More

  ಈ 6 ಸ್ಟಾರ್​ ಆಟಗಾರರು ಟಿ20 ವಿಶ್ವಕಪ್​ನಲ್ಲಿ ಡಬಲ್ ಸೆಂಚುರಿ ಸಿಡಿಸುವ ನಿರೀಕ್ಷೆಯಿದೆ!

  ನವದೆಹಲಿ: ಇದುವರೆಗೆ ಐಪಿಎಲ್ 2024ರ ಪಂದ್ಯಗಳ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿತ್ತು. ಇದೀಗ ಟಿ20 ವಿಶ್ವಕಪ್ 2024ರ ಬಗ್ಗೆ ಎಲ್ಲೆಡೆ ಮಾತು ಜೋರಾಗಿದೆ. ಮುಂಬರುವ ಪಂದ್ಯಗಳಿಗಾಗಿ ಟೀಂ ಇಂಡಿಯಾ ಸ್ಕ್ವ್ಯಾಡ್​ ಕೂಡ ಸಿದ್ಧವಾಗಿದ್ದು, ಆಟಗಾರರು ಮೈದಾನದಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇನ್ನು ಈ ಲೀಗ್​ ಸಹ ಟಿ20 ಫಾರ್ಮೆಟ್ ಆದ ಕಾರಣ, ಐಪಿಎಲ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಕೆಲವು ಸ್ಟಾರ್ ಆಟಗಾರರ ಮೇಲೆ ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರೀಕ್ಷೆ ಮೂಡಿದೆ.

  ಇದನ್ನೂ ಓದಿ: ಪ್ರೇಯಸಿ ಗರ್ಭಿಣಿಯಾಗಿದ್ದಾಗಲೇ ಬೇರೊಬ್ಬನ ಜತೆ ಸರಸ! ತನ್ನ ಮಗಳಿಗಾಗಿ ಈತನ ಹೋರಾಟವೇ ರೋಚಕ

  ಇನ್ನು ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಸ್ಪರ್ಧಿಸಲಿರುವ ಅಷ್ಟು ತಂಡಗಳ ಮೇಲೆ ಹೆಚ್ಚಿನ ನಿರೀಕ್ಷೆಗಳು ವ್ಯಕ್ತವಾಗಿದ್ದು, ಜೂನ್. 09ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ ವೀಕ್ಷಣೆಗೆ ಭಾರೀ ಕುತೂಹಲ ಕೆರಳಿದೆ. ಟಿ20 ಫಾರ್ಮೆಟ್​ನಲ್ಲಿ ಆಯಾ ತಂಡಗಳ ಸ್ಟಾರ್​ ಬ್ಯಾಟ್ಸ್​ಮನ್​ ಈಗಾಗಲೇ ತಮ್ಮ ಸಾಮರ್ಥ್ಯವೇನು? ಸ್ಪೋಟಕ ಬ್ಯಾಟಿಂಗ್ ಹೇಗಿರುತ್ತದೆ ಎಂಬುದನ್ನು ನಮ್ಮ ಮುಂದೆ ಪ್ರದರ್ಶಿಸಿ, ಸಾಬೀತುಪಡಿಸಿದ್ದಾರೆ. ಈಗ ವಿಶ್ವಕಪ್​ನಲ್ಲಿಯೂ ಇದೇ ರೀತಿಯ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಲಿದ್ದಾರಾ? ಎಂಬುದೇ ಅನೇಕರ ಪ್ರಶ್ನೆ.

  ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಯಾವ ದೇಶದ ಬ್ಯಾಟ್ಸ್​ಮನ್​​ಗಳು ಈ ಬಾರಿ ಆಕರ್ಷಕ ಬ್ಯಾಟಿಂಗ್ ಕೊಡುಗೆ ನೀಡುತ್ತಾರೆ. ದ್ವಿಶತಕ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಊಹೆ ಹೀಗಿದೆ. ಇದು ಕ್ರಿಕೆಟ್​ ಅಭಿಮಾನಿಗಳ ಲೆಕ್ಕಾಚಾರವು ಹೌದು. ವಿಶ್ವಕಪ್​ನಲ್ಲಿ ಡಬಲ್ ಸೆಂಚುರಿ ಹೊಡೆಯುವ ಸಾಮರ್ಥ್ಯ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಹೆಚ್ಚಿದೆ. ಕಾರಣ, ಈ ಹಿಂದಿನಿಂದಲೂ ರೋಹಿತ್ ಟಿ20 ಫಾರ್ಮೆಟ್​ನಲ್ಲಿ ಉತ್ತಮ ಫಾರ್ಮ್​ ಹಾಗೂ ಓಪನರ್​ ಆಗಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ. ತಂಡಕ್ಕೆ ಅತ್ಯುತ್ತಮ ಕೊಡುಗೆ ಸಹ ನೀಡಿದ್ದಾರೆ. ಈ ವಿಷಯವನ್ನು ಗಮನಿದಲ್ಲಿಟ್ಟುಕೊಂಡು ಹೇಳುವುದಾದರೆ, ಈ ಸಾಲಿನಲ್ಲಿ ‘ಹಿಟ್​ಮ್ಯಾನ್’ ಮೊದಲಿಗರು.

  See also  ಹೊಸ ತಳಿ, ಹಳೇ ಸೂತ್ರ: ಒಮಿಕ್ರಾನ್ ತಡೆಗೆ 31ರವರೆಗೆ ನಿರ್ಬಂಧ, 2 ಡೋಸ್ ಲಸಿಕೆ ಕಡ್ಡಾಯ

  ಇದನ್ನೂ ಓದಿ: ಜೂನ್​​ 1ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್ ವಿತರಣೆ

  ರೋಹಿತ್ ಶರ್ಮಾ (ಭಾರತ)
  ಫಿನ್ ಅಲೆನ್ (ನ್ಯೂಜಿಲೆಂಡ್)
  ರಯಾನ್ ರಿಕೆಲ್ಟನ್ (ದಕ್ಷಿಣ ಆಫ್ರಿಕಾ)
  ವಿಲ್ ಜ್ಯಾಕ್ಸ್ (ಇಂಗ್ಲೆಂಡ್)
  ಜಾರ್ಜ್ ಮುನ್ಸಿ (ಸ್ಕಾಟ್ಲೆಂಡ್)
  ಕುಶಾಲ್ ಮಲ್ಲ (ನೇಪಾಳ)

  ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

  ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts