More

    ಆರ್​ಸಿಬಿ ಸೋತ ಬೆನ್ನಲ್ಲೇ ಡಿವಿಲಿಯರ್ಸ್​ ಬಿಚ್ಚುಮಾತು! ಟೀಕಾಕಾರರ ಬಾಯಿ ಮುಚ್ಚಿಸಿದ ಮಿಸ್ಟರ್. 360

    ಅಹಮದಾಬಾದ್​: ನಿನ್ನೆ (ಮೇ.22) ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಮತ್ತು ಆರ್​ಆರ್​ ನಡುವಿನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಪಡೆ 4 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿ, ಕ್ವಾಲಿಫೈರ್​ 2 ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವನ್ನು ಎದುರಿಸಲು ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್​ನ ಗೆಲುವಿಗಿಂತಲೂ ಹೆಚ್ಚು ನಿರೀಕ್ಷೆಗಳು ಮೂಡಿದ್ದು ಆರ್​ಸಿಬಿ ತಂಡದ ಮೇಲೆ. ಇದು ಕೇವಲ ಆರ್​ಸಿಬಿ ಅಭಿಮಾನಿಗಳ ಆಶಯವಾಗಿರಲಿಲ್ಲ, ಬದಲಿಗೆ ಇತರೆ ತಂಡಗಳ ಫ್ಯಾನ್ಸ್​ಗಳದ್ದೂ ಆಗಿತ್ತು ಎಂಬುದು ಗಮನಾರ್ಹ.

    ಇದನ್ನೂ ಓದಿ: ಆರ್​ಸಿಬಿ ವಿಚಾರದಲ್ಲಿ ಯೂಟರ್ನ್​ ಹೊಡೆದ ಅಂಬಟಿ ರಾಯುಡು: ಕೊಹ್ಲಿಯನ್ನು ಟಾರ್ಗೆಟ್ ಮಾಡಿದ ರಾಯುಡು!

    ನಿರೀಕ್ಷೆಗಳು, ಆಶಯಗಳು ಅಂದುಕೊಂಡಂತೆ ನಡೆಯಲಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಸೋಲಿಗೆ ಶರಣಾಗುವ ಮೂಲಕ ಮತ್ತೊಮ್ಮೆ ಆರ್​ಸಿಬಿ ತನ್ನ ಟ್ರೋಫಿ ಕನಸನ್ನು ಮುಂದೂಡುವಂತಾಯಿತು. ಇದು ಚಾಲೆಂಜರ್ಸ್​​ ಅಭಿಮಾನಿಗಳಿಗೆ ಭಾರೀ ಅಘಾತದ ಜತೆಗೆ ಅತೀವ ನೋವನ್ನು ತಂದೊಡ್ಡಿದೆ. ಇನ್ನು ಆರ್​ಸಿಬಿ ಪಂದ್ಯ ಸೋಲುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಸ್​ಕೆಯ ಕೆಲವು ಅಭಿಮಾನಿಗಳು, ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಆಟಗಾರರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಪಹಾಸ್ಯ ಮಾಡಿದ್ದು, ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ.

    ಮೇ.18ರಂದು ಸಿಎಸ್​ಕೆ ವಿರುದ್ಧ ನಡೆದ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತು. ಅಂದಿನಿಂದಲೂ ಆರ್​ಸಿಬಿ ಸೋಲಿನ ಮೇಲೆ ಕಣ್ಣಿಟ್ಟಿದ್ದ ಸಿಎಸ್​ಕೆ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಪಡೆಯ ಫೋಟೋ ಹಿಡಿದು, ಅಸಭ್ಯವಾಗಿ ಕಮೆಂಟ್ ಮಾಡಿ, ವ್ಯಾಪಕವಾಗಿ ಟ್ರೋಲ್ ಮಾಡುತ್ತಿದ್ದಾರೆ. ಆರ್​ಸಿಬಿ ಸೋಲಿಗೆ ರಣಹದ್ದುವಿನಂತೆ ಕಾದು ಕುಳಿತ್ತಿದ್ದ ವಿರೋಧಿಗಳಿಗೆ ನಿನ್ನೆಯ ಸೋಲು ಹಾಲು ಕುಡಿದಷ್ಟು ಸಂತೋಷ ತಂದಿದೆ. ಇನ್ನು ಈ ಟೀಕೆಗಳಿಗೆ ಮಾಜಿ ಆಟಗಾರ ಎಬಿಡಿ ಕೊಟ್ಟ ತಿರುಗೇಟು ಸಖತ್ ಕೂಲ್ ಆಗಿದೆ.

    ಇದನ್ನೂ ಓದಿ: ನಾನು ಅವರಿಗಾಗಿಯೇ ಇನ್ನೂ ಮದುವೆಯಾಗುತ್ತಿಲ್ಲ.. ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ಪ್ರಭಾಸ್

    ಆರ್​ಸಿಬಿ ಸೋಲುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಎಬಿ ಡಿವಿಲಿಯರ್ಸ್ ಬೇಸರ ಹೊರಹಾಕಿದ್ದು, “ಪದೇ ಪದೇ ಸೋಲುವುದು ಒಂದು ನೋವಿನ ಸಂಗತಿ. ಆದರೆ ಒಬ್ಬ ಅಭಿಮಾನಿಯಾಗಿ ಹೇಳುವುದಾದರೆ, ನನಗೆ ಹೆಮ್ಮೆಯಿದೆ. ಆರಂಭದಲ್ಲಿ ನಮ್ಮ ಹುಡುಗರು ಎಲ್ಲಾ ಭರವಸೆ ಕಳೆದುಕೊಂಡರು ಸಹ ಆಶ್ಚರ್ಯಕರ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದ್ದು, ನಿಜಕ್ಕೂ ಸ್ಪೂರ್ತಿದಾಯಕ. ಮುಂದಿನ ವರ್ಷ ಆರ್​ಸಿಬಿ ಮತ್ತೆ ಬಲಿಷ್ಠವಾಗಿ ಹಿಂತಿರುಗಲಿದೆ ಹಾಗೂ ಈ ಸಲ ಕೈತಪ್ಪಿದ ಕಪ್​ ಅನ್ನು ಮುಂದಿನ ಬಾರಿ ಮನೆಗೆ ತರುತ್ತಾರೆ ಎಂಬ ಗ್ಯಾರಂಟಿ ನನಗಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಈ ಮಾತುಗಳು ಪರೋಕ್ಷವಾಗಿ ವಿರೋಧಿಗಳಿಗೆ ಹೇಳಲಾಗಿಲ್ಲ ಎಂದು ಅನಿಸಿದರೂ ಸಹ ಇದು ಅವರಿಗೆ ಮುಖಕ್ಕೆ ಹೊಡೆದಂತೆ ಎಬಿಡಿ ಹೇಳಿದ್ದಾರೆ. ಸರಿಯಾಗಿ ಹೇಳಿದ್ದೀರಾ ಮಿ.360. ನಮ್ಮವರು ಅವರಂತೆ ಸೋತು ಹೋಗಲಿಲ್ಲ. ಬದಲಿಗೆ ಅದ್ದೂರಿ ಐತಿಹಾಸಿಕ ಕಮ್​ಬ್ಯಾಕ್ ಮಾಡಿ ಬಂದಿದ್ದಾರೆ. ಮುಂದಿನ ಬಾರಿ ಖಂಡಿತ ಕಪ್ ನಮ್ಮದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

    ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts