More

    IPL 2024: ಎಲಿಮಿನೇಟರ್ ಪಂದ್ಯದಲ್ಲಿ RR ವಿರುದ್ಧ RCB ಸೋಲಿಗೆ 5 ಪ್ರಮುಖ ಕಾರಣಗಳು ಹೀಗಿವೆ…

    ನವದೆಹಲಿ: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕಪ್​ ಗೆಲ್ಲುವ ಕನಸು ಭಗ್ನವಾಗಿದೆ. ನಿನ್ನೆ (ಮೇ 22) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್​ 4 ವಿಕೆಟ್‌ಗಳಿಂದ ಜಯಗಳಿಸಿದೆ. ಈ ಸೋಲಿನೊಂದಿಗೆ ಈ ಸೀಸನ್​ನಲ್ಲಿ ಆರ್​ಸಿಬಿ ಆಳ್ವಿಕೆ ಅಂತ್ಯಗೊಂಡಿದೆ.

    ಲೀಗ್ ಹಂತದಲ್ಲಿ ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದ ಆರ್​ಸಿಬಿ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡು ಸತತ 6ರಲ್ಲಿ ಗೆದ್ದು ಪ್ಲೇ ಆಫ್ ತಲುಪಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಮತ್ತೊಂದೆಡೆ ಲೀಗ್​ನ ಆರಂಭಿಕ ಹಂತದಲ್ಲಿ ಅಮೋಘ ಆಟವಾಡಿದ ರಾಜಸ್ಥಾನ ರಾಯಲ್ಸ್, ನಂತರ ಸತತ 4 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ತಲುಪಿತ್ತು. ಆದರೆ, ನಿರ್ಣಾಯಕ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿದ ಆರ್​ಆರ್​ ಕ್ವಾಲಿಫೈಯರ್ -2 ಗೆ ಅರ್ಹತೆ ಪಡೆದರು. ಆರ್‌ಆರ್ ಶುಕ್ರವಾರ ಚೆನ್ನೈ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆ ಪಂದ್ಯವನ್ನು ಗೆದ್ದರೆ ಮೇ 26 ರಂದು ಕೆಕೆಆರ್ ವಿರುದ್ಧ ಫೈನಲ್ ಪಂದ್ಯ ನಡೆಯಲಿದೆ. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಸೋಲಿಗೆ ಐದು ಪ್ರಮುಖ ಕಾರಣಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

    1. ಬ್ಯಾಟಿಂಗ್​ನಲ್ಲಿ ವಿಫಲ
    ಈ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್‌ಗೆ 37 ರನ್ ಸೇರಿಸಿದರು. ಡುಪ್ಟೆಸಿಸ್ 17 ಮತ್ತು ಕೊಹ್ಲಿ 33 ರನ್ ಗಳಿಸಿ ಔಟಾದರು. ಆ ಬಳಿಕ ಗ್ರೀನ್ ಮತ್ತು ಪಾಟಿದಾರ್ ಇನ್ನಿಂಗ್ಸ್ ಮುಂದಕ್ಕೆ ಕೊಂಡೊಯ್ಯಲು ಯತ್ನಿಸಿದರು. ಗ್ರೀನ್ 27 ರನ್ ಹಾಗೂ ಪಾಟಿದಾರ್ 34 ರನ್ ಗಳಿಸಿ ಔಟಾದ ಬಳಿಕ ಆರ್​ಸಿಬಿ ಇನ್ನಿಂಗ್ಸ್ ದಿಢೀರ್ ಕುಸಿತ ಕಂಡಿತು. ಮ್ಯಾಕ್ಸ್‌ವೆಲ್ ಯಾವುದೇ ರನ್​ ಗಳಿಸದೇ ಡಗೌಟ್​ ಸೇರಿದರು. ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 11 ರನ್ ಗಳಿಸಿದ್ದು ಆರ್‌ಸಿಬಿ ಮೇಲೆ ಪರಿಣಾಮ ಬೀರಿತು. ಇವರಿಬ್ಬರೂ ಸ್ವಲ್ಪ ಉತ್ತಮವಾಗಿ ಆಡಿದ್ದರೆ ಇನ್ನೂ 20 ರನ್ ಗಳಿಸಲು ಸಾಧ್ಯವಾಗಿದ್ದರೆ ಆರ್​ಸಿಬಿಗೆ ಗೆಲುವು ಲಭಿಸುವ ಸಾಧ್ಯತೆ ಇತ್ತು.

    2. ಕಳಪೆ ಫೀಲ್ಡಿಂಗ್​
    ಕಡಿಮೆ ಟಾರ್ಗೆಟ್​ ಅನ್ನು ಡಿಫೆಂಡ್ ಮಾಡಲು ಕಣಕ್ಕೆ ಇಳಿದ ಆರ್​ಸಿಬಿ, ಮಿಂಚಿನ ಫೀಲ್ಡಿಂಗ್ ಮೂಲಕ ಬೌಲರ್​ಗಳಿಗೆ ಬೆಂಬಲವಾಗಿ ನಿಲ್ಲಬೇಕಿತ್ತು. ಆದರೆ, ಅದಕ್ಕಿಂತ ಭಿನ್ನವಾಗಿ, ಆರ್‌ಸಿಬಿ ಆಟಗಾರರು ಕ್ಯಾಚ್‌ಗಳನ್ನು ಬಿಟ್ಟು, ಮಿಸ್‌ಫೀಲ್ಡ್ ಮಾಡಿ, ಪಂದ್ಯವನ್ನು ಕೈಚೆಲ್ಲಿದರು. ಜೈಸ್ವಾಲ್ ಕ್ಯಾಚ್ ಅನ್ನು ಗ್ರೀನ್ ಬಿಟ್ಟರೆ, ಮತ್ತೊಬ್ಬ ಓಪನರ್ ಕ್ಯಾಚ್ ಅನ್ನು ಮ್ಯಾಕ್ಸ್​ವೆಲ್ ಕೈಬಿಟ್ಟರು. ಗ್ರೀನ್ ಕ್ಯಾಚ್ ಸ್ವಲ್ಪ ಕಠಿಣವಾಗಿದ್ದರೂ, ಮ್ಯಾಕ್ಸಿ ತುಂಬಾ ಸುಲಭವಾಗಿ ಕ್ಯಾಚ್ ಪಡೆಯಬಹುದಿತ್ತು. ಆದರೆ, ಅದನ್ನು ಕೈಚೆಲ್ಲಿದರು.

    3. ಕೊಹ್ಲಿ ಮೇಲೆ ಅತಿಯಾದ ಅವಲಂಬನೆ
    ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಸೀಸನ್​ ಆರಂಭದಿಂದಲೂ ಬ್ಯಾಟಿಂಗ್ ಭಾರವನ್ನೆಲ್ಲ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ಕೊಹ್ಲಿಗೆ ಮತ್ತೊಬ್ಬರು ಉತ್ತಮವಾಗಿ ಸಾಥ್​ ನೀಡಲಿಲ್ಲ. ವಿಲ್ ಜಾಕ್ಸ್, ಗ್ರೀನ್ ಮತ್ತು ಪಾಟಿದಾರ್ ಬ್ಯಾಟ್‌ನಿಂದ ಮಿಂಚಿದರೂ, ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಗ್ರೀನ್ ಮತ್ತು ಪಾಟಿದಾರ್ 40 ರೊಳಗೆ ರನ್ ಗಳಿಸಿದರು ಮತ್ತು ಆರ್‌ಎಸ್‌ಬಿ ಕಡಿಮೆ ಸ್ಕೋರ್‌ಗೆ ಸೀಮಿತವಾಯಿತು.

    4. ನಾಯಕತ್ವ ಕೊರತೆ
    ಎಲಿಮಿನೇಟರ್​ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ನಾಯಕತ್ವವೂ ಉತ್ತಮವಾಗಿರಲಿಲ್ಲ. ಫೀಲ್ಡಿಂಗ್ ಅನ್ನು ಬೌಲಿಂಗ್​ಗೆ ಅನುಕೂಲವಾಗುವ ರೀತಿಯಲ್ಲಿ ನಿಯೋಜಿಸಲಿಲ್ಲ. ಸಾಕಷ್ಟು ರನ್‌ಗಳು ರಾಜಸ್ಥಾನಕ್ಕೆ ತುಂಬಾ ಉಚಿತವಾಗಿ ಬಂದವರು ಮತ್ತು ಸುಲಭವಾಗಿ ರನ್‌ಗಳು ಸಿಕ್ಕಂತೆ ತೋರುತ್ತಿತ್ತು. ನಾಯಕತ್ವದ ಕೊರತೆಯೂ ಕೂಡ ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಕಾರಣವಾಗಿರಬಹುದು.

    5. ಟಾಸ್​
    ಈ ಪಂದ್ಯದಲ್ಲಿ ಆರ್​ಸಿಬಿಗೆ ದುಬಾರಿಯಾದ ಪ್ರಮುಖ ವಿಷಯವೆಂದರೆ ಅದು ಟಾಸ್. ಅಹಮದಾಬಾದ್ ಮೈದಾನ ಬ್ಯಾಟಿಂಗ್ ಸ್ನೇಹಿ ಪಿಚ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಚೇಸಿಂಗ್ ತುಂಬಾ ಸುಲಭ. ಮೊದಲ ಕ್ವಾಲಿಫೈಯರ್‌ನಲ್ಲಿ ಎಸ್‌ಆರ್‌ಎಚ್ ನಾಯಕ ಕಮ್ಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದರು. ಆದರೆ, ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಆ ತಪ್ಪನ್ನು ಮಾಡಲಿಲ್ಲ. ಟಾಸ್ ಗೆದ್ದ ನಂತರ ಅವರು ಬೌಲಿಂಗ್ ಪಡೆದರು. ಎರಡನೇ ಇನಿಂಗ್ಸ್ ವೇಳೆ ಮೈದಾನದಲ್ಲಿ ತೇವಾಂಶ ಹೆಚ್ಚಿದ್ದರಿಂದ ಬೌಲಿಂಗ್ ಕಷ್ಟವಾಗಿತ್ತು. ಹೀಗಾಗಿ ಆರ್​ಆರ್​ ಸುಲಭವಾಗಿ ಗುರಿ ಮುಟ್ಟಿತು.

    ಆರ್​ಸಿಬಿ ಸೋಲಿಗೆ ಈ ಐದು ಕಾರಣಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    ಅಷ್ಟೇ ಎಲ್ಲವೂ ಮುಗಿದ ಕತೆ, ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತೇನೆ… ಕಣ್ಣೀರಿಟ್ಟ ಆರ್​ಸಿಬಿ ಆಟಗಾರ​! ವಿಡಿಯೋ ವೈರಲ್​

    ಐಪಿಎಲ್​ಗೆ ದಿನೇಶ್​ ಕಾರ್ತಿಕ್​ ಗುಡ್​ಬೈ! ಭಾವುಕರಾದ ಡಿಕೆಗೆ ವಿರಾಟ್​ ಕೊಹ್ಲಿ ಸಾಂತ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts