More

    ಟೀಮ್​ ಇಂಡಿಯಾದಲ್ಲಿದ್ದಾರೆ ಏಕೈಕ ಮಹಿಳಾ ಸಿಬ್ಬಂದಿ! ಈಕೆ ಯಾರು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ…

    ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಟೀಮ್​ ಇಂಡಿಯಾಗೆ ವಿಶೇಷ ಸ್ಥಾನವಿದೆ. ಕ್ರಿಕೆಟ್ ಜಗತ್ತನ್ನು ಆಳುವ ಶಕ್ತಿಯನ್ನು ಹೊಂದಿದೆ. ಸದ್ಯ ಟಿ20 ವಿಶ್ವಕಪ್‌ನಲ್ಲೂ ಟೀಂ ಇಂಡಿಯಾ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ನಿನ್ನೆ (ಜೂನ್​ 12) ಆತಿಥೇಯ ಅಮೆರಿಕ ತಂಡವನ್ನು ಮಣಿಸುವ ಮೂಲಕ ಕಿರು ವಿಶ್ವಕಪ್​ನಲ್ಲಿ ಮೂರನೇ ಗೆಲುವು ದಾಖಲಿಸಿದೆ. ಟೀಮ್​ ಇಂಡಿಯಾ ಈ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಹಾಗಾಗಿಯೇ ಪ್ರತಿ ಗೆಲುವಿನಲ್ಲೂ ತಂಡದ ಆಟಗಾರರಷ್ಟೇ ಅಲ್ಲ, ಟೀಮ್​ ಇಂಡಿಯಾದ ಕೋಚಿಂಗ್​ ಸಿಬ್ಬಂದಿಯ ಬಗ್ಗೆಯೂ ಮಾತನಾಡುತ್ತಾರೆ. ಇಂತಹ ಕೋಚಿಂಗ್​ ಸಿಬ್ಬಂದಿಯಲ್ಲಿರುವುದು ಒಬ್ಬಳೇ ಮಹಿಳೆ. ಇದೀಗ ಆಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ. ಆಕೆ ಯಾರೆಂದು ಹುಡುಕತೊಡಗಿದ್ದಾರೆ.

    ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿಯ ಹಲವು ಹುದ್ದೆಗಳಿವೆ. ಹಲವು ಜವಾಬ್ದಾರಿಗಳಿವೆ. ಅದಕ್ಕಾಗಿ ಸಾಕಷ್ಟು ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಅಲ್ಲದೆ ಈ ಮಹಿಳೆ ಟೀಮ್​ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿದ್ದಾರೆ. ವಾಸ್ತವವಾಗಿ ಈಕೆ ಟೀಮ್​ ಇಂಡಿಯಾದ ಪ್ರಮುಖ ಮುಖ ಎಂದೂ ಹೇಳಬಹುದು. ಏಕೆಂದರೆ, ಆಕೆಯ ಜವಾಬ್ದಾರಿಗಳು ಅಷ್ಟು ಚಿಕ್ಕದಲ್ಲ. ಟೀಮ್​ ಇಂಡಿಯಾ ಬಗ್ಗೆ ಏನು ಹೇಳಬೇಕು? ಯಾವ ಸುದ್ದಿ ಕೇಳಬೇಕು? ಎಲ್ಲವೂ ಈಕೆಯಿಂದಲೇ ಬರಬೇಕು. ವಿಶ್ವ ಕ್ರಿಕೆಟ್‌ನಲ್ಲಿ ಟೀಮ್​ ಇಂಡಿಯಾವನ್ನು ವಿಶೇಷ ಸ್ಥಾನದಲ್ಲಿ ಇಡಲು ಈ ಮಹಿಳೆ ಶ್ರಮಿಸುತ್ತಿದ್ದಾರೆ. ಈಕೆ ಮಾಡುವ ಕೆಲಸದ ಬಗ್ಗೆ ಈಗಾಗಲೇ ನಿಮಗೆ ಸುಳಿವು ಸಿಕ್ಕಿರಬಹುದು.

    ಈಕೆಯ ಹೆಸರು ರಾಜಲ್ ಅರೋರಾ. ಟೀಮ್ ಇಂಡಿಯಾದಲ್ಲಿ ಬಹಳ ಮುಖ್ಯವಾದ ಹುದ್ದೆಯಲ್ಲಿದ್ದಾರೆ. ಟೀಮ್ ಇಂಡಿಯಾ, ಐಪಿಎಲ್, ಮಹಿಳಾ ಪ್ರೀಮಿಯರ್ ಲೀಗ್‌ಗೆ ಡಿಜಿಟಲ್ ಮತ್ತು ಮೀಡಿಯಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಡಿಜಿಟಲ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾಗೆ ಸಂಬಂಧಿಸಿದ ಎಲ್ಲ ಅಪ್​ಡೇಟ್​ಗಳನ್ನು, ಸುದ್ದಿಗಳು ಮತ್ತು ವಿಷಯವನ್ನು ನಿರ್ವಹಿಸುತ್ತಾರೆ. ಅದೇನೆಂದರೆ, ವಿಶ್ವ ಕ್ರಿಕೆಟ್‌ನಲ್ಲಿ ಟೀಮ್​ ಇಂಡಿಯಾವನ್ನು ಪ್ರೊಜೆಕ್ಟ್ ಮಾಡುವುದು ಹೇಗೆ? ನಮ್ಮ ತಂಡವನ್ನು ನಾವು ಎಷ್ಟು ಚೆನ್ನಾಗಿ ಮೇಲಕ್ಕೆತ್ತಬೇಕು ಎಂಬುದನ್ನು ಈಕೆ ನಿರ್ಧರಿಸುತ್ತಾರೆ. ಆದ್ದರಿಂದಲೇ ಆಕೆಯನ್ನು ಟೀಮ್​ ಇಂಡಿಯಾದ ಪ್ರಮುಖ ಮುಖ ಎಂದು ಕರೆಯಬಹುದು.

    ಅಂದಹಾಗೆ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನದ ವಿಚಾರಕ್ಕೆ ಬಂದರೆ, ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಗ್ರೂಪ್​ ಎ ನಲ್ಲಿ ಮೊದಲ ಸ್ಥಾನದಲ್ಲಿದ್ದು, ಅಧಿಕೃತವಾಗಿ ಸೂಪರ್​ 8ರ ಹಂತವನ್ನು ತಲುಪಿದ್ದಾರೆ. ನ್ಯೂಯಾರ್ಕ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಕಡಿಮೆ ಸ್ಕೋರ್​ ಗಳಿಸಿದರೂ, ಅದನ್ನು ಸಮರ್ಥವಾಗಿ ಸಮರ್ಥಿಸಿಕೊಂಡರು. 6 ರನ್​ಗಳ ಅಂತರದಲ್ಲಿ ಅತ್ಯುತ್ತಮ ಜಯ ದಾಖಲಿಸಿತು. ನಿನ್ನೆ ಆತಿಥೇಯ ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲೂ ಭಾರತ 7 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತು. (ಏಜೆನ್ಸೀಸ್​)

    ಪವಿತ್ರಾ ಗೌಡ ನಟ ದರ್ಶನ್​ ಬಾಳಲ್ಲಿ ಬಂದಿದ್ಹೇಗೆ? ಯಾವಾಗ ಪರಿಚಯವಾಯ್ತು? ಆ ಸಿನಿಮಾದಿಂದಲೇ ಶುರುವಾಯ್ತು!

    ಆಂಗ್ಲರನ್ನು ಟಿ20 ವಿಶ್ವಕಪ್​ನಿಂದ ಹೊರದಬ್ಬಲು ಯತ್ನಿಸಿದರೆ ಆಸೀಸ್​ ನಾಯಕ ಮಿಚೆಲ್​ ಮಾರ್ಷ್​ಗೆ ನಿಷೇಧ?

    See also  ಹಾರ್ದಿಕ್ ಪಾಂಡ್ಯಾ ಫಿಟ್​ನೆಸ್​ ಬಗ್ಗೆ ಚರ್ಚೆ; ಬೌಲಿಂಗ್ ಕೋಚ್ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts