More

    ಅಂಜಲಿ ಕುಟುಂಬದ ನೆರವಿಗಾಗಿ ಪ್ರತಿಭಟನೆ, ನೇಹಾ ತಂದೆ ನಿರಂಜನ ಹಿರೇಮಠ ಹೇಳಿಕೆ

    ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಹಾಗೂ ಅವಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೇ 18ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನೇಹಾ ತಂದೆ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹೇಳಿದ್ದಾರೆ.

    ನಗರದ ಅಂಜಲಿ ನಿವಾಸದ ಬಳಿ ಮಾತನಾಡಿದ ಅವರು, ವೀರಾಪುರ ಓಣಿಯಿಂದ ದಾಜಿಬಾನಪೇಟೆ, ಮಂಗಳವಾರ ಪೇಟೆ ಮಾರ್ಗವಾಗಿ ಚನ್ನಮ್ಮ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಚೌಡಯ್ಯ ಶ್ರೀಗಳು ಸಾಥ್ ನೀಡಲಿದ್ದಾರೆ. ಇತರ ಸ್ವಾಮೀಜಿಗಳು, ಮಠಾಧಿಪತಿಗಳು ಭಾಗವಹಿಸುವರು ಎಂದರು.

    ಅಂಜಲಿ ಕುಟುಂಬ ಬಡತನದಿಂದ ಬಳಲುತ್ತಿದೆ. ಅವರಿಗೆ ಸಹಾಯ ಮಾಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಂಜಲಿ ಮನೆಗೆ ಶನಿವಾರ ಬರಲಿದ್ದಾರೆ. ಶಾಸಕ ವಿನಯ ಕುಲಕಣಿರ್ ಅವರು ಸಹ ಮಾತನಾಡಿದ್ದಾರೆ, ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದರು.

    ಅಂಜಲಿ ಕುಟುಂಬಕ್ಕೆ ಮನೆ ಇಲ್ಲ. ಈಗಿರುವ ಮನೆ ಖಾಲಿ ಮಾಡಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಸರ್ಕಾರ ಅವರಿಗೆ ಮನೆ ಕೊಡಬೇಕು. ಕೊಲೆ ಹಿಂದೆ ಯಾರಿದ್ದಾರೆ, ಪಾತಕಿ ಯಾರ ಜತೆ ಗಾಂಜಾ ಸೇದಿದ್ದ ಎಂಬುದು ಸೇರಿ ಸಮಗ್ರ ತನಿಖೆಯಾಗಬೇಕು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಬೇಸರದ ಸಂಗತಿ ಎಂದು ನಿರಂಜನ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts