More

    ‘ಪ್ರಧಾನಿ ಮೋದಿಗೆ ಗೆಲುವು ಖಚಿತ…’ ಬಿಜೆಪಿಗೆ 295-315 ಸ್ಥಾನ ಪಕ್ಕಾ; ಭವಿಷ್ಯ ನುಡಿದ ಇಯಾನ್ ಬ್ರೆಮ್ಮರ್

    ಅಮೆರಿಕಾ: ದೇಶದಲ್ಲಿ ಈಗಾಗಲೇ ಐದು ಹಂತಗಳ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಕೇವಲ ಇನ್ನೆರೆಡು ಹಂತಗಳ ಚುನಾವಣೆ ಮಾತ್ರ ಬಾಕಿ ಉಳಿದಿದೆ. ಒಂದೆಡೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್​ ಈ ಬಾರಿಯ ಚುನಾವಣೆಯಲ್ಲಿ ಬಹುಮತಗಳಿಂದ ಗೆದ್ದು, ಬಿಜೆಪಿ ಮಣಿಸಿ, ಕೇಂದ್ರ ಸರ್ಕಾರದಲ್ಲಿ ನಮ್ಮದೇ ಸರ್ಕಾರ ರಚಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದು, ಖಂಡಿತ ಅಧಿಕಾರದ ಚುಕ್ಕಾಣಿ ಹಿಡಿಯುವವರು ನಾವೇ ಎಂದು ಗಟ್ಟಿಯಾಗಿ ಹೇಳುತ್ತಿದೆ.

    ಇದನ್ನೂ ಓದಿ: ಡಿಕೆ ಕೊಡುಗೆಗೆ ಸೆಲ್ಯೂಟ್​… ಮನಬಿಚ್ಚಿ ಮಾತನಾಡಿದ ಹರ್ಷ ಭೋಗ್ಲೆ, ಟ್ವೀಟ್ ಮಾಡಿ ಭಾವುಕ

    ಮತ್ತೊಂದೆಡೆ, ಎನ್​ಡಿಎ ಸರ್ಕಾರ ಈ ಬಾರಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ, ಮಗದೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಕೇಂದ್ರದಲ್ಲಿ ಸರ್ಕಾರ ಮುಂದುವರೆಸಲಿದ್ದಾರೆ ಎಂದು ಬಿಜೆಪಿ ಭರವಸೆ ವ್ಯಕ್ತಪಡಿಸಿದೆ. ಇದನ್ನೇ ಪ್ರಧಾನಿ ಮೋದಿ ಕೂಡ ಪ್ರತಿಪಾದಿಸಿದ್ದು, ನಮ್ಮ ಸರ್ಕಾರ ಬರುವುದು ಖಚಿತ ಎಂಬುದು ಇತ್ತೀಚಿನ ಸಮೀಕ್ಷೆಗಳು ನೀಡಿದ ಮಾಹಿತಿಗಳ ಮೂಲಕ ಅಧಿಕೃತವಾಗಿವೆ ಎಂದು ಹೇಳಿದ್ದಾರೆ. ಸದ್ಯ ಇದೆಲ್ಲದರ ಮಧ್ಯೆ ಅಮೆರಿಕಾದ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್, ಮೋದಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

    “ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ 215ರಿಂದ 315 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಯುರೇಷಿಯಾ ಗುಂಪಿನ ಚುನಾವಣೆಗಳ ಭವಿಷ್ಯ 305± 10 ಆಗಿದೆ. ಇನ್ನು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 543 ಸ್ಥಾನಗಳಲ್ಲಿ 303 ಸ್ಥಾನಗಳನ್ನು ಗೆದ್ದಿತ್ತು. ಪ್ರಪಂಚದ ಇತರ ದೃಷ್ಟಿಕೋನದಿಂದ ನೋಡುವುದಾದರೆ, ಭಾರತವು ದೀರ್ಘಕಾಲದವರೆಗೆ ಕಳಪೆ ಪ್ರದರ್ಶನ ನೀಡಿದ ಆರ್ಥಿಕತೆಯಾಗಿದೆ. ಆದರೆ ಈಗ ಬಹಳಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಇಯಾನ್ ಹೇಳಿದರು.

    ಇದನ್ನೂ ಓದಿ: ಅಷ್ಟೇ ಎಲ್ಲವೂ ಮುಗಿದ ಕತೆ, ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತೇನೆ… ಕಣ್ಣೀರಿಟ್ಟ ಆರ್​ಸಿಬಿ ಆಟಗಾರ​! ವಿಡಿಯೋ ವೈರಲ್​

    “ಮುಕ್ತ ಮತ್ತು ನ್ಯಾಯೋಚಿತ ಹಾಗೂ ಪಾರದರ್ಶಕ” ಎಂದು ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದ ಅವರು, “ಮೋದಿ ಅವರು ಸಾಕಷ್ಟು ಬಲವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಸ್ಥಿರವಾದ ಸುಧಾರಣೆಯ ಹಿನ್ನಲೆಯಲ್ಲಿ ಮೂರನೇ ಬಾರಿಗೆ ಗೆಲುವು ನೋಡುವುದು ಖಚಿತ” ಎಂದು ಹೇಳಿದ್ದಾರೆ,(ಏಜೆನ್ಸೀಸ್). 

    ಆರ್​ಸಿಬಿ ಸೋಲುತ್ತಿದ್ದಂತೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿ, ಸಂಭ್ರಮಿಸಿದ ಸಿಎಸ್​ಕೆ ಫ್ಯಾನ್ಸ್​! ಇದೇನಾ ನಿಮ್ಮ…

    ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts