More

    ಇದೇ ಕಡೆಯ ಪಂದ್ಯ, ಇಲ್ಲಾದ್ರೂ… ಮುಂಬೈ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಕಿವಿಮಾತು ಹೇಳಿದ ಮಾಜಿ ಕ್ರಿಕೆಟಿಗ

    ಮುಂಬೈ: ಐದು ಬಾರಿ ಐಪಿಎಲ್​ ಚಾಂಪಿಯನ್ಸ್​ ಪಟ್ಟ ಪಡೆದಿರುವ ಮುಂಬೈ ಇಂಡಿಯನ್ಸ್​ ತಂಡ ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಅಲಂಕರಿಸಿದ್ದು, ಈಗಾಗಲೇ ಲೀಗ್​ನಿಂದ ಹೊರಗುಳಿದಿದೆ. ಮಾಜಿ ಕ್ಯಾಪ್ಟನ್ ರೋಹಿತ್​ ಶರ್ಮಾರಿಂದ ನಾಯಕನ ಜವಾಬ್ದಾರಿಯನ್ನು ಹಸ್ತಾಂತರಿಸಿಕೊಂಡ ಹಾರ್ದಿಕ್​, ಮೊದಲ ಪಂದ್ಯದಿಂದಲೂ ತಮ್ಮ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಶೇ.100 ರಷ್ಟು ವಿಫಲರಾಗಿದ್ದಾರೆ. ಸದ್ಯ ಪಾಂಡ್ಯ ಆಡಿದ ಸೋಲಿನ ಆಟ ನೋಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸಾನ್​, ಮುಂಬೈ ಕ್ಯಾಪ್ಟನ್​ಗೊಂದು ಬಹಳ ಮುಖ್ಯವಾದ ಸಂದೇಶ ನೀಡಿದ್ದಾರೆ.

    ಇದನ್ನೂ ಓದಿ: ಕಟೀಲು ಶಿವಳ್ಳಿ ಸ್ಪಂದನ ಕ್ರೀಡೋತ್ಸವ

    ಇಂದು ಐಪಿಎಲ್ 17ನೇ ಆವೃತ್ತಿಯಲ್ಲಿ ತಮ್ಮ ಕಡೆಯ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಆಡುತ್ತಿರುವ ಮುಂಬೈ ಇಂಡಿಯನ್ಸ್​ಗೆ ಈ ಮ್ಯಾಚ್ ಗೆದ್ದರೂ ಸೋತರೂ ಅಂತ ದೊಡ್ಡ ಬದಲಾವಣೆಯೇನು ಕಂಡುಬರುವುದಿಲ್ಲ. ಯಾಕಂದ್ರೆ, ಎಂಐ ಈಗಾಗಲೇ ಲೀಗ್​ನಿಂದ ಸಂಪೂರ್ಣವಾಗಿ ಹೊರಗುಳಿದಿದೆ. ಆದರೂ ಈ ಪಂದ್ಯದಲ್ಲಿ ಎಲ್​ಎಸ್​ಜಿಯನ್ನು ಪ್ಲೇಆಫ್​ನಿಂದ ಹೊರಗಿಡಲು ಮುಂಬೈಗೆ ಸುವರ್ಣಾವಕಾಶವಿದೆ.

    ಇನ್ನು ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕ್ಯಾಪ್ಟನ್ ಹಾರ್ದಿಕ್​ಗೆ ಸಲಹೆ ನೀಡಿದ ಶೇನ್, ಈ ಸೀಸನ್​ನಲ್ಲಿ ಬೃಹತ್ ಸಂಖ್ಯೆಯ ಅಭಿಮಾನಿಗಳನ್ನು ಈಗಾಗಲೇ ನಿರಾಸೆಗೊಳಿಸಿದ್ದೀರಿ. ಕನಿಷ್ಠ ಈ ಕಡೆಯ ಪಂದ್ಯವು ನಿಮ್ಮ ತವರಿನಲ್ಲಿ ನಡೆಯುತ್ತಿರುವ ಕಾರಣ, ಇಲ್ಲಿಯಾದರೂ ಅತ್ಯುತ್ತಮ ಪ್ರದರ್ಶನ ನೀಡಿ, ಅವರನ್ನು ಖುಷಿಪಡಿಸುವ ಕೆಲಸ ಮಾಡಿ ಎಂದಿದ್ದಾರೆ.

    ಇದನ್ನೂ ಓದಿ:  ಬ್ರಾೃಂಡ್ ಮಂಗಳೂರು ಪ್ರಶಸ್ತಿಗೆ ಅರ್ಜಿ ಆಹ್ವಾನ

    “ಈ ಪಂದ್ಯದಲ್ಲಿ ತಂಡದ ಆಟಗಾರರಿಗಿಂತ ಹಾರ್ದಿಕ್​ ಉತ್ತಮ ಪ್ರದರ್ಶನ ಕೊಡಬೇಕು. ಕಾರಣ, ಮುಂಬರುವ ಟಿ20 ವಿಶ್ವಕಪ್​ ಪಂದ್ಯಗಳಲ್ಲಿ ಉಪನಾಯಕನಾಗಿ ಟೀಂ ಇಂಡಿಯಾ ಪರ ಆಡಲಿದ್ದಾರೆ. ಹಾಗಾಗಿ ಈ ಕಡೆಯ ಪಂದ್ಯದಲ್ಲಿ ತಮ್ಮ ಬ್ಯಾಟ್​ನಿಂದಲೇ ಉತ್ತಮ ಪ್ರದರ್ಶನ ನೀಡಿ, ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿ” ಎಂದು ಕಿವಿಮಾತು ಹೇಳಿದ್ದಾರೆ,(ಏಜೆನ್ಸೀಸ್).

    ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

    ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts