More

    ಕಿಂಗ್​​ ಕೊಹ್ಲಿಯ 8 ವರ್ಷದ ಐಪಿಎಲ್​ ದಾಖಲೆ ಪುಡಿ ಪುಡಿ ಮಾಡಿದ ಯುವ ಆಟಗಾರ ಅಭಿಷೇಕ್​ ಶರ್ಮ!

    ಹೈದರಾಬಾದ್​: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ಅವರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಯುವ ಆಟಗಾರ ಅಭಿಷೇಕ್​ ಶರ್ಮ ಕೂಡ ಒಬ್ಬರು. ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಎದುರಾಳಿ ತಂಡದಲ್ಲಿ ಭಯ ಹುಟ್ಟಿಸುತ್ತಿರುವ ಈ ಎಡಗೈ ದಾಂಡಿಗನಿಗೆ ಕೇವಲ 23 ವಯಸ್ಸು. ಇದುವರೆಗೂ ಆಡಿದ 14 ಪಂದ್ಯಗಳಲ್ಲಿ 533 ರನ್​ ಗಳಿಸುವ ಮೂಲಕ ಎಸ್​ಆರ್​ಎಚ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಅಭಿಷೇಕ್​ ಶರ್ಮ ವಿಶೇಷ ದಾಖಲೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

    ಕ್ರಿಕೆಟ್​​ ಲೋಕದ ಕಿಂಗ್, ದಾಖಲೆಗಳ ಸರದಾರ ಹಾಗೂ ರನ್​ ಮೆಷಿನ್​​ ಎಂದೇ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಅವರ 8 ವರ್ಷದ ದಾಖಲೆಯನ್ನು ಅಭಿಷೇಕ್​ ಶರ್ಮ ಪುಡಿ ಪುಡಿ ಮಾಡಿದ್ದಾರೆ. ಹೌದು, ಐಪಿಎಲ್​ ಸೀಸನ್​ ಒಂದರಲ್ಲಿ ಅತ್ಯಧಿಕ ಸಿಕ್ಸರ್​ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಯನ್ನು ಹಿಂದಿಕ್ಕೆ ಅಭಿಷೇಕ್​ ಶರ್ಮ ಮೊದಲ ಸ್ಥಾನಕ್ಕೇರಿದ್ದಾರೆ. ನಿನ್ನೆ (ಮೇ 19) ಪಂಜಾಬ್​ ಕಿಂಗ್ಸ್​ ವಿರುದ್ಧ ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 69ನೇ ಐಪಿಎಲ್​ ಪಂದ್ಯದಲ್ಲಿ ಅಭಿಷೇಕ್​ ಈ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

    ಎರಡನೇ ಇನ್ನಿಂಗ್ಸ್​ನಲ್ಲಿ ರಿಷಿ ಧವನ್​ ಎಸೆದ 6ನೇ ಓವರ್​ನಲ್ಲಿ ಭರ್ಜರಿ ಸಿಕ್ಸರ್​ ಬಾರಿಸುವುದರೊಂದಿಗೆ ಅಭಿಷೇಕ್​ ಅವರು ಕೊಹ್ಲಿ ದಾಖಲೆ ಮುರಿದರು. 82 ಮೀಟರ್​ ಉದ್ದದ ಸಿಕ್ಸರ್​ನೊಂದಿಗೆ ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ 39ನೇ ಸಿಕ್ಸರ್​ ಸಿಡಿಸಿದ ಅಭಿಷೇಕ್​, 2016ರ ಐಪಿಎಲ್​ ಸೀಸನ್​ನಲ್ಲಿ ಕೊಹ್ಲಿ ಅವರ 38 ಸಿಕ್ಸರ್ ದಾಖಲೆಯನ್ನು ಮುರಿದರು. ಕಳೆದ ಎಂಟು ವರ್ಷದಿಂದ ಒಂದೇ ಸೀಸನ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದ ಕೊಹ್ಲಿ, ಇದೀಗ ಅಭಿಷೇಕ್​ ಶರ್ಮರಿಂದಾಗಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ​

    ಸಿಕ್ಸರ್​ ಹಿಂದೆ ಬಿದ್ದ ಕೊಹ್ಲಿ
    ಇನ್ನು ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಿಂಗ್​ ಕೊಹ್ಲಿ, ಸಿಕ್ಸರ್​ಗಳ ಸುರಿಮಳೆಗೈಯುತ್ತಿದ್ದಾರೆ. ಇದುವರೆಗೂ ಆಡಿದ 14 ಪಂದ್ಯಗಳಲ್ಲಿ 708 ರನ್​ಗಳೊಂದಿಗೆ ಅತ್ಯಧಿಕ ರನ್​ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ ಆರೇಂಜ್​ ಕ್ಯಾಪ್​ ಒಡೆಯರಾಗಿದ್ದಾರೆ. 14 ಪಂದ್ಯಗಳಿಂದ 37 ಸಿಕ್ಸರ್​ ಸಿಡಿಸಿರುವ ಕೊಹ್ಲಿ ಅಭಿಷೇಕ್​ ದಾಖಲೆಯನ್ನು ಮುರಿದು ಮತ್ತೆ ನಂಬರ್​ 1ರ ಸ್ಥಾನ ಅಲಂಕರಿಸುವ ಎಲ್ಲ ಅವಕಾಶಗಳು ಇವೆ. ಏಕೆಂದರೆ, ಪ್ರಸಕ್ತ ಐಪಿಎಲ್​ನಲ್ಲಿ ಆರ್​ಸಿಬಿ ಪ್ಲೇಆಫ್​ ಪ್ರವೇಶ ಮಾಡಿರುವುದರಿಂದ ಕ್ವಾಲಿಫೈಯರ್​ ಪಂದ್ಯ ಆಡುವ ಅವಕಾಶವಿದ್ದು, ಕೊಹ್ಲಿ ಮತ್ತೊಮ್ಮೆ ಸಿಡಿದರೆ ಅಭಿಷೇಕ್​ ದಾಖಲೆ ಉಡೀಸ್​ ಆಗಲಿದೆ.

    ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಯುವ ಆರಂಭಿಕ ಅಭಿಷೇಶ್ ಶರ್ಮ (66 ರನ್. 28 ಎಸೆತ, 5 ಬೌಂಡರಿ, 6 ಸಿಕ್ಸರ್) ಬಿರುಪಿನಾಟದ ನೆರವಿನಿಂದ ಸನ್‌ ರೈಸರ್ಸ್ ಹೈದರಾಬಾದ್ ತಂಡ ಬಿಪಿಎಲ್-17ರ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಬಳಗ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆಯಿತು. ಪಂಜಾಬ್ ಕಿಂಗ್ಸ್ ತಂಡ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಆರ್​ಜಿಐ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಂಜಾಬ್, ಪ್ರಲ್ ಸಿಮ್ರಾನ್ ಸಿಂಗ್ (71 ರನ್, 45 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ರಿಲೀ ರೋನ್ (49 ರನ್. 24 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ 5 ವಿಕೆಟ್ ಗೆ 214 ರನ್ಳ ಬೃಹತ್ ಸವಾಲೆಸೆಯಿತು. ಪ್ರತಿಯಾಗಿ ಅಭಿಷೇಕ್ ಹಾಗೂ ಹೆನ್ರಿಕ್​ ಕ್ಲಾಸೇನ್​ (42, 26 2, 3, 2 ಸಿಕ್ಸರ್) ಆಟದ ಬಲದಿಂದ 19.1 ಓವರ್‌ಗಳಲ್ಲಿ 6 ವಿಕೆಟ್‌ 215 ರನ್‌ ಗಳಿಸಿ ತವರಿನಲ್ಲಿ ಜಯದ ತೇಕೆ ಹಾಕಿತು. (ಏಜೆನ್ಸೀಸ್​)

    ಎಂ.ಎಸ್​. ಧೋನಿ ಮಾಡಿದ ಈ ಒಂದು ತಪ್ಪಿನಿಂದ ಸಿಎಸ್​ಕೆ ಪ್ಲೇಆಫ್ ಕನಸು ಭಗ್ನ! ಚೆನ್ನೈ ಅಭಿಮಾನಿಗಳ ಆಕ್ರೋಶ

    ಸ್ವಪ್ನಿಲ್​​ ಸಿಂಗ್​ ಆರ್​ಸಿಬಿ ಪಾಲಿಗೆ ಅದೃಷ್ಟವಂತ ಅನ್ನೋದಕ್ಕೆ ಈ ಘಟನೆಗಿಂತ ಉತ್ತಮ ಸಾಕ್ಷಿ ಮತ್ತೊಂದಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts