ಮಾದಕ ನೋಟದಿಂದಲೇ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮೈಬಿಸಿಯೇರಿಸಿದ್ದ ಈ ಸೌತ್​ ಬ್ಯೂಟಿ ಯಾರು ಗೊತ್ತಾ?

Kannada Actress Raasi
Published on

ಚೆನ್ನೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ. ಇದೀಗ ಆಗಿನ ಕಾಲದ ನಟಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಇವರು ಅವರೇನಾ ಎನ್ನುತ್ತಿದ್ದಾರೆ.

ಹೌದು, ನಟಿ ರಾಶಿಯ ಇತ್ತೀಚಿನ ಫೋಟೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಂದಹಾಗೆ ರಾಶಿ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ಸ್ನೇಹಾ, ವಿಷ್ಣುವರ್ಧನ್​ ಅಭಿನಯದ ಜಮಿನ್ದಾರ್ರು ಹಾಗೂ ರಾಜನರಸಿಂಹ ಮತ್ತು ಶಿವರಾಜ್​ಕುಮಾರ್ ನಟನೆಯ ನಿನ್ನೇ ಪ್ರೀತಿಸುವೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು.

Actress Raasi

ರಾಶಿ ಅವರು ಕನ್ನಡಕ್ಕಿಂತ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗಲೇ ರಾಶಿ ಅವರು ಸಹಾಯಕ ನಿರ್ದೇಶಕ ಶ್ರೀ ಮುನಿ ಎಂಬುವರನ್ನು ಪ್ರೀತಿಸಿ, 2005ರಲ್ಲಿ ಮದುವೆಯಾದರು. ದಂಪತಿಗೆ ರಿತಿಮಾ ಹೆಸರಿನ ಮಗಳಿದ್ದಾಳೆ.

ರಾಶಿ ಅವರು ಕನ್ನಡದಲ್ಲಿ ನಟಿಸಿದ್ದು, ನಾಲ್ಕೇ ಸಿನಿಮಾಗಳಾದರೂ ಆ ಸಿನಿಮಾಗಳು ಸಿಕ್ಕಾಪಟ್ಟೆ ಹಿಟ್​ ಆಗಿದ್ದರಿಂದ ರಾಶಿ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ. ಅದರಲ್ಲೂ ಜಮಿನ್ದಾರ್ರು ಸಿನಿಮಾದ "ಹುಡುಗಿ ಹುಡುಗಿ ಮಲೆನಾಡ ಹುಡುಗಿ" ಹಾಡು ಇಂದಿಗೂ ಅನೇಕರು ಫೇವರಿಟ್​ ಆಗಿದೆ.

ಸಿನಿಮಾಗಳಲ್ಲಿ ತುಂಬಾ ಬಿಜಿಯಾಗಿದ್ದ ರಾಶಿ ಮದುವೆಯ ಬಳಿಕ ಸಿನಿಮಾದಿಂದ ದೂರ ಉಳಿದಿದ್ದು, ವೈವಾಹಿಕ ಜೀವನದ ಕಡೆ ಸಂಪೂರ್ಣ ಗಮನ ಹರಿಸಿದ್ದಾರೆ. ಒಂದು ಕಾಲದಲ್ಲಿ ಕರ್ನಾಟಕದ ಯುವ ಹೃದಯಗಳ ರಾಣಿಯಾಗಿದ್ದ ರಾಶಿ ಇಂದು ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ.

Raasi

ಇದೀಗ ರಾಶಿ ಅವರ ಪ್ರಸ್ತುತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೋಟೋದಲ್ಲಿ ರಾಶಿ ಅವರನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಏಕೆಂದರೆ, ರಾಶಿ ಅವರು ಗುರುತೇ ಹಿಡಿಯಲಾಗದಷ್ಟು ಬದಲಾಗಿದ್ದಾರೆ. ಒಂದು ಕಾಲದಲ್ಲಿ ಬಳಕುವ ಬಳ್ಳಿಯಂತಿದ್ದ ರಾಶಿ ಇದೀಗ ತುಂಬಾ ದಪ್ಪಗಾಗಿದ್ದಾರೆ. ಇವರೇನಾ ರಾಶಿ ಅನ್ನುವಷ್ಟು ಬದಲಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net