ಕಿರಾತಕ ಚಿತ್ರದಲ್ಲಿ ಯಶ್​ ತಂಗಿ ಪಾತ್ರದಲ್ಲಿ ನಟಿಸಿದ್ದ ಅರ್ಪಿತಾ ಈ ಹೇಗಿದ್ದಾರೆ ಗೊತ್ತಾ? ಎಷ್ಟು ಬದಲಾಗಿದ್ದಾರೆ ನೋಡಿ…

Baby Arpitha
Published on

ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ ಹಾಗೂ ನೆಚ್ಚಿನ ಪೋಷಕ ಕಲಾವಿದರ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಅಥವಾ ಕಲಾವಿದರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ನಟ ಯಶ್​ ಬಗ್ಗೆ ಕನ್ನಡಿಗರಿಗೆ ಹೇಳುವ ಅಗತ್ಯವೇ ಇಲ್ಲ. ಅವರ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಯಶ್​ ಅವರ ಸಿನಿ ಜೀವನದಲ್ಲಿ ಮಹತ್ವದ ತಿರುವು ಕೊಟ್ಟ ಸಿನಿಮಾಗಳಲ್ಲಿ ಕಿರಾತಕ ಸಿನಿಮಾ ಪ್ರಮುಖ ಪಾತ್ರವಹಿಸುತ್ತದೆ. ಇದು ತಮಿಳಿನ ಕಲಾವಾಣಿ ಸಿನಿಮಾದ ರಿಮೇಕ್​ ಆದರೂ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿತು. ಯಶ್​ಗೆ ಉತ್ತಮ ಖ್ಯಾತಿ ತಂದುಕೊಟ್ಟಿತು. ಯಶ್​ಗೆ ಮಾತ್ರವಲ್ಲದೆ, ಹಾಸ್ಯ ನಟ ಚಿಕ್ಕಣ್ಣ ಅವರ ಸಿನಿ ಬದುಕಿಗೆ ಮಹತ್ತರ ತಿರುವು ನೀಡಿತು.

ಈ ಸಿನಿಮಾದಲ್ಲಿ ಯಶ್​​ ತಂಗಿ ಪಾತ್ರ ನಿಮಗೆ ನೆನಪಿರಬಹುದು. ಕೆಲವು ದೃಶ್ಯಗಳಲ್ಲಿ ಬಂದು ಹೋಗುವ ಈ ಪಾತ್ರ ನೋಡುಗರ ಮನಸ್ಸನ್ನು ಸೆಳೆಯುತ್ತದೆ. ರಾಜಿ ಹೆಸರಿನ ಪಾತ್ರ ನಟಿಸಿದ್ದ ಬೇಬಿ ಅರ್ಪಿತಾ ಬಹುತೇಕರಿಗೆ ತಿಳಿದಿಲ್ಲ. ಇವರ ಪೂರ್ಣ ಹೆಸರು ಅರ್ಪಿತಾ ದೇವರಾಜ್​. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅರ್ಪಿತಾ ಅವರ ರೀಲ್ಸ್​ ವೈರಲ್​ ಆಗುತ್ತಿದ್ದು, ಆಕೆಯನ್ನು ನೋಡಿದ ನೆಟ್ಟಿಗರು ನೀವು ಕಿರಾತಕ ಸಿನಿಮಾದಲ್ಲಿ ಯಶ್​ ತಂಗಿಯಾಗಿ ನಟಿಸಿದ್ರಿ ಅಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.

ಅರ್ಪಿತಾ ದೇವರಾಜ್​ ತನ್ನ ಇನ್​ಸ್ಟಾಗ್ರಾಂ ಪ್ರೊಫೈಲ್​ನಲ್ಲಿ ಕಲಾವಿದೆ, ಹೆಮ್ಮೆಯ ಭಾರತೀಯ, ಮ್ಯೂಸಿಕ್​, ವೀಣೆ ಮತ್ತು ಡಾನ್ಸ್​ ಲವರ್​ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತಾನೋರ್ವ ಪ್ರಾಣಿ ಪ್ರಿಯೆ ಎಂದು ಹೇಳಿದ್ದಾರೆ. ಸದ್ಯ ಅರ್ಪಿತಾ ಅವರ ರಿಲ್ಸ್​ ವಿಡಿಯೋಗಳು ಎಲ್ಲೆಡೆ ವೈರಲ್​ ಆಗುತ್ತಿವೆ. ವಿಡಿಯೋ ನೋಡಿದವರು ಕಿರಾತಕ ಸಿನಿಮಾದಲ್ಲಿ ಯಶ್​ ತಂಗಿ ಪಾತ್ರ ಮಾಡಿದ್ದ ನೀವು ತುಂಬಾ ಬದಲಾಗಿದ್ದೀರಿ. ನಮ್ಮ ಕಣ್ಣನ್ನು ನಂಬೋಕೆ ಆಗುತ್ತಿಲ್ಲ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ ಅರ್ಪಿತಾ ದೇವರಾಜ್​ ಅವರು ಇನ್​ಸ್ಟಾಗ್ರಾಂನಲ್ಲಿ 5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಸದ್ಯ ಅವರು ಏನು ಮಾಡುತ್ತಿದ್ದಾರೆ. ಎಲ್ಲಿದ್ದಾರೆ ಎಂಬ ಮಾಹಿತಿ ಲಬ್ಯವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅವರು ರೀಲ್ಸ್​ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net