More

  ‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

  ನವದೆಹಲಿ: ಐಪಿಎಲ್ 17ನೇ ಆವೃತ್ತಿ ಪ್ರಾರಂಭವಾದಗಿನಿಂದಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆರಂಭಿಕ ಹಾಗೂ ಸ್ಪೋಟಕ ಬ್ಯಾಟ್ಸ್​ಮನ್​ ಆದ ವಿರಾಟ್ ಕೊಹ್ಲಿ ಕಂಡರೆ ಅದ್ಯಾಕೋ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ದಿಗ್ಗಜ, ಸುನಿಲ್ ಗವಾಸ್ಕರ್​ ಅವರಿಗೆ ಆಗುವುದೇ ಇಲ್ಲ ಎಂಬುದು ಇತ್ತೀಚಿಗೆ ನಡೆದ ಪರೋಕ್ಷ ವಾಗ್ವಾದಗಳಿಂದ ಕಂಡುಬಂದಿದೆ. ರನ್​ರೇಟ್​ ವಿಚಾರದಿಂದ ಇಬ್ಬರ ಮಧ್ಯೆ ಶುರುವಾದ ಕಿಡಿ, ಇದೀಗ ಜ್ವಾಲೆಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಅದಕ್ಕೆ ಗವಾಸ್ಕರ್​ ನೀಡಿದ ಮತ್ತೊಂದು ಹೇಳಿಕೆಯೇ ಸಾಕ್ಷಿ.

  ಇದನ್ನೂ ಓದಿ: ಕದರಪ್ಪನಹಟ್ಟಿಗೆ ಸೌಕರ್ಯ ಕಲ್ಪಿಸಲು ಆಗ್ರಹ ಗುಡಾಳು ಗ್ರಾಪಂ ಎದುರು ಪ್ರತಿಭಟನೆ  ಎಐಕೆಕೆಎಂಎಸ್ ನೇತೃತ್ವ

  ಈ ಹಿಂದೆ ತನ್ನ ಸ್ಟ್ರೈಕ್​ ರೇಟ್​ ಕುರಿತು ಕೇಳಲಾದ ಪ್ರಶ್ನೆಗೆ ಮುಖಕ್ಕೆ ಹೊಡೆದ ರೀತಿಯಲ್ಲಿ ಉತ್ತರಿಸಿದ್ದ ಕಿಂಗ್ ಕೊಹ್ಲಿ, “ನನ್ನ ಸ್ಟ್ರೈಕ್​ ರೇಟ್​ ಕುರಿತು ಕೆಲವರು ಅಲ್ಲಿ ಕುಳಿತು ಮಾತನಾಡಲು ಅರ್ಹರಿಲ್ಲ. ಅದರಲ್ಲೂ ಅವರು ನಮ್ಮ ಸ್ಥಾನದಲ್ಲಿ ಇದ್ದಿದ್ದರೇ, ಹೀಗೆ ಮಾತನಾಡುತ್ತಿರಲಿಲ್ಲ. ಆಗ ಬಹುಶಃ ಅವರಿಗೂ ತಿಳಿದಿರುತ್ತಿತ್ತು” ಎಂದು ಹೇಳಿದ್ದರು. ಇನ್ನೂ ‘ರನ್​ ಮಷಿನ್​’ನ ಈ ಹೇಳಿಕೆಗೆ ತಿರುಗೇಟು ಕೊಟ್ಟಿದ್ದ ಗವಾಸ್ಕರ್​, ಈ ರೀತಿ ಹೇಳಿಕೆ ನೀಡಿದ್ದರು.

  “ನಾವೆಲ್ಲರೂ ತುಂಬ ಅಲ್ಲದೇ ಹೋದರು ಅಲ್ಪ-ಸ್ವಲ್ಪವಾದರು ಕ್ರಿಕೆಟ್ ಆಡಿದ್ದೇವೆ. ನಾವು ಕಾಮೆಂಟ್ರಿ ಮಾಡುವವರು ಯಾವುದೇ ಅಜೆಂಡಾಗಳನ್ನು ಇಟ್ಟುಕೊಂಡಿರುವುದಿಲ್ಲ, ನಮಗೆ ಮುಂದೆ ಏನು ಕಾಣಿಸುತ್ತದೋ ಅದನ್ನು ಮಾತ್ರ ಹೇಳ್ತೇವೆ. ನಮಗೆ ಅವರು ಇಷ್ಟ, ಇವರು ಇಷ್ಟವಿಲ್ಲ ಎಂಬ ಯಾವುದೇ ಉದ್ದೇಶಗಳು ಇರುವುದಿಲ್ಲ. ಅಷ್ಟಕ್ಕೂ ಅದೆಲ್ಲಾ ಇದ್ದರೂ ಸಹ ಅಲ್ಲಿ ಏನು ನಡೆಯುತ್ತಿದೆ ಅದನ್ನು ಹೇಳುವುದು ಮಾತ್ರ ನಮಗೆ ಗೊತ್ತಿದೆ” ಎಂದಿದ್ದರು.

  ಇದನ್ನೂ ಓದಿ: ಅಂಜಲಿ ಕುಟುಂಬದ ನೆರವಿಗಾಗಿ ಪ್ರತಿಭಟನೆ, ನೇಹಾ ತಂದೆ ನಿರಂಜನ ಹಿರೇಮಠ ಹೇಳಿಕೆ

  ಆದರೆ, ಇದೀಗ ಮತ್ತೆ ವಿರಾಟ್ ಕೊಹ್ಲಿ ವಿರುದ್ಧ ಕಟು ವಾಗ್ದಾಳಿ ನಡೆಸಿರುವ ಸುನಿಲ್ ಗವಾಸ್ಕರ್, “ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಅದು ಸ್ಟಾಪ್-ಸ್ಟಾರ್ಟ್ ಕರಿಯರ್ ಆಗಿತ್ತು. ಅಂದು ಮಹೇಂದ್ರ ಸಿಂಗ್ ಧೋನಿ ಕೊಹ್ಲಿಗೆ ಸ್ವಲ್ಪ ಹೆಚ್ಚಿನ ಆವೇಗವನ್ನು ನೀಡಿದ್ದರಿಂದಲೇ ಇಂದು ನಾವು ನೋಡುತ್ತಿರುವ ವಿರಾಟ್​ ಅವರಾಗಿದ್ದಾರೆ” ಎಂದು ಹೇಳಿದರು. ಸದ್ಯ ಈ ಹೇಳಿಕೆಯಿಂದ ಮತ್ತೊಮ್ಮೆ ಕೊಹ್ಲಿ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಗಿರುವ ಗವಾಸ್ಕರ್​ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೆಲ್ಲಾ ನಿಮಗೆ ಶೋಭೆ ತರುವುದಿಲ್ಲ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

  ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

  ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts