More

  ಲೀಗ್​ನಿಂದ ಹೊರಬಿದ್ದ MI​ಗೆ ನೀತಾ ಅಂಬಾನಿ ಕ್ಲಾಸ್​; ರೋಹಿತ್​, ಹಾರ್ದಿಕ್​ಗೆ ವಿಶೇಷ ಕಿವಿಮಾತು!

  ಮುಂಬೈ: ಈ ಬಾರಿಯ ಐಪಿಎಲ್ 17ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ತಮ್ಮದು ಐದು ಬಾರಿ ಚಾಂಪಿಯನ್ಸ್ ಹಂತ ತಲುಪಿದ ಬಲಿಷ್ಠ​ ತಂಡ​ ಎಂಬುದನ್ನು ಮರೆತು ಹೋಯಿತು ಎನ್ನುವಂತೆ ಫ್ಲಾಪ್​ ಪ್ರದರ್ಶನ ನೀಡಿ, ಲೀಗ್​ನಿಂದಲೇ ಹೊರಗುಳಿದಿದೆ. ಅದರಲ್ಲೂ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಔಟ್ ಆಗಿದ್ದು, ಎಂಐ ಅಭಿಮಾನಿಗಳಲ್ಲಿ ಅತೀವ ಬೇಸರ ತಂದೊಡ್ಡಿದೆ.

  ಇದನ್ನೂ ಓದಿ: ಬಾಲ್ಯದಲ್ಲೇ ಕಲ್ಪಿಸಿ ಸಾಮಾಜಿಕ ನೈರ್ಮಲ್ಯ ಜಾಗೃತಿ   ಡಾ. ನಾ. ಸೋಮೇಶ್ವರ ಆಶಯ  ಈಶ್ವರೀಯ ವಿವಿಯ ಸೇವಾ ಯೋಜನೆ ಪ್ರಾರಂಭ

  ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ತಂಡವನ್ನು ಡ್ರೆಸ್ಸಿಂಗ್ ರೂಮ್​ನಲ್ಲಿ ಒಗ್ಗೂಡಿಸಿ, ಮಾತನಾಡಿಸಿದ ಮುಂಬೈ ಇಂಡಿಯನ್ಸ್​ ತಂಡದ ಮಾಲೀಕಿ ನೀತಾ ಅಂಬಾನಿ, “ನಮ್ಮೆಲ್ಲರಿಗೂ ಈ ಸೀಸನ್​ ಬಹಳ ನಿರಾಸೆ ಮೂಡಿಸಿದೆ. ನಾವು ಬಯಸಿದ ರೀತಿಯಲ್ಲಿ ಯಾವುದು ಕೂಡ ನಡೆಯಲಿಲ್ಲ. ಆದರೆ ನಾನು ಈಗಲೂ ಸಹ ಕೇವಲ ಮಾಲೀಕರಾಗಿ ಅಲ್ಲ, ಮುಂಬೈ ಇಂಡಿಯನ್ಸ್‌ನ ದೊಡ್ಡ ಅಭಿಮಾನಿಯಾಗಿಯೇ ನಿಂತಿದ್ದೇನೆ. ನಮ್ಮ ಟೀಮ್​ನ ಜರ್ಸಿಯನ್ನು ಧರಿಸುವುದು ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ” ಎಂದರು.

  https://x.com/mipaltan/status/1792056139896754574?ref_src=twsrc%5Etfw%7Ctwcamp%5Etweetembed%7Ctwterm%5E1792056139896754574%7Ctwgr%5E3879dad1df609f60a867d5106b038b123725c8b1%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fnita-ambani-gives-pep-talk-in-mumbai-indians-dressing-room-mentions-rohit-sharma-hardik-pandya-we-will-review-101716139998677.html

  “ಮುಂಬೈ ಇಂಡಿಯನ್ಸ್‌ನೊಂದಿಗಿನ ಸಂಬಂಧ ನನಗೆ ಅತೀವ ಸಂತೋಷ ಹಾಗೂ ಗೌರವ ಉಂಟುಮಾಡಿದೆ. ಇಂತಹ ಸೋಲಿಗೆ ಕಾರಣವೇನು? ಯಾಕೆ ಲೆಕ್ಕಾಚಾರಗಳು ತಲೆಕೆಳಗಾಯಿತು ಎಂಬುದರ ಹಿಂದಿರುವ ಕಾರಣಗಳನ್ನು ಯೋಚಿಸಿ, ಮುಂದಿನ ಸೀಸನ್​ಗೆ ಬರೋಣ” ಎಂದು ನೀತಾ ಅಂಬಾನಿ ಹೇಳಿದರು. ಇನ್ನು ಮುಂದಿನ ತಿಂಗಳು ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪರ ಆಡಲಿರುವ ತಮ್ಮ ತಂಡದ ನಾಲ್ಕು ಆಟಗಾರರಿಗೆ ನೀತಾ ವಿಶೇಷ ಶುಭಹಾರೈಕೆಗಳನ್ನು ತಿಳಿಸಿದರು.

  ಇದನ್ನೂ ಓದಿ:  ಮೆಟ್ರೋ ರೈಲಿನೊಳಗೆ ಅಶ್ಲೀಲ ಡಾನ್ಸ್​! ಯುವತಿಯ ವಿರುದ್ಧ ಭಾರಿ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ

  “ರೋಹಿತ್, ಹಾರ್ದಿಕ್, ಸೂರ್ಯ (ಸೂರ್ಯಕುಮಾರ್ ಯಾದವ್) ಮತ್ತು ಬುಮ್ರಾ (ಜಸ್ಪ್ರೀತ್ ಬುಮ್ರಾ) ನಿಮಗೆಲ್ಲಾ ನಾನು ಹೇಳಲು ಬಯಸುವುದು ಇಷ್ಟೇ. ಎಲ್ಲಾ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ. ವಿಶ್ವಕಪ್ ಗೆದ್ದು ಬನ್ನಿ ಎಂದು ಶುಭ ಹಾರೈಸುತ್ತೇನೆ” ಎಂದು ಸಂತಸದಿಂದಲೇ ನೀತಾ ಅಂಬಾನಿ ಹೇಳಿದರು. ಸದ್ಯ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಫ್ಯಾನ್ಸ್​ಗಳ ಮೆಚ್ಚುಗೆಗೆ ಪಾತ್ರವಾಗಿದೆ,(ಏಜೆನ್ಸೀಸ್).

  ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

  ‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts