

ಹೈದರಾಬಾದ್: ಬೇಬಿ ಚಿತ್ರದ ಮೂಲಕ ಮೆಗಾ ಹಿಟ್ ಪಡೆದ ನಟ ಆನಂದ್ ದೇವರಕೊಂಡ ಗಮ್ ಗಮ್ ಗಣೇಶ ಚಿತ್ರದಲ್ಲಿ ನಟಿಸಿದ್ದಾರೆ. ಇದು ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಚಿತ್ರಕ್ಕೆ ಪ್ರಗತಿ ಶ್ರೀವಾಸ್ತವ್ ಮತ್ತು ನಯನ್ ಸಾರಿಕಾ ಇಬ್ಬರು ನಾಯಕಿಯರು. ಉದಯ್ ಬೊಮ್ಮಿಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಎಮ್ಯಾನುಯೆಲ್, ವೆನ್ನೆಲ ಕಿಶೋರ್, ರಾಜ್ ಅರ್ಜುನ್ ಮತ್ತು ಸತ್ಯಂ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೈಲೈಫ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೇದಾರ್ ಸೆಲಗಂಶೆಟ್ಟಿ ಮತ್ತು ವಂಶಿ ಕರುಮಂಚಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚೇತನ್ ಭಾರದ್ವಾಜ್ ಸಂಗೀತ ನೀಡಿದ್ದಾರೆ. ಈ ಸಿನಿಮಾ ಮೇ 31ರಂದು ತೆರೆಗೆ ಬರಲಿದ್ದು, ಈ ಸಂದರ್ಭದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದರು ಮತ್ತು ಈ ಚಿತ್ರ ಉತ್ತಮ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ನಟ ಆನಂದ್ ಅವರ ಸಹೋದರ ಹಾಗೂ ಟಾಲಿವುಡ್ ಸೂಪರ್ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಲವ್ ಇದೆ ಎಂಬ ಮಾತುಗಳು ಕೆಲ ವರ್ಷಗಳಿಂದ ಕೇಳಿಬರತ್ತಲೇ ಇದೆ. ಆನಂದ್ ದೇವರಕೊಂಡ ನಟನೆಯ ಬೇಬಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೂ ರಶ್ಮಿಕಾ ಬಂದಿದ್ದರು. ಇದೀಗ ಗಮ್ ಗಮ್ ಗಣೇಶ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿಯೂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಆನಂದ್, ರಶ್ಮಿಕಾಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ರಶ್ಮಿಕಾ ನೀಡಿದ ತಮಾಷೆ ಉತ್ತರಗಳು ಎಲ್ಲರ ಗಮನ ಸೆಳೆದಿದೆ.
ಇತ್ತೀಚೆಗೆ ರಶ್ಮಿಕಾ ಸಾಕು ನಾಯಿಗಳು ಮತ್ತು ಬೆಕ್ಕುಗಳೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪಶ್ನೆ ಮಾಡಿದಾಗ ತಮ್ಮ ಮುದ್ದಿನ ಮಗು ನಾಯಿ ಆರಾ ಇದು ಎಂದು ಉತ್ತರಿಸಿದರು. ಅಲ್ಲದೆ, ಆರಾ ನನ್ನ ಮೊದಲ ಮಗು ಮತ್ತು ಸ್ಟಾರ್ಮ್ (ವಿಜಯ್ ದೇವರಕೊಂಡ ಸಾಕುನಾಯಿ ಹೆಸರು) ನನ್ನ ಎರಡನೇ ಮಗು ಎಂದು ರಶ್ಮಿಕಾ ಉತ್ತರಿಸಿದರು. ಇದಾದ ಬಳಿಕ ತನ್ನ ನೆಚ್ಚಿನ ಪ್ರವಾಸ ತಾಣದ ಬಗ್ಗೆ ಕೇಳಿದಾಗ ನ್ಯಾಷನಲ್ ಕ್ರಶ್ ವಿಯೆಟ್ನಾಂ ಎಂದು ಹೇಳಿದರು. ಅದಾದ ನಂತರ ಆನಂದ್ ಅವರು ಕೇಳಿದ ಮತ್ತೊಂದು ಕುತೂಹಲಕಾರಿ ಪ್ರಶ್ನೆ ರಶ್ಮಿಕಾರನ್ನು ಗೊಂದಲಕ್ಕೆ ದೂಡಿತು.
ಒಳ್ಳೆ ಸಿನಿಮಾ ಮಾಡಿದ್ದೀರಿ ಅಲ್ಲವೇ ನಿಮ್ಮ ನೆಚ್ಚಿನ ಸಹನಟ ಯಾರು ಎಂದು ಕೇಳಿರು. ಈ ವೇಳೆ ನಸು ನಕ್ಕ ರಶ್ಮಿಕಾ, ತಕ್ಷಣ ಮೈಕ್ನಲ್ಲಿ ಆನಂದ್ ನೀನು ಕೂಡ ನನ್ನ ಕುಟುಂಬದವು ಈ ರೀತಿ ನನ್ನನ್ನು ಮಾತಿನಲ್ಲಿ ಸಿಲುಕಿಸಬಹುದಾ ಎನ್ನುತ್ತಾರೆ. ಬಳಿಕ ರೌಡಿ ಹುಡುಗ (ವಿಜಯ್ ದೇವರಕೊಂಡ) ಎಂದು ರಶ್ಮಿಕಾ ಹೇಳುತ್ತಾರೆ. ಈ ವೇಳೆ ಅಲ್ಲಿದ್ದವರೆಲ್ಲ ಕೇಕೆ ಹಾಕಿ ಕೂಗಾಡುತ್ತಾರೆ.
ಸದ್ಯ ಆನಂದ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ತಮಾಷೆಯ ಕಾಮೆಂಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನನ್ನ ಕುಟುಂಬದವನು ಎಂದು ಆನಂದ್ ದೇವರಕೊಂಡಗೆ ಹೇಳಿದ ಮಾತನ್ನು ಗಮನಿಸಿರುವ ನೆಟ್ಟಿಗರು ಕೊನೆಗೂ ರಶ್ಮಿಕಾ ನಿಜ ಒಪ್ಪಿಕೊಂಡಿದ್ದಾರೆ. ಅವರಿಗೆ ವಿಜಯ್ ಮೇಲೆ ಲವ್ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)