More

  ಅಪಘಾತದಲ್ಲಿ ನಟಿ ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ಆಕೆಯ ಗೆಳೆಯ ಚಂದು ಆತ್ಮಹತ್ಯೆಗೆ ಶರಣು!

  ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡದ ಹೆಸರಾಂತ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಕಲಾವಿದೆ ಪವಿತ್ರಾ ಜಯರಾಂ ಹೈದರಾಬಾದ್ ಸಮೀಪ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಈ ವೇಳೆ ಅವರ ಸ್ನೇಹಿತ, ಸಹ ಕಲಾವಿದರಾದ ತೆಲುಗು ನಟ ಚಂದು ಕೂಡ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  ಇದನ್ನೂ ಓದಿ: ನನ್ನನ್ನು ಬಿಟ್ಟುಬಿಡಿ… ಕ್ಯಾಮರಾಮನ್​ಗೆ ಕೈಮುಗಿದು ಮನವಿ ಮಾಡಿದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ

  ಅಪಘಾತದಲ್ಲಿ ನಟಿ ಪವಿತ್ರಾ ಜಯರಾಂ ಸಾವಿನ ಸುದ್ದಿ ತಿಳಿದ ಬಳಿಕ ಭಾರೀ ಆಘಾತಕ್ಕೊಳಗಾಗಿದ್ದ ನಟ ಚಂದು, ತನಗಿದ್ದ ನೋವಿನ ಮಧ್ಯೆಯೂ ಮಾಧ್ಯಮಗಳ ಮುಂದೆ ಭಾವುಕರಾಗಿ ಮಾತನಾಡಿದ್ದರು. ಇದಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸುಧಾರಿಸಿಕೊಳ್ಳುತ್ತಿದ್ದ ಚಂದು, ಇದೀಗ ದಿಢೀರ್​ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬಸ್ಥರಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ಭಾರೀ ಅನುಮಾನ ಭುಗಿಲೆದ್ದಿದೆ.

  ಪವಿತ್ರಾ ಜಯರಾಂ ಸಾವಿನ ಸುದ್ದಿಯಿಂದ ಅತೀವ ದುಃಖವೇ ಚಂದು ಅವರ ಆತ್ಮಹತ್ಯೆಗೆ ಕಾರಣವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯಾ ಎಂಬುದು ಸದ್ಯ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇದು ಭಾರೀ ಗೊಂದಲ ಹುಟ್ಟುಹಾಕಿದ್ದು, ನಟ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಚಂದು ಮತ್ತು ಪವಿತ್ರಾ ಇಬ್ಬರೂ ಸಹ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜತೆಗೆ ನಟಿಸುತ್ತಿದ್ದರು.

  ಆತನಿಗೆ ಇವರ್‍ಯಾರು‌ ಬೆಂಬಲ ಕೊಡಲಿಲ್ಲ! MIನ ಅತ್ಯುತ್ತಮ ಆಟಗಾರನ ಬಗ್ಗೆ ನಮನ್ ಧಿರ್​​ ಬಿಚ್ಚುಮಾತು

  ನನ್ನನ್ನು ಬಿಟ್ಟುಬಿಡಿ… ಕ್ಯಾಮರಾಮನ್​ಗೆ ಕೈಮುಗಿದು ಮನವಿ ಮಾಡಿದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts