More

  ಪ್ರೇಯಸಿ ಗರ್ಭಿಣಿಯಾಗಿದ್ದಾಗಲೇ ಬೇರೊಬ್ಬನ ಜತೆ ಸರಸ! ತನ್ನ ಮಗಳಿಗಾಗಿ ಈತನ ಹೋರಾಟವೇ ರೋಚಕ

  ನವದೆಹಲಿ: ಇಲ್ಲಿಯವರೆಗೆ ನೀವು ಅನೇಕ ಉತ್ತಮ ಪ್ರೇಮ ಕತೆಗಳನ್ನು ಕೇಳಿದ್ದೀರಿ. ಅನೇಕ ಮಹಾನ್ ಪ್ರೇಮಿಗಳನ್ನು ನೋಡಿದ್ದೀರಿ. ಇತಿಹಾಸದಲ್ಲಿ ಪ್ರೀತಿ ಮತ್ತು ಪ್ರೇಮಿಗಳ ಬಗ್ಗೆ ಅನೇಕ ಕತೆಗಳಿವೆ. ಅವುಗಳಲ್ಲಿ ಹೆಚ್ಚಿನವು ಸ್ಫೂರ್ತಿದಾಯಕ ಕತೆಗಳು. ಇಂತಹ ಕತೆಗಳಿಂದ ಕೆಲವೊಂದು ಪಾಠ ಕಲಿಯಬೇಕಾಗುತ್ತದೆ. ನಾವೀಗ ಹೇಳುತ್ತಿರುವ ಕತೆಯು ಕೂಡ ಅಂತಹದ್ದೇ ಒಂದು ಕತೆ. ಈ ನಿಜವಾದ ಕತೆಯಲ್ಲಿ ಪ್ರೇಮಿ ಎಂದು ಹೇಳಿಕೊಳ್ಳುವ ಯುವಕ ಹೀನಾಯವಾಗಿ ಸೋತಿದ್ದಾನೆ. ಆದರೆ, ತಂದೆಯಾಗಿ ಆತ ದೊಡ್ಡ ಯಶಸ್ಸನ್ನು ಗಳಿಸಿದ್ದಾನೆ. ತಮ್ಮ ಸ್ವಾರ್ಥ ಗುಣದಿಂದ ಪ್ರೀತಿಯನ್ನು ಅಣಕಿಸುತ್ತಿರುವ ಅದೆಷ್ಟೋ ಮಂದಿಗೆ ಈ ಹುಡುಗನ ಕತೆ ಒಂದು ಸಂದೇಶ ಸಾರಬಹುದು.

  ಮೇಲಿನ ಫೋಟೋದಲ್ಲಿ ನೋಡುತ್ತಿರುವ ಯುವಕನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈತ ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಲಿವ್ ಇನ್ ರಿಲೇಶನ್​ಶಿನ್​ನಲ್ಲಿದ್ದ. ತಮ್ಮ ಸಂಬಂಧದ 4 ತಿಂಗಳ ನಂತರ ತನ್ನ ಗೆಳತಿ ಗರ್ಭಿಣಿಯಾಗಿದ್ದಾಳೆಂದು ಅರಿತುಕೊಂಡ. ಆ ನಂತರ ಆ ಮಗುವನ್ನು ಹೊಂದಲು ತೀರ್ಮಾನಿಸಲಾಯಿತು. ಆದರೆ ಕೆಲವು ತಿಂಗಳುಗಳ ನಂತರ ತನ್ನ ಪ್ರೇಯಸಿ ಬೇರೆ ಜನರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬುದನ್ನು ಯುವಕ ಅರಿತುಕೊಂಡನು. ಇದರಿಂದ ಆತನ ಹೃದಯ ಒಡೆಯಿತು. ತನ್ನ ಹುಡುಗಿ ಬೇರೆ ಜನರನ್ನು ಭೇಟಿಯಾಗುತ್ತಿರುವುದನ್ನು ನೋಡಿ ಆತನ ಮನಸ್ಸಿಗೆ ಆಘಾತವಾಯಿತು.

  ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಗಲೂ ಮತ್ತೋರ್ವ ಬಾಯ್​ಫ್ರೆಂಡ್ ಜತೆ ಲೈಂಗಿಕ ಸಂಬಂಧ ಹೊಂದಿದ್ದಳು. ಆದರೂ ತನಗೆ ಹುಟ್ಟಲಿರುವ ಮಗುವಿಗಾಗಿ ಈ ಯುವಕ ಅದನ್ನೆಲ್ಲ ಸಹಿಸಿಕೊಂಡ. ಮಗುವಿಗಾಗಿ ತನ್ನ ಪ್ರೇಯಸಿ ಮಾಡಿದ ತಪ್ಪುಗಳನ್ನೆಲ್ಲೆ ಕ್ಷಮಿಸಿ, ಸಂಬಂಧವನ್ನು ಮುಂದುವರಿಸಲು ಆತ ನಿರ್ಧರಿಸಿದ. ನಿರೀಕ್ಷೆಯಂತೆ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ಎಲ್ವ್ ಎಂದು ಹೆಸರಿಸಲಾಯಿತು. ಆದರೆ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಈ ಯುವಕನ ಬದಲು ತನ್ನ ಹೊಸ ಬಾಯ್ ಫ್ರೆಂಡ್ ಜತೆ ಮದುವೆಯಾಗುವುದಾಗಿ ಯುವತಿ ಹೇಳಿದಳು. ಈ ಯುವಕನಿಗೆ ಹಣ ನೀಡಿ, ಮಗುವನ್ನು ಅನಾಥಾಶ್ರಮಕ್ಕೆ ಬಿಡುವಂತೆ ಒತ್ತಡ ಹೇರಿದಳು. ಆದರೆ ಈ ಯುವಕ ತನ್ನ ಮಗಳನ್ನು ಬಿಟ್ಟುಕೊಡಲು ಸಿದ್ಧನಿರಲಿಲ್ಲ.

  See also  ತಿಳಿವಳಿಕೆ ಹೇಳಿದ್ದಕ್ಕೆ ಪದವೀಧರೆ ಆತ್ಮಹತ್ಯೆ

  ಮಗುವಿಗಾಗಿ ಸುಮಾರು ಒಂದು ವರ್ಷ ಯುವತಿಯೊಂದಿಗೆ ಜಗಳವಾಡಿದ ನಂತರ ಆತ ತನ್ನ ಮಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡ. ಇದಾದ ಬಳಿಕ ತನ್ನ ಕೆಲಸವನ್ನು ಬಿಟ್ಟು ಮಗುವನ್ನು ನೋಡಿಕೊಳ್ಳಲು ಆರಂಭಿಸಿದ. ಯಾವ ತಾಯಿಗೂ ಕಡಿಮೆ ಇಲ್ಲದಂತೆ ಆತ ಮಗುವನ್ನು ಚೆನ್ನಾಗಿ ಸಾಕಿದ. ಈ ಯುವಕನ ಪ್ರೇಮಕತೆ ಮತ್ತು ಮಗಳಿಗಾಗಿ ಅವನು ಮಾಡಿದ ತ್ಯಾಗದ ಕತೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದವರು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

  ಈ ಯುವಕ ಪ್ರೇಮಿಯಾಗಿ ಕೆಟ್ಟದಾಗಿ ಸೋತಿದ್ದಾನೆ. ಅಂತಹ ಹುಡುಗಿಯನ್ನು ಆಯ್ಕೆ ಮಾಡುವ ಮೂಲಕ ಅವರು ದೊಡ್ಡ ತಪ್ಪು ಮಾಡಿದ್ದಾರೆ. ಆದರೆ, ತಂದೆಯಾಗಿ ಆತ ಸೂಪರ್ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯುವಕನಿಗೆ ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ. ಈ ಯುವಕನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

  ಕಿರಾತಕ ಚಿತ್ರದಲ್ಲಿ ಯಶ್​ ತಂಗಿ ಪಾತ್ರದಲ್ಲಿ ನಟಿಸಿದ್ದ ಅರ್ಪಿತಾ ಈ ಹೇಗಿದ್ದಾರೆ ಗೊತ್ತಾ? ಎಷ್ಟು ಬದಲಾಗಿದ್ದಾರೆ ನೋಡಿ…

  ಆನಂದ್​ ನೀನು ನನ್ನ ಕುಟುಂಬದವನು ನನ್ನನ್ಯಾಕೆ ಇಕ್ಕಟ್ಟಿಗೆ ಸಿಲುಕಿಸುತ್ತೀಯಾ? ಕೊನೆಗೂ ನಿಜ ಒಪ್ಪಿಕೊಂಡ್ರಾ ರಶ್ಮಿಕಾ?

  ನಿಜ ಹೇಳುತ್ತಿದ್ದೇನೆ ಆ ದಿನ ನಾನು ತುಂಬಾ ಹೆದರಿದ್ದೆ! ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಕೊಹ್ಲಿ ಮಾತು ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts