More

  ಸಾಯಿಬಾಬಾ ಮಂದಿರ ಉದ್ಘಾಟನೆಗೆ ಸಿದ್ಧತೆ

  ಚಾಮರಾಜನಗರ: ನಗರದ ವಿವೇಕನಗರ ಬಡಾವಣೆಯಲ್ಲಿರುವ ಫಾರೆಸ್ಟ್ ನರ್ಸರಿ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಶಿರಡಿ ಸಾಯಿಬಾಬಾ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

  ನಗರದ ಾರೆಸ್ಟ್ ನರ್ಸರಿ ಬಳಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಶನಿವಾರ ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಪ್ರಾಯಶ್ಚಿತ ಹೋಮ ನಡೆದವು. ಸಂಜೆಯ ವೇಳೆಯಲ್ಲಿ ಪ್ರಧಾನ, ಶಾಂತಿ-ಪುಷ್ಟಿ, ಕುಟೀರ ಹೋಮಗಳು, ಪೂಜೆ, ಆರತಿ ನಡೆದವು. ಬಳಿಕ ಹರಿಕಥಾ ವಿದುಷಿ ಡಾ.ಮಾಲಿನಿ ಅವರಿಂದ ಶ್ರೀ ಶಿರಡಿ ಸಾಯಿಬಾಬಾರ ವೈಭವದ ಕಥಾವಲೋಕನ ಜರುಗಿತು. ಮಹಾರಾಷ್ಟ್ರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಪ್ರಧಾನ ಅರ್ಚಕರಾದ ಶ್ರೀಪಂಡಿತ್ ಅಮಿತ್ ದೇಶ್‌ಮುಖ್ ಸೇರಿದಂತೆ 5 ಅರ್ಚಕರಿಂದ ಪೂಜಾ ಕೈಂಕರ್ಯಗಳು ನೆರವೇರಿತು. ಭಾನುವಾರ ತಿ.ನರಸೀಪುರದ ತ್ರಿವೇಣಿ ಸಂಗಮದಿಂದ ಜಲವನ್ನು ತಂದು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಅದನ್ನು ಸಾಯಿಬಾಬಾ ಮಂದಿರಕ್ಕೆ ಕೊಂಡೊಯ್ಯಲಾಗುವುದು.

  ಬಳಿಕ ಸಾಯಿಬಾಬಾರ ವಿಗ್ರಹ ಮತ್ತು ಧ್ಯಾನಾಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ, ಮಂದಿರದ ಮಹಾಕುಂಭಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ.
  ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಬಾಲಸುಬ್ರಹ್ಮಣ್ಯಂ, ಕಾರ್ಯಾಧ್ಯಕ್ಷ ಎಸ್‌ಪಿಕೆ ಉಮೇಶ್, ಕಾರ್ಯದರ್ಶಿ ಆರ್. ರಾಜು, ಟ್ರಸ್ಟ್‌ನ ಗೌರವಾಧ್ಯಕ್ಷ ಎಂ.ರಾಜು, ಸಹ ಕಾರ್ಯದರ್ಶಿ ಮುರುಗೇಶನ್, ಸದಸ್ಯರಾದ ವೇದಿ, ಶಕ್ತಿ, ಉತ್ತರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

  See also  ಗೋವು, ಎಮ್ಮೆ ಸಾಗಿಸುತ್ತಿದ್ದವರ ಬಂಧನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts