರಿತಲ್ಲ. ಆ ಚಿತ್ರದ ನಟಿಯ ಬಗ್ಗೆ. ಕಲಾವಿದ ಸಿನಿಮಾವನ್ನು ನೀವು ನೋಡಿರಬಹುದು. ಅದರಲ್ಲಿ ಒಂದು ಬೆಚ್ಚನೆ ಗೂಡಿರಲು, ಹೇ ನವಿಲೆ ನನ್ನ ನವಿಲೆ, ಓ ತುಂಟಿಯೇ, ಇನಿಯಾ ಇನಿಯಾ ಮತ್ತು ಅಂದಗಾರ ಅಳಿಮಯ್ಯ ಹಾಡುಗಳು ಇಂದಿಗೂ ಕೇಳುಗರಿಗೆ ಮುದ ನೀಡುತ್ತದೆ. ಇನ್ನು ಯಾರೇ ನೀನು ಚೆಲುವೆ ಸಿನಿಮಾದಲ್ಲಿ ಡಯಾನಾ ಡಯಾನಾ ಹಾಡನ್ನು ಕೇಳೇ ಇರುತ್ತೀರಿ.

  ಈ ಹಾಡುಗಳಲ್ಲಿ ಕನ್ನಡಿಗರ ಮನಸ್ಸನ್ನು ಕದ್ದಿದ್ದು ನಟಿ ಹೀರಾ ರಾಜ್​ಗೋಪಾಲ್​. ಕನ್ನಡದಲ್ಲಿ ಅಪೂರ್ವ ಜೋಡಿ, ಕಲಾವಿದ ಮತ್ತು ಯಾರೇ ನೀನು ಚೆಲುವೆ ಸೇರಿ ನಟಿಸಿದ್ದು ಮೂರೇ ಸಿನಿಮಾವಾದರೂ ತಮ್ಮ ಬೋಲ್ಡ್​ ನಟನೆಯಿಂದಲೇ ಹೀರಾ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಅಲ್ಲದೆ, ತಮ್ಮ ಬ್ಯೂಟಿ ಮತ್ತು ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಹಾಟ್​ ಫೇವರಿಟ್​ ಆಗಿದ್ದರು. ಅವರ ಹಾಡುಗಳಂತೂ ಇಂದಿಗೂ ಫೇಮಸ್​. ಕನ್ನಡಕ್ಕಿಂತ ತಮಿಳು, ತೆಲುಗು ಮತ್ತು ಹಿಂದಿ ಭಾಷೆ ಸಿನಿಮಾಗಳಲ್ಲಿ ಹೀರಾ ಹೆಚ್ಚು ಮಿಂಚಿದರು. 1999ರವರೆಗೂ ಸಿನಿಮಾ ರಂಗದಲ್ಲಿ ಆ್ಯಕ್ಟೀವ್​ ಆಗಿದ್ದ ಹೀರಾ ಆ ಬಳಿಕ ಸಿನಿಮಾ ಲೋಕದಿಂದ ಕಣ್ಮರೆಯಾದರು.

  ಹೀರಾ ಅವರು 2002ರಲ್ಲಿ ಪುಷ್ಕರ್ ಮಾಧವ್ ಅವರನ್ನು ವಿವಾಹವಾದರು. ಆದರೆ, ಕೆಲವೇ ವರ್ಷಗಳಲ್ಲಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ, 2006 ರಲ್ಲಿ ಡಿವೋರ್ಸ್​ ಪಡೆದುಕೊಂಡರು. ಒಂದು ಕಾಲದಲ್ಲಿ ಯುವಕರ ಕನಸಿನ ರಾಣಿಯಾಗಿದ್ದ ಹೀರಾ, ಇಂದು ಗುರುತೇ ಹಿಡಿಯದಷ್ಟು ಬದಲಾಗಿಬಿಟ್ಟಿದ್ದಾರೆ.

  Heera Rajgopal 2

  ಸದ್ಯ ಹೀರಾ ಅವರಿಗೆ 52 ವರ್ಷ ವಯಸ್ಸಾಗಿದ್ದು, ಅವರ ಇತ್ತೀಚಿನ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಫೋಟೋ ನೋಡಿದವರು ಇವರೇನಾ ಹೀರಾ? ಕಲಾವಿದ ಸಿನಿಮಾದಲ್ಲಿ ಅವರ ಸೌಂದರ್ಯ ನೋಡಿದವರು ಮಾರುಹೋಗಲೇ ಬೇಕು ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

  Heera Rajgopal 1

  ಸತತ 6 ಪಂದ್ಯಗಳಲ್ಲಿ ಜಯ: ಇವರೇ ನೋಡಿ ಆರ್​ಸಿಬಿ ಯಶಸ್ಸಿನ ಹಿಂದಿರುವ ಅಗೋಚರ ಶಕ್ತಿ!

  ಈ ಒಂದು ಕ್ಷಣ ಮರುಕಳಿಸಿದ್ರೆ RCB ಕಪ್​ ಗೆಲ್ಲೋದು ತುಂಬಾ ಕಷ್ಟ! ಕೋಟ್ಯಂತರ ಅಭಿಮಾನಿಗಳಿಂದ ಪ್ರಾರ್ಥನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts