More

    ಆರ್​ಸಿಬಿ ಸೋಲುತ್ತಿದ್ದಂತೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿ, ಸಂಭ್ರಮಿಸಿದ ಸಿಎಸ್​ಕೆ ಫ್ಯಾನ್ಸ್​! ಇದೇನಾ ನಿಮ್ಮ…

    ಅಹಮದಾಬಾದ್: ನಿನ್ನೆ (ಮೇ.22) ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಮತ್ತು ಆರ್​ಆರ್​ ನಡುವಿನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಪಡೆ 4 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿ, ಕ್ವಾಲಿಫೈರ್​ 2 ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ, ಇತ್ತ ಕೇವಲ ಶೇ. 1 ಚಾನ್ಸ್ ಇದ್ದಾಗಲೂ ಎಲ್ಲರ ನಿರೀಕ್ಷೆ ಮೀರಿಸಿ ಐಪಿಎಲ್ ಪ್ಲೇಆಫ್ ಹಂತಕ್ಕೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸತತ 17ನೇ ಪ್ರಯತ್ನದಲ್ಲೂ ಕಪ್ ಗೆಲುವಿನ ಕನಸನ್ನು ಕನಸಾಗಿಯೇ ಉಳಿಸಿಕೊಂಡಿದೆ.

    ಇದನ್ನೂ ಓದಿ: ಐಪಿಎಲ್​ಗೆ ದಿನೇಶ್​ ಕಾರ್ತಿಕ್​ ಗುಡ್​ಬೈ! ಭಾವುಕರಾದ ಡಿಕೆಗೆ ವಿರಾಟ್​ ಕೊಹ್ಲಿ ಸಾಂತ್ವಾನ

    ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ಪಡೆ ಆರ್​ಸಿಬಿಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅದರಂತೆಯೇ ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್​ನೊಂದಿಗೆ 8 ವಿಕೆಟ್​ಗೆ 172 ರನ್​ಗಳನ್ನು ಕಲೆಹಾಕುವಲ್ಲಿ ಶಕ್ತವಾಯಿತು.

    ಇನ್ನು ಈ ಗುರಿಯನ್ನು ಬೆನ್ನಟ್ಟಿದ ಆರ್​ಆರ್ ಪಡೆಗೆ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19 ಓವರ್​ಗಳಲ್ಲಿ 6 ವಿಕೆಟ್​ಗೆ 174 ರನ್​ಗಳಿಸಿ, ಆರ್​ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿತು. ಈ ಮ್ಯಾಚ್ ಕೈತಪ್ಪುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ವಿರಾಟ್ ಮತ್ತು ಆರ್​ಸಿಬಿ ತಂಡದ ಆಟಗಾರರು ಭಾರೀ ಬೇಸರವನ್ನು ಹೊತ್ತು, ಪೆವಿಲಿಯನ್ ಕಡೆ ಮುಖಮಾಡಿದರು.

    ಇದನ್ನೂ ಓದಿ: IPL 2024: ಎಲಿಮಿನೇಟರ್ ಪಂದ್ಯದಲ್ಲಿ RR ವಿರುದ್ಧ RCB ಸೋಲಿಗೆ 5 ಪ್ರಮುಖ ಕಾರಣಗಳು ಹೀಗಿವೆ…

    ಒಂದೆಡೆ ತಮ್ಮ ಕಟ್ಟ ಹಾಗೂ ನಿಷ್ಠಾವಂತ ಅಭಿಮಾನಿಗಳ ಮಹಾದಾಸೆಯನ್ನು ಈ ಬಾರಿಯೂ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಆರ್​ಸಿಬಿ ತಂಡದವರು ಅತೀವ ನೋವಿನಲ್ಲಿ ಲೀಗ್​ನಿಂದ ಹೊರನಡೆದರೆ, ಮತ್ತೊಂದೆಡೆ ಕಣ್ಣಿಗೆ ಕಾಣದಂತೆ ಪರಾರಿಯಾಗಿದ್ದ ಸಿಎಸ್​ಕೆ ತಂಡದ ಕೆಲವು ಅಭಿಮಾನಿಗಳು ಮತ್ತೇ ಟ್ರೋಲ್ ಮಾಡುವ ಮೂಲಕ ಪತ್ತೆಯಾಗಿದ್ದಾರೆ. ಆದರೆ, ಪಾಸಿಟಿವ್ ಆಗಿ ಅಲ್ಲ, ಬದಲಿಗೆ ನೆಗೆಟಿವ್ ಆಗಿ. ಸದ್ಯ ಈ ಬೆಳವಣಿಗೆ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    https://x.com/saravanvelu2/status/1793353226432975296

    https://x.com/you_get_06/status/1793361762424664352

    ಸೋಷಿಯಲ್ ಮೀಡಿಯಾದಲ್ಲಿ ಆರ್​ಸಿಬಿ ಸೋಲನ್ನು ಸಂಭ್ರಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಅಭಿಮಾನಿಗಳು, ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಆಟಗಾರರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ, ವ್ಯಾಪಕವಾಗಿ ಟೀಕಿಸಿದೆ. ಇದನ್ನು ಗಮನಿಸಿದ ಆರ್​ಸಿಬಿ ಫ್ಯಾನ್ಸ್, ಭಾರೀ ಆಕ್ರೋಶ ಹೊರಹಾಕಿದ್ದು, ‘ನಿಮ್ಮಂತ ಅಭಿಮಾನಿಗಳಿಗೆ ಏನೂ ಹೇಳಬೇಕೋ ತಿಳಿಯದು’. ‘ನೀವಂತೂ ಗೆಲ್ಲಲು ಸಾಧ್ಯವಾಗಲಿಲ್ಲ’. ‘ಅದಕ್ಕೆ ಇಂತಹ ಕೀಳುಮಟ್ಟಕ್ಕೆ ಇಳಿಯುವ ಅವಶ್ಯಕತೆ ಇತ್ತಾ?, ಇದು ನಮ್ಮಲ್ಲಿ ಇರುವಂತಹ ಒಗ್ಗಟ್ಟಿನ ಪ್ರದರ್ಶನ ನಿಮ್ಮಲ್ಲಿ ಇಲ್ಲ ಎಂಬುದನ್ನು ತೋರಿಸಿದೆ. ಇದೇನಾ ನಿಮ್ಮ ಸಂಸ್ಕೃತಿ ಎಂದು ಛೀಮಾರಿ ಹಾಕಿದ್ದಾರೆ. ಸದ್ಯ ಈ ಟ್ರೋಲ್, ಮೀಮ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ,(ಏಜೆನ್ಸೀಸ್).

    https://x.com/vakugu/status/1793475877344616814

    ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

    ಲೀಗ್​ನಿಂದ ಹೊರಬಿದ್ದ MI​ಗೆ ನೀತಾ ಅಂಬಾನಿ ಕ್ಲಾಸ್​; ರೋಹಿತ್​, ಹಾರ್ದಿಕ್​ಗೆ ವಿಶೇಷ ಕಿವಿಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts