

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಗೆಲುವಿನೊಂದಿಗೆ ಮುನ್ನಡೆಯುತ್ತಿದೆ. ಇತ್ತೀಚೆಗೆ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳಿಂದ ಗೆದ್ದು ಸೂಪರ್ 8ಕ್ಕೆ ಅರ್ಹತೆ ಪಡೆದಿದೆ. ಈ ಪಂದ್ಯದಲ್ಲೂ ಎಂದಿನಂತೆಯೇ ಕಡಿಮೆ ಸ್ಕೋರ್ ದಾಖಲಾಗಿದೆ. ಆದರೆ, ಯುಎಸ್ಎ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಗೋಲ್ಡನ್ ಡಕ್ ಆಗಿ ಹಿಂತಿರುಗಿದರು. ಕೊಹ್ಲಿ ಔಟಾದಾಗ ನಾಯಕ ರೋಹಿತ್ ಶರ್ಮಾ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.
ಅಮೆರಿಕ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೊಂಚ ಪ್ರಯಾಸಪಟ್ಟು ಗೆಲುವು ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಅಮೆರಿಕಕ್ಕೆ ಮೊದಲ ಎಸೆತದಲ್ಲೇ ಅರ್ಷದೀಪ್ ಸಿಂಗ್ ಆಘಾತ ನೀಡಿದರು. ಆರಂಭಿಕ ಆಟಗಾರ ಜಹಾಂಗೀರ್(0) ಎಲ್ ಬಿ ರೂಪದಲ್ಲಿ ಬಲಿಯಾದರು. ಅದೇ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ಗೌಸ್ (2) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಆ ಬಳಿಕ ಭಾರತದ ಬೌಲರ್‌ಗಳನ್ನು ತಡೆಯಲು ಯಾವ ಬ್ಯಾಟ್ಸ್‌ಮನ್‌ಗಳಿಗೂ ಸಾಧ್ಯವಾಗಲಿಲ್ಲ. ಸ್ಟೀವ್ ಟೇಲರ್ (24) ರನ್‌ಗಳೊಂದಿಗೆ ಇನ್ನಿಂಗ್ಸ್ ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಅಕ್ಷರ್ ಅವರನ್ನು ಉರುಳಿಸಿದರು. ಆ ಬಳಿಕ ಅರ್ಷದೀಪ್ ಹಾಗೂ ಹಾರ್ದಿಕ್ ಪಾಂಡ್ಯ ಅಮೆರಿಕದ ಇನ್ನಿಂಗ್ಸ್ ಅನ್ನು ಹಾಳು ಮಾಡಿದರು. ಎನ್.ಆರ್.ಕುಮಾರ್ (27) ಅಗ್ರ ಸ್ಕೋರರ್ ಆಗಿದ್ದು, ಉಳಿದವರೆಲ್ಲರೂ ಕಡಿಮೆ ರನ್ಗಳಿಗೆ ಸೀಮಿತರಾದರು.
ಇದರೊಂದಿಗೆ ಅಮೆರಿಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ಅರ್ಷದೀಪ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪಾಂಡ್ಯ 2 ವಿಕೆಟ್ ಪಡೆದರು. ಆ ಬಳಿಕ 111 ರನ್ ಗಳ ಸುಲಭ ಗುರಿಯನ್ನು ಟೀಮ್ ಇಂಡಿಯಾ ಕೊಂಚ ಪ್ರಯಾಸದಿಂದ ಮುಟ್ಟಿತು. 18.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರೋಹಿತ್ ಶರ್ಮ (3) ಮತ್ತು ವಿರಾಟ್ ಕೊಹ್ಲಿ (0) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.
ಈ ಪಂದ್ಯದಲ್ಲಿ ನೇತ್ರವಾಲ್ಕರ್ ಬೌಲಿಂಗ್ನ ಮೊದಲ ಓವರ್ನ ಎರಡನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಕೀಪರ್ ಕೈಗೆ ಕ್ಯಾಚ್ ನೀಡಿ ಡಕ್ ಔಟ್ ಆದರು. ರೋಹಿತ್ ಅವರ ಆಘಾತಕಾರಿ ಪ್ರತಿಕ್ರಿಯೆ ವೈರಲ್ ಆಗಿದೆ. ಯುಎಸ್ಎ ಬೌಲರ್ ಅದ್ಭುತವಾಗಿ ಚೆಂಡನ್ನು ಎಸೆಯುತ್ತಿದ್ದಂತೆ ಹಿಟ್ ಮ್ಯಾನ್ ಪ್ರತಿಕ್ರಿಯೆ ನೀಡಿದರು. (ಏಜೆನ್ಸೀಸ್)