More

    ನನ್ನನ್ನು ಬಿಟ್ಟುಬಿಡಿ… ಕ್ಯಾಮರಾಮನ್​ಗೆ ಕೈಮುಗಿದು ಮನವಿ ಮಾಡಿದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ

    ಮುಂಬೈ: ನಿನ್ನೆ (ಮೇ.17) ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ನಡುವಿನ ಭಾರೀ ಹಣಾಹಣಿಯಲ್ಲಿ ಕೆ.ಎಲ್. ರಾಹುಲ್ ಪಡೆ ಗೆದ್ದು ಬೀಗಿದ್ದೇ ಆದರೂ ಪ್ಲೇಆಫ್ ಪ್ರವೇಶ ಪಡೆಯಲು ವಿಫಲವಾಗಿದೆ. ಸದ್ಯ ಇದು ಪ್ಲೇಆಫ್ ರೇಸ್​ನಲ್ಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ಮತ್ತಷ್ಟು ಬಲ ತುಂಬಿದ್ದು, ಇಂದು ನಡೆಯಲಿರುವ ಮಾಡುವೇ ಇಲ್ಲವೇ ಮಡಿ ಪಂದ್ಯದಲ್ಲಿ ಹೇಗೆ ಆಡಲಿದೆ ಎಂಬುದನ್ನು ಮಾತ್ರ ಸದ್ಯ ಕಾದು ನೋಡಬೇಕಿದೆ.

    ಇದನ್ನೂ ಓದಿ: ನಾವ್ ಆವರಗೊಳ್ಳ ಹೋಗೋದಿಲ್ಲ.. ನಮ್ ಕಷ್ಟ ಕೇಳೋರಿಲ್ಲ.. ಹೆಗಡೆ ನಗರ ನಿವಾಸಿಗಳಿಂದ ರಸ್ತೆ ತಡೆ ಪ್ರತಿಭಟನೆ

    ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹಾರ್ದಿಕ್​ ಪಾಂಡ್ಯ ಪಡೆ, ಲಕ್ನೋ ನೀಡಿದ 215 ರನ್​ಗಳ ಗುರಿಯನ್ನು ಚೇಸ್ ಮಾಡುವಲ್ಲಿ ವಿಫಲವಾಯಿತು. ಇದು ಮತ್ತೊಮ್ಮೆ ತಂಡದ ಸೋಲಿಗೆ ಕಾರಣವಾಗಿ, ಕಡೆಯ ಪಂದ್ಯವನ್ನು ಸಹ ವಶಪಡಿಸಿಕೊಳ್ಳದಂತೆ ಮಾಡಿತು. ಈ ವಿಷಯ ಮುಂಬೈ ಅಭಿಮಾನಿಗಳಿಗೆ ಭಾರೀ ಬೇಸರ ತಂಡೊಡ್ಡಿತು. ಇನ್ನು ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆಕೆಆರ್​ ತಂಡದ ಸದಸ್ಯರೊಂದಿಗೆ ಮೈದಾನದಲ್ಲಿ ಮಾತನಾಡುವಾಗ ಹಿಂದಿನಿಂದ ಬಂದ ಕ್ಯಾಮರಾಮನ್ ವಿರುದ್ಧ ಸಿಡಿಮಿಡಿಗೊಂಡು, ಆತನಿಗೆ ಕೈಮುಗಿದು ಮೈಕ್ ಆಫ್ ಮಾಡುವಂತೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಮರ್ಯಾದೆ ಉಳಿಸಿಕೊಳ್ಳಲು ಕೈನಿಂದ ಮಿಷನ್ 50

    ಈ ಹಿಂದೆಯೂ ಕೆಕೆಆರ್ ತಂಡದೊಂದಿಗೆ ರೋಹಿತ್ ಮಾತನಾಡಿದ್ದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಬೇಸತ್ತಿದ್ದ ರೋಹಿತ್ ಶರ್ಮಾ​, ಆದಷ್ಟು ಕ್ಯಾಮರಾ ಕಣ್ಣಿನಿಂದ ದೂರ ಉಳಿಯಲು ಬಯಸುತ್ತಿದ್ದರು.

    https://x.com/isha45___/status/1791486306754937087?ref_src=twsrc%5Etfw%7Ctwcamp%5Etweetembed%7Ctwterm%5E1791486306754937087%7Ctwgr%5Eb2a4ba1e3407914dcc2c77ffe612bf8cfd0931ba%7Ctwcon%5Es1_&ref_url=https%3A%2F%2Fwww.freepressjournal.in%2Fsports%2Fek-audio-ne-mera-vaat-laga-diya-ex-mi-skipper-rohit-sharma-urges-cameraman-to-turn-off-microphone-ahead-of-ipl-2024-clash-vs-lsg-in-mumbai

    ಹೀಗಿರುವಾಗಲೇ ನಿನ್ನೆಯೂ ಸಹ ರೋಹಿತ್ ಕೆಕೆಆರ್ ತಂಡದ ಸದಸ್ಯರೊಂದಿಗೆ ಸಂವಾದ ನಡೆಸುವಾಗ ಹಿಂದೆ ಬಂದ ಕ್ಯಾಮರಾಮನ್ ತನ್ನನ್ನು ಸೆರೆಹಿಡಿಯುತ್ತಿರುವುದನ್ನು ​ಕಂಡು ದೂರದಿಂದಲೇ ಕೈಮುಗಿದ ಹಿಟ್ ಮ್ಯಾನ್​, ದಯವಿಟ್ಟು ಮೈಕ್ ಆಫ್ ಮಾಡಪ್ಪ ಎಂದು ಮನವಿ ಮಾಡಿದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

    ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts