More

  ನಟಿ ರಮ್ಯಾ ಕೃಷ್ಣನ್​ ಬಳಿ ಇಷ್ಟೊಂದು ಆಸ್ತಿ ಇದೆಯಾ? ಒಟ್ಟು ಮೌಲ್ಯ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

  ನವದೆಹಲಿ: ಹಿರಿಯ ನಟಿ ಹಾಗೂ ಮಾಜಿ ಸ್ಟಾರ್ ಹೀರೋಯಿನ್ ರಮ್ಯಾ ಕೃಷ್ಣನ್ ಅವರ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದು ಕಾಲದಲ್ಲಿ ಹಲವು ಕನ್ನಡ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ನಟಿಸಿ ತನ್ನದೇಯಾದ ವಿಶೇಷ ಗುರುತನ್ನು ರಮ್ಯಾ ಕೃಷ್ಣನ್ ಸೃಷ್ಟಿಸಿಕೊಂಡಿದ್ದಾರೆ. ಬಹುಭಾಷಾ ತಾರೆಯಾಗಿರುವ ರಮ್ಯಾ ಕೃಷ್ಣನ್ ಇಂದಿಗೂ ಸಿನಿ ರಂಗದಲ್ಲಿ ಸಕ್ರಿಯರಾಗಿರದ್ದಾರೆ.

  1967, ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಜನಿಸಿದ ರಮ್ಯಾ ಕೃಷ್ಣನ್ 1990 ರಿಂದ 2000 ರವರೆಗೆ ಸುಮಾರು ಒಂದು ದಶಕದ ಕಾಲ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲೇ ರಮ್ಯಾ ಕೃಷ್ಣನ್ ಅವರು ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಎಂಟನೇ ತರಗತಿಯಲ್ಲಿ ಓದುತ್ತಿರುವಾಗಲೇ ವೆಲ್ಲೈ ಮಾನಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

  ರಮ್ಯಾ ಕೃಷ್ಣನ್ 1988ರಲ್ಲಿ ಡಾ. ವಿಷ್ಣುವರ್ಧನ್​ ನಟನೆಯ ಕೃಷ್ಣ ರುಕ್ಮಿಣಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಕನ್ನಡದಲ್ಲಿ ವಿಷ್ಣುವರ್ಧನ್​, ರವಿಚಂದ್ರನ್​, ಉಪೇಂದ್ರ ಹಾಗೂ ಶಿವರಾಜ್​ಕುಮಾರ್​ ಸೇರಿದಂತೆ ಸ್ಟಾರ್ ನಟರ ಜತೆ ನಟಿಸಿದ್ದಾರೆ. ನಾಯಕಿಯಷ್ಟೇ ಅಲ್ಲದೆ ವಿಲನ್ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಬಹಳ ಕಾಲ ನಾಯಕಿಯಾಗಿ ನಟಿಸಿದ್ದ ರಮ್ಯಾ ಕೃಷ್ಣನ್​, ಸದ್ಯ ತಾಯಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಹುಬಲಿ ಸಿನಿಮಾ ನಂತರ ಇಡೀ ಭಾರತ ಚಿತ್ರರಂಗದಲ್ಲಿ ಶಿವಗಾಮಿ ಎಂದೇ ಖ್ಯಾತಿಯಾಗಿದ್ದಾರೆ. ರಮ್ಯಾ ಕೃಷ್ಣನ್​ ಚಿತ್ರರಂಗಕ್ಕೆ ಬಂದು ಸುಮಾರು 30 ವರ್ಷಗಳಾಗಿವೆ. ಇದಲ್ಲದೆ, ಅವರು ಅಪಾರ ಆಸ್ತಿಯನ್ನು ಸಂಪಾದಿಸಿದ್ದಾರೆ. ಮೂಲಗಳ ಪ್ರಕಾರ ಇದುವರೆಗೆ 90 ಕೋಟಿಗೂ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದಾರೆಂದು ತಿಳಿದುಬಂದಿದೆ.

  See also  ಮತ ಎಣಿಕೆ ಕೇಂದ್ರದಲ್ಲಿ 3 ಹಂತದ ಬಿಗಿ ತಪಾಸಣೆ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

  ಅಂದಹಾಗೆ ರಮ್ಯಾ ಕೃಷ್ಣನ್​ ಅವರು ಕನ್ನಡದಲ್ಲಿ ಬಾ ಬಾರೋ ರಸಿಕ, ನಾನು ನಾನೆ, ರಕ್ತ ಕಣ್ಣೀರು, ರಾಜ ನರಸಿಂಹ, ಏಕಾಂಗಿ, ಚಾಮುಂಡಿ, ನೀಲಾಂಬರಿ, ಯಾರೆ ನೀ ಅಭಿಮಾನಿ, ಮಾಂಗಲ್ಯಮ್ ತಂತುನಾನೇನ, ಗಡಿಬಿಡಿ ಗಂಡ ಹಾಗೂ ಕೃಷ್ಣ ರುಕ್ಮಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

  ಖ್ಯಾತ ಸಂಗೀತ ನಿರ್ದೇಶಕನಿಗೆ ಹೃದಯಾಘಾತವಾಗಲು ದರ್ಶನ್ ಕಾರಣ! ಬಿಗ್​ಬಾಸ್​ ಸ್ಪರ್ಧಿಯಿಂದ ಗಂಭೀರ ಆರೋಪ

  ಐಎಎಸ್​ ಮಗಳಿಗೆ ಸೆಲ್ಯೂಟ್​ ಹೊಡೆದ ಐಪಿಎಸ್​ ತಂದೆ! ಯಶಸ್ಸು ಅಂದ್ರೆ ಇದು ಅಂದ್ರು ನೆಟ್ಟಿಗರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts