More

  ವಂಚನೆ ಆರೋಪ ಮಾಡಿದವರ ವಿರುದ್ಧವೆ ಮಾನನಷ್ಟ ಮೊಕದ್ದಮೆ ಹೂಡಿದ ನಟಿ; ಏನಿದು ಪ್ರಕರಣ ಇಲ್ಲಿದೆ ಡೀಟೇಲ್ಸ್​

  ಮುಂಬೈ: ಕೆಲವು ದಿನಗಳ ಹಿಂದೆ ನಟಿ ದಿಗಂಗನ ಸೂರ್ಯವಂಶಿ ಅವರ ವಿರುದ್ಧ ಸುಳ್ಳು ಭರವಸೆಗಳನ್ನು ನೀಡಿ ಹಣ ಪಡೆದಿದ್ದಾರೆ ಎಂಬ ಆರೋಪಿಸಿ ದೂರು ದಾಖಲಾಗಿತ್ತು. ಈ ಬಗ್ಗೆ ಶೋಸ್ಟಾಪರ್ ನಿರ್ಮಾಪಕರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳುವ ಮೂಲಕ ನಟಿ ಪ್ರತಿಕ್ರಿಯಿಸಿದ್ದಾರೆ.

  ಇದನ್ನು ಓದಿ: ಅಮಿತ್​ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್​​; ಸಭೆಯಲ್ಲಿ ಚರ್ಚಿಸಿದ ವಿಷಯಗಳು ಏನು ಗೊತ್ತಾ?

  ದಿಗಂಗನ ಅವರು ನಿರ್ದೇಶಕ ಮನೀಶ್ ಹರಿಶಂಕರ್ ಅವರಿಗೆ ಮಾನನಷ್ಟ ಮೊಕದ್ದಮೆ ಹೂಡಿ ನೋಟಿಸ್ ಕಳುಹಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 420, 406, 509, 499, 500, 503, 506, 63, 199, 211 ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಮ್ಮ ಕಕ್ಷಿದಾರ ದಿಗಂಗನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ದಿಗಂಗನಾ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ. ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಆಕೆಯ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ದಿಗಂಗನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

  ಈ ಹಿಂದೆ ನಿರ್ಮಾಪಕ ಮತ್ತು ನಿರ್ದೇಶಕ ಮನೀಶ್ ತನ್ನ ವಿರುದ್ಧ ಮಾಡಿದ ಆರೋಪಗಳನ್ನು ದಿಗಂಗನ ಸೂರ್ಯವಂಶಿ ತಳ್ಳಿಹಾಕಿದ್ದಾರೆ. ನಿರ್ಮಾಣ ಸಂಸ್ಥೆಯಾದ ಎಮ್​ಎಚ್​​ ಫಿಲ್ಮ್ಸ್ ಐಪಿಸಿ ಸೆಕ್ಷನ್ 420 ಮತ್ತು ಸೆಕ್ಷನ್ 406ರ ಅಡಿಯಲ್ಲಿ ವಂಚನೆ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯನ್ನು ಆರೋಪಿಸಿ ದಿಗಂಗನಾ ವಿರುದ್ಧ ಪೊಲೀಸ್ ದೂರು ದಾಖಲಿಸಿತ್ತು. ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಂತಹ ಸ್ಟಾರ್‌ಗಳೊಂದಿಗೆ ಪರಿಚಯ ಇದೆ. ಅವರನ್ನು ನಿರೂಪಕರನ್ನಾಗಿ ಕರೆತರುವುದಾಗಿ ನಟಿ ಹೇಳಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು. ನಟ ಅಕ್ಷಯ್​ ಹೆಸರಿನಲ್ಲಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು(ಏಜೆನ್ಸೀಸ್​​)

  ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ ಐಸ್​ಕ್ರೀಂನಲ್ಲಿ ಸಿಕ್ತು ಜರಿ ಹುಳು; ಗ್ರಾಹಕ ಮಾಡಿದ್ದೇನು ಗೊತ್ತಾ?

  See also  ಮುಕೇಶ್​ ಅಂಬಾನಿ ಮನೆ ಬಳಿ ಸ್ಫೋಟಕ ಸಾಮಾಗ್ರಿ ತುಂಬಿದ ಕಾರು ಪತ್ತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts