More

    2025ರಲ್ಲಿ ಆರ್​ಸಿಬಿಗೆ ವಿರಾಟ್​ ಕ್ಯಾಪ್ಟನ್! ಈ ನಾಲ್ವರನ್ನು ಫ್ರಾಂಚೈಸಿ ಕೈಬಿಡುವುದು ಪಕ್ಕಾ: ಆಕಾಶ್ ಚೋಪ್ರಾ

    ನವದೆಹಲಿ: ಐಪಿಎಲ್ 2024ರ ಆವೃತ್ತಿಯ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕೊಟ್ಟು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ದ್ವಿತೀಯಾರ್ಧದಲ್ಲಿ ಯಾರೂ ಊಹಿಸಲಾರದ ಪ್ರದರ್ಶನ ನೀಡಿ, ಸತತ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇಆಫ್​ಗೆ ರೋಚಕವಾಗಿ ಎಂಟ್ರಿ ಕೊಟ್ಟಿತು. ಇದು ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂತ ಶಾಕಿಂಗ್ ಕಮ್​ಬ್ಯಾಕ್ ಎಂದರೆ ತಪ್ಪಾಗಲಾರದು.

    ಇದನ್ನೂ ಓದಿ: ನನ್ನ ವಿರುದ್ಧ ಕೇರಳದಲ್ಲಿ ಅಘೋರಿಗಳಿಂದ ಶತ್ರು ಭೈರವಿ ಯಾಗ; ಡಿಕೆಶಿ ಸ್ಫೋಟಕ ಹೇಳಿಕೆ 

    ಇನ್ನು ಐಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತ ಆರ್​ಸಿಬಿ, ಅಭಿಮಾನಿಗಳ ಕಪ್ ಕನಸನ್ನು ಈ ಬಾರಿಯೂ ಕನಸಾಗಿಯೇ ಉಳಿಸಿತು. ಇದು ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಅತೀವ ನೋವುಂಟುಮಾಡಿತು. ಈ ವಿಷಯವನ್ನು ಮುಂದಿಟ್ಟು ಮಾತನಾಡಿದ ಮಾಜಿ ಕ್ರಿಕೆಟಿಗರು, ಆರ್​ಸಿಬಿ ಆಟಗಾರರನ್ನು ಮತ್ತು ಫ್ರಾಂಚೈಸಿಯನ್ನು ವ್ಯಂಗ್ಯವಾಡಿದ್ದರು. ಇದೀಗ ಚಾಲೆಂಜರ್ಸ್​ ಬಗ್ಗೆ ಟೀಂ ಇಂಡಿಯಾದ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ ಧ್ವನಿ ಎತ್ತಿದ್ದು, 2025ರಲ್ಲಿ ಆರ್​ಸಿಬಿಗೆ ವಿರಾಟ್​ ಕೊಹ್ಲಿಯೇ ಕ್ಯಾಪ್ಟನ್ ಎಂದು ಹೇಳಿದ್ದಾರೆ.

    “ಆರ್​ಸಿಬಿ ಫ್ರಾಂಚೈಸಿ ತಮ್ಮ ತಂಡದಲ್ಲಿ ಮೊದಲು ಉಳಿಸಿಕೊಳ್ಳುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಕೇವಲ ರಿಟೈನ್​ ಮಾಡಿಕೊಂಡರೆ ಸಾಲದು, ಆರ್​ಸಿಬಿಯ ಕ್ಯಾಪ್ಟನ್ ಆಗಿ ಕೊಹ್ಲಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ಆಗ ಫ್ರಾಂಚೈಸಿಗೂ ಒಂದು ಬಲ ಬರುತ್ತದೆ. ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ‘ರನ್​ ಮಷಿನ್’​ ತೆಗೆದುಕೊಂಡರೆ ಉತ್ತಮ. ಇಲ್ಲದಿದ್ದರೆ, ಫ್ರಾಂಚೈಸಿಯವರು ಹೊಸ ನಾಯಕನಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ” ಎಂದರು.

    ಇದನ್ನೂ ಓದಿ: ಮದ್ಯಪಾನ, ಮಾರಾಟ ನಿಷೇಧ

    “2025ರಲ್ಲಿ ನಡೆಯುವ ಐಪಿಎಲ್​ 18ನೇ ಸೀಸನ್​ಗೆ ತಂಡದಿಂದ ಫಾಫ್ ಡುಪ್ಲೆಸಿಸ್​, ಗ್ಲೆನ್ ಮ್ಯಾಕ್ಸ್​ವೆಲ್​, ಅಲ್ಜಾರಿ ಜೋಸೆಫ್​ ಮತ್ತು ಲಾಕೀ ಫೆರ್ಗಸನ್​ ಅವರನ್ನು ಆರ್​ಸಿಬಿ ಫ್ರಾಂಚೈಸಿ ಕೈಬಿಡಲಿದೆ. ಫಾಫ್​ ಕೂಡ ಹಿರಿಯರಾಗುತ್ತಿದ್ದಾರೆ. ಅವರನ್ನು ಟೀಮ್​ನಿಂದ ಬಿಡುವುದು ಬಹುತೇಕ ಖಚಿತ” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ,(ಏಜೆನ್ಸೀಸ್).

    See also  ಈ ಸ್ಟಾರ್ ಬ್ಯಾಟರ್‌ಗೆ ಆರ್‌ಸಿಬಿ ನಾಯಕತ್ವ ?

    ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts