More

  ಪವಿತ್ರಾ ಗೌಡ ನಟ ದರ್ಶನ್​ ಬಾಳಲ್ಲಿ ಬಂದಿದ್ಹೇಗೆ? ಯಾವಾಗ ಪರಿಚಯವಾಯ್ತು? ಆ ಸಿನಿಮಾದಿಂದಲೇ ಶುರುವಾಯ್ತು!

  ಬೆಂಗಳೂರು: ಇಡೀ ರಾಜ್ಯದಲ್ಲಿ ಇದೀಗ ನಟ ದರ್ಶನ್​ರದ್ದೇ ಚರ್ಚೆ. ಯಾವ ನ್ಯೂಸ್​ ಚಾನೆಲ್​ ಹಾಕಿದ್ರೂ ದರ್ಶನ್​ರದ್ದೇ ಸುದ್ದಿ. ಜನಗಳ ಬಾಯಲ್ಲೂ ದರ್ಶನ್​​ರದ್ದೇ ಮಾತು. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ದರ್ಶನ್​ ಬಂಧನವಾಗಿರುವುದು. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಸ್ವಾಮಿಯ ಕೊಲೆಯಲ್ಲಿ ದರ್ಶನ್​ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಅಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ. ಈ ಪ್ರಕರಣದಲ್ಲಿ ದರ್ಶನ್​ ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್​ ಎ2 ಆರೋಪಿಯಾಗಿದ್ದಾರೆ.

  ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್​ ನಡುವಿನ ಸಂಬಂಧ ಏನೂ ಎಂಬುದು ಬಹುತೇಕರಿಗೆ ತಿಳಿದಿದೆ. ಇತ್ತಿಚೆಗಷ್ಟೇ ದರ್ಶನ್​ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್​ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅಷ್ಟಕ್ಕೂ ಪವಿತ್ರಾ ಗೌಡ, ನಟ ದರ್ಶನ್ ಜೀವನದಲ್ಲಿ ಬಂದಿದ್ದು ಹೇಗೆ?​ ಪವಿತ್ರಾಗೆ ಈ ಹಿಂದೆಯೇ ಮದುವೆಯಾಗಿದ್ದು, ಗಂಡನಿಂದ ದೂರವಾಗಿದ್ದು ಏಕೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  ಪವಿತ್ರಾ ಗೌಡ ಜಾತಕ ಬಯಲು ಮಾಡಿದ್ದರು ವಿಜಯಲಕ್ಷ್ಮೀ
  ಇತ್ತಿಚೆಗಷ್ಟೇ ದರ್ಶನ್​ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ, ನಟ ದರ್ಶನ್​ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಇದು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರ ಗೌಡ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಪವಿತ್ರಾ ಗೌಡ ವಿರುದ್ಧ ಕಿಡಿಕಾರಿದ್ದ ವಿಜಯಲಕ್ಷ್ಮೀ, ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್​ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ) ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್​ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್​ ಸಿಂಗ್​ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್​ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್​ ಸಿಂಗ್​ ಫೋಟೋಗಳ ಸಮೇತ ಖಡಕ್​ ಎಚ್ಚರಿಕೆ ನೀಡಿದ್ದರು.

  See also  ದರ್ಶನ್​ ಸೇಫ್​​ ಮಾಡಲು ಸರ್ಕಾರಕ್ಕೆ ಒತ್ತಡ? ಸಂಗ್ರಾಮ್​ ಸಿಂಗ್​ ಶಾಕಿಂಗ್​ ರಿಯಾಕ್ಷನ್

  ವಿಜಯಲಕ್ಷ್ಮೀಗೆ ಪವಿತ್ರಾ ಗೌಡ ಟಾಂಗ್​
  ವಿಜಯಲಕ್ಷ್ಮೀ ಆರೋಪಕ್ಕೆ ಪ್ರತಿಯಾಗಿ ಪವಿತ್ರಾ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದರು. ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಕೆಲವು ಸಮಸ್ಯೆಯಿಂದ ನಾನು ಸಂಜಯ್ ಅವರಿಂದ ಡಿವೋರ್ಸ್​​ ಪಡೆದಿದ್ದೇನೆ. ಇಲ್ಲಿಯವರೆಗೂ ಖುಷಿ ಗೌಡ, ದರ್ಶನ್ ಅವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಹಾಗೂ ದರ್ಶನ್ ಕಳೆದ 10 ವರ್ಷಗಳಿಂದ ಜೊತೆಯಲ್ಲಿ, ಸಂತೋಷವಾಗಿದ್ದೀವಿ. ದಯವಿಟ್ಟು ಇದನ್ನು ವಿಶೇಷವಾಗಿ ಗಮನಿಸಿ, ನಾನಿಲ್ಲಿ ಯಾವುದೇ ವೈಯಕ್ತಿಕ ಲಾಭ ಅಥವಾ ಅಜೆಂಡಾಗೋಸ್ಕರ ಇಲ್ಲಿಲ್ಲ, ಇದು 10 ವರ್ಷಗಳ ಕಾಲ ಶುದ್ಧ ಪ್ರೀತಿ ಮತ್ತು ಕಾಳಜಿಯ ಬಗ್ಗೆ. ಇದು ಸುಲಭವಲ್ಲ, ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮಿ ಅವರೇ ನನಗೆ ಹಲವಾರು ಬಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ತಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ನನ್ನ ವಿಚ್ಛೇದನದ ಪತ್ರವನ್ನು ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿ ಅವರು ನನ್ನ ವಿರುದ್ಧವಾಗಿ ಪೋಸ್ಟ್​​ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಮಗಳಾದ ಖುಷಿ ಗೌಡಳ ಬಗ್ಗೆ Vijayalakshmi darshan ಎಂಬ ಇನ್​ಸ್ಟಾಗ್ರಾಮ್​​ನಲ್ಲಿ ಬಹಳಷ್ಟು ಜನ ಕೆಟ್ಟ ಪದಗಳಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವಯಕ್ತಿಕ ಪೋಟೋಗಳು ಶೇರ್​ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕು ಇದೆ. ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ! ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ಅವರ ನಡುವಿನ ಸಮಸ್ಯೆಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಮುಂಚೆಯೇ ಅವರ ಜೀವನದಲ್ಲಿ ಬಂದೆ. ದಯವಿಟ್ಟು ಅದನ್ನು ನೆನಪಿಸಿಕೊಳ್ಳಿ ಎಂದು @viji_darshsn ಅವರನ್ನು ಟ್ಯಾಗ್​ ಮಾಡಿದ್ದಾರೆ.

  See also  ಕಾಯಕದಲ್ಲಿ ಖುಷಿ ಕಂಡುಕೊಂಡಿದ್ದೇನೆ ...

  ದರ್ಶನ್​ಗೆ ಪವಿತ್ರಾ ಗೌಡ ಪರಿಚಯ ಯಾವಾಗ ಆಯ್ತು?
  ಮೂಲಗಳ ಪ್ರಕಾರ ಜಗ್ಗುದಾದಾ ಸಿನಿಮಾ ನಿರ್ಮಾಣ ಸಂದರ್ಭದಲ್ಲಿ ದರ್ಶನ್- ಪವಿತ್ರಾ ಗೌಡಗೆ ಪರಿಚಯ ಆಗಿದೆ ಎನ್ನಲಾಗಿದೆ. ಜಗ್ಗುದಾದಾ ಚಿತ್ರದಲ್ಲಿ ನಟಿಸಲು ಪವಿತ್ರಾ ಗೌಡ ಆಡಿಷನ್ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಇಬ್ಬರಿಗೆ ಪರಿಚಯವಾಗಿದೆಯಂತೆ. ಆದರೆ, ಸಿನಿಮಾದಲ್ಲಿ ಪವಿತ್ರಾ ನಟನೆ ಮಾಡಿಲ್ಲ. ಆದರೆ, ದರ್ಶನ್ ಹಾಗೂ ಪವಿತ್ರಾ ಗೌಡ ಮಧ್ಯೆ ಸ್ನೇಹ ಬೆಳೆದಿದೆ. ಇದೇ ಸ್ನೇಹ ನಂತರದಲ್ಲಿ ಪ್ರೀತಿಗೆ ತಿರುಗಿತು. ಇಬ್ಬರ ನಡುವಿನ ಸಂಬಂಧ ಮೊದಲ ಬಾರಿಗೆ ರಿವೀಲ್​ ಆಗಿದ್ದು, ಯಾವಾಗ ಅಂದರೆ ದರ್ಶನ್​ ತಮ್ಮ ಫಾರ್ಮ್​ಹೌಸ್​ಗೆ ಪವಿತ್ರಾರನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಇಬ್ಬರು ಜತೆಯಲ್ಲಿ ಬೈಕ್​ ಸವಾರಿ ಮಾಡುತ್ತಿರುವ ಚಿತ್ರವನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ಅಲ್ಲಿಂದಾಚೆಗೆ ಪವಿತ್ರಾ ಹೆಸರು ಮುನ್ನಲೆಗೆ ಬಂದಿತು. ಕುರುಕ್ಷೇತ್ರ ಶೂಟಿಂಗ್ ಸೆಟ್‌ನಲ್ಲಿ ಪವಿತ್ರಾ ಗೌಡ ಕಾಣಿಸಿಕೊಂಡ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮತ್ತಷ್ಟು ಚರ್ಚೆ ಜೋರಾಯಿತು. ಅಭಿಮಾನಿಗಳು ಕೂಡ ಪ್ರಶ್ನಿಸಲು ಶುರು ಮಾಡಿದರು. ಪವಿತ್ರಾ ಗೌಡ ಯಾರು? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳಿಂದ ತೂರಿಬರುತ್ತಿತ್ತು. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ದರ್ಶನ್ ಜೊತೆಗಿನ ಫೋಟೋಗಳನ್ನ ಹಂಚಿಕೊಂಡು ನಮ್ಮ ಸಂಬಂಧಕ್ಕೆ 10 ವರ್ಷ ತುಂಬಿದೆ ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದರು. ಇದಾದ ಬಳಿಕ ವಿಜಯಲಕ್ಷ್ಮೀ – ಪವಿತ್ರಾ ಗೌಡ ಮಧ್ಯೆ ಪೋಸ್ಟ್ ವಾ‌ರ್ ನಡೆದಿತ್ತು.

  ಏನಿದು ರೇಣುಕಸ್ವಾಮಿ ಕೊಲೆ ಪ್ರಕರಣ?
  ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

  See also  ಬಸ್ ಸೌಕರ್ಯಕ್ಕೆ ಮಾನವ ಸರಪಳಿ ರಚಿಸಿ ಎಬಿವಿಪಿ ರಸ್ತೆ ತಡೆ

  ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

  ಊಟ ಕೊಡದಿದ್ರೂ ಪರ್ವಾಗಿಲ್ಲ ಅದು ಮಾತ್ರ ನನಗೆ ಬೇಕೆ ಬೇಕು! ಪೊಲೀಸರ ಮುಂದೆ ನಟ ದರ್ಶನ್‌ ಡಿಮ್ಯಾಂಡ್​

  ಪೊಲೀಸ್​ ವಿಚಾರಣೆ ವೇಳೆ ಏನೇ ಕೇಳಿದರೂ ದರ್ಶನ್​ ಹೇಳುತ್ತಿರುವುದು ಮಾತ್ರ ಅದೊಂದೆ ಮಾತು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts