More

    ಪುತ್ರನನ್ನೇ ಹಿಂದಿಕ್ಕಿದ ‘ಮೆಗಾಸ್ಟಾರ್’​! 4 ಹೊಸ ಸಿನಿಮಾಗಳಿಗೆ ಸಹಿ ಮಾಡಿದ ನಟ ಚಿರಂಜೀವಿ

    ಆಂಧ್ರಪ್ರದೇಶ: ಸದ್ಯ ಟಾಲಿವುಡ್​ನಲ್ಲಿ ಹೊಸ ನಟರಿಗಿಂತ ತೆಲುಗು ಚಿತ್ರರಂಗದ ಹಿರಿಯ ನಟ ಮೆಗಾಸ್ಟಾರ್​ ಚಿರಂಜೀವಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ವಯಸ್ಸಾದರು ಇಂದಿಗೂ ನಮ್ಮನ್ನು ಮನರಂಜಿಸಲು ಮುಂದಾಗಿರುವ ನಿಮಗೆ ಭಗವಂತ ಮತ್ತಷ್ಟು ಶಕ್ತಿ ತುಂಬಲಿ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಹಾರೈಸಿದ್ದಾರೆ.

    ಇದನ್ನೂ ಓದಿ: ಗೌತಮ್​ ಗಂಭೀರ್​ ಷರತ್ತಿಗೆ ಒಕೆ ಎಂದ ಬಿಸಿಸಿಐ; ಟೀಮ್​ ಇಂಡಿಯಾ ಕೋಚ್​ ಆಗಿ ಅಧಿಕೃತ ಘೋಷಣೆಯಷ್ಟೇ ಬಾಕಿ

    ಪ್ರಸ್ತುತ ‘ಗೇಮ್ ಚೇಂಜರ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮೆಗಾಪವರ್ ಸ್ಟಾರ್ ರಾಮ್ ಚರಣ್, ಇಂದು ವಿಶ್ವ ಅಪ್ಪಂದಿರ ದಿನದ ಸಂದರ್ಭದಲ್ಲಿ, ಸ್ವತಃ ತಾವೇ ಚಿರಂಜೀವಿ ಅವರ ವಿಶೇಷ ಸಂದರ್ಶನವನ್ನು ಮಾಡಿದ್ದಾರೆ. ಈ ವೇಳೆ ಮೆಗಾಸ್ಟಾರ್​ ಅವರು ನಾಲ್ಕು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎಂಬ ವಿಷಯವನ್ನು ಚಿರು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾರೆ.

    “ಮೆಗಾಸ್ಟಾರ್​ ನಾಲ್ಕು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ. ಆದ್ರೆ, ನಾನು ಕೇವಲ ಒಂದು ಅಥವಾ ಎರಡು ಚಿತ್ರಗಳನ್ನು ಮಾತ್ರ ಮಾಡುತ್ತಿದ್ದೇನೆ” ಎಂದು ಹೇಳಿದರು. 4 ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಮ್​ಚರಣ್​, ಅದು ಯಾರ ನಿರ್ದೇಶನ? ಟೈಟಲ್ ಏನು? ಎಂಬ ಯಾವ ವಿಷಯವನ್ನೂ ಸಹ ಬಹಿರಂಗಪಡಿಸಿಲ್ಲ. ಸದ್ಯ ಆ್ಯಕ್ಷನ್​ ಜಾನರ್​ ಒಳಗೊಂಡ ‘ವಿಶ್ವಂಬರ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ, ಮುಂದಿನ ಚಿತ್ರಗಳ ಕುರಿತು ಅಧಿಕೃತ ಘೋಷಣೆ ಯಾವಾಗ ಕೊಡಲಿದ್ದಾರೆ ಎಂಬುದೇ ಅಭಿಮಾನಿಗಳಲ್ಲಿ ಕುತೂಹಲ,(ಏಜೆನ್ಸೀಸ್).

    ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

    ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

    See also  ಜೇಬಿನಲ್ಲಿ ಲಕ್ಷಗಟ್ಟಲೆ ಹಣವಿದ್ದರೂ ಹಸಿವಿನಿಂದ ಪ್ರಾಣ ಬಿಟ್ಟ ಭಿಕ್ಷುಕ; ಕಾರಣ ನಿಗೂಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts