More

  ಕದರಪ್ಪನಹಟ್ಟಿಗೆ ಸೌಕರ್ಯ ಕಲ್ಪಿಸಲು ಆಗ್ರಹ ಗುಡಾಳು ಗ್ರಾಪಂ ಎದುರು ಪ್ರತಿಭಟನೆ  ಎಐಕೆಕೆಎಂಎಸ್ ನೇತೃತ್ವ


  ದಾವಣಗೆರೆ: ತಾಲೂಕಿನ ಗುಡಾಳು ಗ್ರಾಪಂ ವ್ಯಾಪ್ತಿಯ ಕದರಪ್ಪನಹಟ್ಟಿಯಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
  ಗ್ರಾಮದ ಶುದ್ಧ ಕುಡಿವ ನೀರಿನ ಘಟಕ ಹಾಳಾಗಿದ್ದರೂ ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಬರಗಾಲದ ಈ ಸಂದರ್ಭದಲ್ಲಿ ಕುಡಿವ ನೀರಿಲ್ಲದೇ ತತ್ತರಿಸುವಂತಾಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಗೃಹವಿಲ್ಲದ್ದರಿಂದ ಮಕ್ಕಳು ಶೌಚಕ್ಕಾಗಿ ಬಯಲಿಗೆ ತೆರಳುವ ದುಸ್ಥಿತಿ ಇದೆ ಎಂದು ಗ್ರಾಮಸ್ಥರು ದೂರಿದರು.
  ನೀರಿನ ಘಟಕ ದುರಸ್ತಿ ಮಾಡಿಸುವವರೆಗೆ ಪಂಚಾಯಿತಿಯಿಂದ ಗ್ರಾಮಸ್ಥರಿಗೆ ಕುಡಿವ ನೀರೊದಗಿಸಬೇಕು. ಗ್ರಾಮದ ರಸ್ತೆಗಳನ್ನು ವಿಸ್ತರಣೆ ಮಾಡಿ ಮಳೆನೀರು ಸರಾಗವಾಗಿ ಹೋಗುವಂತೆ ಚರಂಡಿ-ಒಳಚರಂಡಿಗಳನ್ನು ನಿರ್ಮಿಸಬೇಕು. ಜಾನುವಾರುಗಳಿಗೆ ಸಕಾಲಿಕ ಚಿಕಿತ್ಸೆ ಕೊಡಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು. ಮನವಿಪತ್ರ ಸ್ವೀಕರಿಸಿದ ಪಿಡಿಒ, ದಿನಕ್ಕೆ ನಾಲ್ಕು ಟ್ಯಾಂಕರ್ ಮೂಲಕ ನೀರೊದಗಿಸಲಾಗುವುದು ಎಂದು ಭರವಸೆ ನೀಡಿದರು.
  ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಸಂಘಟನಾಕಾರ ಮಂಜುನಾಥ ರೆಡ್ಡಿ, ಉಪಾಧ್ಯಕ್ಷ ಬಸವರಾಜಪ್ಪ ನೀರ್ಥಡಿ , ಸದಸ್ಯರಾದ ಹುಣಸೇಕಟ್ಟೆ  ರುದ್ರಪ್ಪ , ಸುರೇಶ್ ಕದಿರಪ್ಪನಹಟ್ಟಿ, ವೆಂಕಟೇಶ್, ನಾಗರಾಜ್, ನೀರ್ಥಡಿ ತಿಪ್ಪೇಶ್, ಗುಡಾಳ್ ರಾಜಪ್ಪ  ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts